ಹಣದ ಆಸೆಯನ್ನೇ ಬಂಡವಾಳ ಮಾಡಿಕೊಂಡು ಬಡ ಕುಟುಂಬದ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅವರನ್ನು ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ವೇಶ್ಯಾವಾಟಿಕೆ ಜಾಲವೊಂದನ್ನು ಬಳ್ಳಾರಿ ಪೊಲೀಸರು ಭೇದಿಸಿದ್ದಾರೆ.
ಈ ಜಾಲವು ಮಹಿಳೆಯರನ್ನು ಆಯ್ಕೆ ಮಾಡುವಾಗ ನಿರ್ದಿಷ್ಟ ಮಾನದಂಡಗಳನ್ನು ಹೊಂದಿತ್ತು.
ಸುಮಾರು 5 ಅಡಿ 6 ಇಂಚು ಎತ್ತರವಿರುವ, ದೇಹದ ಮೇಲೆ ಯಾವುದೇ ಗುರುತುಗಳು ಅಥವಾ ಕಲೆಗಳಿಲ್ಲದ ಅವಿವಾಹಿತ ಯುವತಿಯರ ಫೋಟೋಗಳನ್ನು ಅವರು ಕೇಳುತ್ತಿದ್ದರು.
ಸಾಮಾನ್ಯ ಫೋಟೋಗಳಲ್ಲದೆ, ಬಲಗೈ ಮತ್ತು ಬಲಗಾಲಿನ ಪ್ರತ್ಯೇಕ ಫೋಟೋಗಳನ್ನು ಕಳುಹಿಸುವಂತೆ ಆರೋಪಿಗಳು ಒತ್ತಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿಶೇಷ ಲಕ್ಷಣವಿರುವ ಯುವತಿಯರು ಲಕ್ಷ್ಮೀ ಪೂಜೆ ಮಾಡಿದರೆ 'ಹಣದ ಮಳೆ' ಸುರಿಯುತ್ತದೆ ಎಂದು ಸುಳ್ಳು ಕತೆ ಕಟ್ಟಿ ಬಡ ಹೆಣ್ಣುಮಕ್ಕಳ ಮನವೊಲಿಸುತ್ತಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ತಿಳಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.