ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೋಮವಾರ ಸಂಜೆ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪೈಲಟ್ ಸಮಯಪ್ರಜ್ಞೆಯಿಂದ ದುರಂತವೊಂದು ತಪ್ಪಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನವು ತಾಂತ್ರಿಕ ದೋಷದಿಂದ ಕೊನೆ ಕ್ಷಣದಲ್ಲಿ ಟೇಕ್ಆಫ್(ಹಾರಾಟ ಆರಂಭಿಸುವ ಪ್ರಕ್ರಿಯೆ) ಅನ್ನು ರದ್ದುಗೊಳಿಸಿದೆ.
ನಂತರ ವಿಮಾನವು ವಾಪಸ್ ನಿಲುಗಡೆ ತಾಣಕ್ಕೆ(ಬೇ) ಮರಳಿದೆ.
ತಾಂತ್ರಿಕ ತಪಾಸಣೆಗಾಗಿ ಅದನ್ನು 'ಏರ್ಕ್ರಾಫ್ಟ್ ಆನ್ ಗ್ರೌಂಡ್' (AOG-ಹಾರಾಟಕ್ಕೆ ಯೋಗ್ಯವಲ್ಲದ ಸ್ಥಿತಿ) ಎಂದು ಘೋಷಿಸಲಾಯಿತು ಎಂದು ವಿಮಾನ ನಿಲ್ದಾಣದ ಮೂಲಗಳು ಮಂಗಳವಾರ ತಿಳಿಸಿವೆ.
ಬಿಜೆಪಿ ನಾಯಕ ನಳಿನ್ ಕುಮಾರ್ ಕಟೀಲ್ ಸೇರಿದಂತೆ ವಿಮಾನದಲ್ಲಿದ್ದ 229 ಪ್ರಯಾಣಿಕರು ಮತ್ತು ಏಳು ಸಿಬ್ಬಂದಿ ಸುರಕ್ಷಿತವಾಗಿ ಕೆಳಗಿಳಿದಿದ್ದು, ಯಾರಿಗೂ ಯಾವುದೇ ಗಾಯಗಳಾಗಿಲ್ಲ. ವಿಡಿಯೋ ಇಲ್ಲಿದೆ ನೋಡಿ.