ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈನಿಂದ ಇಸ್ರೇಲ್‌ಗೆ ಪ್ರಯಾಣಿಸುತ್ತಿದ್ದ ವಾಣಿಜ್ಯ ವಿಮಾನ ಬುಧವಾರ ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ವಿಮಾನದ ವ್ಯವಸ್ಥೆಗಳನ್ನು ಹಾಳುಮಾಡಲು (ವಿಧ್ವಂಸಕ ಕೃತ್ಯ ನಡೆಸಲು) ಸಹ-ಪೈಲಟ್ ಯತ್ನಿಸಿದ್ದಾಗಿ ವರದಿಯಾಗಿದೆ.
ಈ ವೇಳೆ, ಸಹ-ಪೈಲಟ್‌ನ ಕೃತ್ಯದ ಪ್ರಯತ್ನವನ್ನು ತಡೆಗಟ್ಟಿದ್ದು 'ಫ್ಲೈದುಬೈ' (flydubai) ಸಂಸ್ಥೆಯ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಎಂದು ಗುರುತಿಸಲಾಗಿದೆ.
ವಿಧ್ವಂಸಕ ಕೃತ್ಯ ನಡೆಸಲು ಯತ್ನಿಸಿದ ಸಹ-ಪೈಲಟ್‌ನನ್ನು ಕ್ಯಾಪ್ಟನ್ ಮಚ್ಚಾರ್ ಎದುರಿಸಿ ತಡೆದರು ಮತ್ತು ದುಬೈ-ಟೆಲ್ ಅವಿವ್ ವಿಮಾನದಲ್ಲಿದ್ದ 180 ಪ್ರಯಾಣಿಕರ ಪ್ರಾಣವನ್ನು ಉಳಿಸಿದರು. ವಿಡಿಯೋ ಇಲ್ಲಿದೆ ನೋಡಿ.