ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರು ನವದೆಹಲಿಯಲ್ಲಿ ಭಾನುವಾರ ನಡೆದ 62ನೇ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಜೈಶಂಕರ್, ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆ, ಪೂರೈಕೆ ಸರಪಳಿಯ ಪುನಶ್ಚೇತನ ಮತ್ತು ಸಂಪರ್ಕ ವ್ಯವಸ್ಥೆ EMPs ನ ಪ್ರಮುಖ ಕಾರ್ಯಸೂಚಿಗಳಾಗಿವೆ.
'ಗ್ಲೋಬಲ್ ಸೌತ್' ಮತ್ತು 'ಗ್ಲೋಬಲ್ ನಾರ್ತ್' ಪ್ರದೇಶಗಳಿಗೆ ಸೇರಿದ ಉದಯೋನ್ಮುಖ ಮತ್ತು ಮಧ್ಯಮ ಶಕ್ತಿಗಳುEMPs, ಹೆಚ್ಚು ಪ್ರಸ್ತುತವಾಗುವ ಗುರಿಯೊಂದಿಗೆ ಒಂದಾಗಿವೆ ಎಂದು ತಿಳಿಸಿದರು.
ಜಗತ್ತು ಬದಲಾಗುತ್ತಿದೆ, ಅದರ ಕಾರ್ಯಸೂಚಿ ಮತ್ತು ಸ್ವರೂಪ ಬದಲಾಗುತ್ತಿದೆ ಹಾಗೂ ಈ ಶಕ್ತಿಗಳು ಪರಸ್ಪರ ಸಹಕರಿಸಲು ಗಣನೀಯ ಅವಕಾಶಗಳಿವೆ ಎಂದು ಅವರು ಪ್ರತಿಪಾದಿಸಿದರು. ವಿಡಿಯೋ ಇಲ್ಲಿದೆ ನೋಡಿ.