ರಾಜ್ಯ ಸರ್ಕಾರವು ರಾತ್ರಿ ವೇಳೆ ತಮಿಳುನಾಡಿಗೆ ಹೆಚ್ಚಿನ ಪ್ರಮಾಣದಲ್ಲಿ ಕಾವೇರಿ ನೀರನ್ನು ರಹಸ್ಯವಾಗಿ ಹರಿಸಿದೆ.
ಇದರಿಂದ ನಡುಗಡ್ಡೆಯಲ್ಲಿ ಸಿಲುಕಿದ ರೈತರ ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋಗುವುದನ್ನು ರಕ್ಷಿಸಿದ ಘಟನೆ ಕಳೆದ ರಾತ್ರಿ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಕೆಆರ್ ಎಸ್ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆ ಮಾಡಿ ಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋಗಿ ಅವುಗಳನ್ನು ನಾವು ರಕ್ಷಿಸಿ ದಡಕ್ಕೆ ಕರೆತಂದೆವು ಎಂದು ರೈತರು ಹೇಳುತ್ತಾರೆ.
ಏಕಾಏಕಿ ಈ ರೀತಿ ನೀರು ಬಿಡುತ್ತಾರೆ ಎಂದು ನಮಗೆ ಗೊತ್ತಿರಲಿಲ್ಲ, ಎಂದಿನಂತೆ ಸಣ್ಣ ಪ್ರಮಾಣದಲ್ಲಿ ನೀರು ಹರಿಯುತ್ತಿದೆ ಎಂದು ನಾವು ಜಾನುವಾರುಗಳನ್ನು ಬಿಟ್ಟೆವು.
ಏಕಾಏಕಿ ನೀರು ಹರಿದು ಬಂದಿದ್ದರಿಂದ ಜಾನುವಾರುಗಳಿಗೆ ತೊಂದರೆಯಾಯಿತು, ನಾವು 6 ಜಾನುವಾರುಗಳನ್ನು ಕಾಪಾಡಿದ್ದೇವೆ ಎಂದರು. ವಿಡಿಯೋ ಇಲ್ಲಿದೆ ನೋಡಿ.