ರಷ್ಯಾದ ಅಭಿವೃದ್ಧಿ ಮತ್ತು ತಂತ್ರಜ್ಞಾನವನ್ನು ಹಿನ್ನಲೆಯಾಗಿರಿಸಿಕೊಂಡು ರಷ್ಯಾದ ಭೂತ, ಭವಿಷ್ಯ ಮತ್ತು ವರ್ತಮಾನ ಅಂಡರ್ ಎಲೆಕ್ಟ್ರಿಕ್ ಕ್ಲೌಡ್ಸ್ ಚಿತ್ರ ಸಾಗುತ್ತದೆ. 2017ರ ರಷ್ಯಾದ ಕಲಾತ್ಮಕತೆ, ಸಾಂಸ್ಕೃತಿಕ ವೈಭವಗಳು ಅಭಿವೃದ್ಧಿ ಹೆಸರಲ್ಲಿ ಹೇಗೆ ಮರೆಯಾಗುತ್ತಿವೆ ಎಂಬುದನ್ನು ತೋರಿಸುವ ಪ್ರಯತ್ನವನ್ನು ನಿರ್ದೇಶಕರು ಈ ಚಿತ್ರದಲ್ಲಿ ಮಾಡಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಅಲೆಕ್ಸ್ ಜರ್ಮನ್ ಜೂನಿಯರ್ ನಿರ್ದೇಶಿಸಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ.