ಗ್ರೆನೆಡಿಯರ್ ಯೋಗೇಂದ್ರ ಸಿಂಗ್ ಯಾದವ್
ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಎದುರು ಹೋರಾಡಿದ್ದ ಯೋಧರ ಪೈಕಿ 4 ವರಿಗೆ ಪರಮವೀರ ಚಕ್ರ ಗೌರವ ದೊರೆತಿದ್ದು, ಈ ಪೈಕಿ 3 ವರಿಗೆ ಮರಣೋತ್ತರವಾಗಿ ಈ ಗೌರವ ಸಿಕ್ಕಿದೆ. ಪರಮವೀರ ಚಕ್ರ ಗೌರವವನ್ನು ಸ್ವೀಕರಿಸಿದ ಮತ್ತೋರ್ವ ಲಿವಿಂಗ್ ಲೆಜೆಂಡ್ ಯೋಧರೆಂದರೆ ಅದು ಗ್ರೆನೆಡಿಯರ್ ಯೋಗೇಂದ್ರ ಸಿಂಗ್ ಯಾದವ್.
ಯೋಗೇಂದ್ರ ಸಿಂಗ್ ಯಾದವ್ ಬದುಕುಳಿದು, ಪರಮವೀರ ಚಕ್ರ ಗೌರವವನ್ನು ಸ್ವೀಕರಿಸಿದರಾದರೂ, ಕಾರ್ಗಿಲ್ ಯುದ್ಧದಲ್ಲಿ ಅವರ ವೀರೋಚಿತ ಹೋರಾಟದ ಬಗ್ಗೆ ಕೇಳಿದರೆ ರೋಮಾಂಚನವಾಗುತ್ತದೆ. 20 ಗುಂಡುಗಳನ್ನು ದೇಹದ ಮೇಲೆ ಹೊಕ್ಕಿಸಿಕೊಂಡ ನಂತರವೂ ಏಕಾಂಗಿಯಾಗಿ ಪಾಕಿಸ್ತಾನದ ಸೇನೆಯನ್ನು ಹಿಮ್ಮೆಟ್ಟಿಸಿದ್ದ ಮಹಾ ಸೈನಿಕ ಯೋಧ ಗ್ರೆನೆಡಿಯರ್ ಯೋಗೇಂದ್ರ ಸಿಂಗ್ ಯಾದವ್.
ಟೈಗರ್ ಹಿಲ್ ಹತ್ತುವುದಕ್ಕೆ ಕಾಲರ್ ಎಂಬ ಕಡಿದಾದ ಜಾಗವಿತ್ತು. ಪಾಕಿಸ್ತಾನ ಸೈನಿಕರು ಮೇಲೆ ನಿಂತಿದ್ದಾರೆ. ಮೊದಲು ಗ್ರೆನೆಡಿಯರ್ ಯೋಗೇಂದ್ರ ಸಿಂಗ್ ಯಾದವ್ ಟೈಗರ್ ಹಿಲ್ 7 ಜನ ಯೋಧರೊಂದಿಗೆ ಹತ್ತುತ್ತಿರುತ್ತಾರೆ. 6 ಜನರನ್ನು ಮೇಲೆ ಕರೆದುಕೊಂಡಿದ್ದರು, 7 ನೇ ಯೋಧ ಗುಡ್ಡ ಹತ್ತಬೇಕು ಎನ್ನುವಷ್ಟರಲ್ಲಿ ಕಲ್ಲು ಜಾರಿ ಬೀಳುತ್ತೆ. ಸದ್ದು ಬಂದಾಗ ಮೇಲಿದ್ದ ಪಾಕಿಸ್ತಾನಿ ಸೈನಿಕರು ಎಚ್ಚರಗೊಳ್ಳುತ್ತಾರೆ. ದಾಳಿ ಪ್ರಾರಂಭವಾಯಿತು. 35 ಜನರ ಪೈಕಿ ಕೇವಲ 7 ಜನರು ಮಾತ್ರ ಮೇಲಿರುತ್ತಾರೆ. ಈ ಹಂತದಲ್ಲಿ ಮೇಲಿದ್ದವರು ಕೆಳಬರಲು ಸಾಧ್ಯವಾಗಲಿಲ್ಲ. 7 ಯೋಧರು ಗ್ರೆನೆಡಿಯರ್ ಯೋಗೇಂದ್ರ ಸಿಂಗ್ ಯಾದವ್ ನೇತೃತ್ವದಲ್ಲಿ ಪಾಕಿಸ್ತಾನ ಸೇನೆಯನ್ನು ಅಡ್ಡಗಟ್ಟಿ ನಿಂತರು ಬಂಕರ್ ನಿಂದ ಬರುತ್ತಿದ್ದ ದಾಳಿಯನ್ನು ತಡೆದರು. ಒಂದು ವರೆಗಳ ನಂಟರ ಬಂಕರ್ ನಲ್ಲಿದ್ದ ಪಾಕಿ ಯೋಧರನ್ನು ಕೊಂದು ಏಳೇ ಏಳು ಜನ ಭಾರತೀಯ ಯೋಧರು ಬಂಕರ್ ನ್ನು ವಶಪಡಿಸಿಕೊಂಡರು!.
ಈ ಏಳೂ ಜನ ಬಂಕರ್ ನಲ್ಲಿ ಹೋಗಿ ಕೂತರು, ಮತ್ತೆ ಪಾಕಿ ಯೋಧರು ತಮ್ಮಲ್ಲಿದ್ದ 10 ಜನರ ಭಾರತೀಯ ಯೋಧರ ವಿರುದ್ಧ ಹೋರಾಡಲು ಕಳಿಸಿದ್ದರು. 10 ಜನರಲ್ಲಿ 8 ಜನ ಪಾಕಿ ಯೋಧರನ್ನು ನಮ್ಮ ಭಾರತೀಯ ಸೇನೆಯ 7 ಯೋಧರು ಹತ್ಯೆ ಮಾಡಿದರು. ಉಳಿದ ಇಬ್ಬರು ಪಲಾಯನ ಮಾಡಿದ್ದರು!
ಗ್ರೆನೆಡಿಯರ್ ಯೋಗೇಂದ್ರ ಸಿಂಗ್ ಯಾದವ್ ತಂಡ ಪಾಕಿ ಯೋಧರನ್ನು ಹಿಮ್ಮೆಟ್ಟಿಸಿದ ಸಂತಸದಲ್ಲಿತ್ತು. ಆದರೆ ಗುಡ್ಡದ ಮೇಲಿರುವುದು ಕೇವಲ 7 ಜನ ಭಾರತೀಯ ಯೋಧರೆಂಬ ಮಾಹಿತಿ ಪಡೆದ ಪಾಕಿಸ್ತಾನದ 100 ಜನ ಯೋಧರು ದಾಳಿ ಮಾಡಿ ಮುಂದಾಗುತ್ತಾರೆ. 100 ಜನರನ್ನು ಎದುರಿಸಿದ್ದ 7 ಜನ ಭಾರತೀಯ ಯೋಧರು 30 ಪಾಕಿ ಯೋಧರನ್ನು ಹತ್ಯೆ ಮಾಡಿದ್ದರು. ಈ ಕಾದಾಟದಲ್ಲಿ ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಜೊತೆಗಿದ್ದ 6 ಜನ ಭಾರತೀಯ ಯೋಧರು ಸಾವನ್ನಪ್ಪಿದ್ದರು. ಬದುಕುಳಿದ್ದವರು ಅವರೊಬ್ಬರೇ. ಪಾಕಿಸ್ತಾನಿ ಯೋಧರ ಆಕ್ರಮಣ ತೀವ್ರವಾಗುತ್ತಿದ್ದಂತೆಯೇ ಅವರೂ ಸಹ ಸತ್ತಂತೆ ನಟಿಸಿದ್ದರು. ಪಾಕಿಸ್ತಾನದ ಯೋಧರು ಸತ್ತ ಯೋಧರ ಶವಗಳ ಮೇಲೆ ಮತ್ತೆ ದಾಳಿ ನಡೆಸಿದ್ದರು. ಯೋಗೇಂದ್ರ ಸಿಂಗ್ ಯಾದವ್ ಅವರ ಮೇಲೆ 15 ಗುಂಡುಗಳು ಹೊಕ್ಕಿದವು. ಇದ್ದ ಎಲ್ಲಾ ಶಸ್ತ್ರಗಳನ್ನು ಹೊತ್ತೊಯ್ದರು. ಆದರೆ ಗ್ರೆನೆಡಿಯರ್ ಯೋಗೇಂದ್ರ ಸಿಂಗ್ ಯಾದವ್ ಅವರ ಜೇಬಿನಲ್ಲಿದ್ದ ಗ್ರೆನೇಡ್ ಗಳನ್ನು ಮರೆತಿದ್ದರು. ಪರಿಸ್ಥಿತಿಯನ್ನು ಸದುಪಯೋಗಪಡಿಸಿಕೊಂಡ ಯೋಗೇಂದ್ರ ಸಿಂಗ್ ಯಾದವ್, ಜೇಬಿನಲ್ಲಿದ್ದ ಗ್ರೆನೇಡ್ ನ್ನು ತೆಗೆದು ಪಾಕಿ ಸೇನೆಯ ಮೇಲೆ ಎಸೆಯುತ್ತಾರೆ. ಬೆದರಿದ ಪಾಕಿ ಯೋಧರು ಭಾರತೀಯ ಸೇನೆ ಬಂದಿದೆ ಎಂದು ದಿಕ್ಕಾಪಾಲಾಗಿ ಓಡಿದರು. ಹೀಗೆ ಒಬ್ಬ ಯೋಗೇಂದ್ರ ಸಿಂಗ್ ಯಾದವ್ ಪಾಕಿ ಯೋಧರನ್ನು ಹಿಮ್ಮೆಟ್ಟಿಸಿ ಗುಡ್ಡವನ್ನು ವಶಪಡಿಸಿಕೊಂಡಿದ್ದರು.