ಮಹಿಳೆ-ಮನೆ-ಬದುಕು

ಬೇಕಿಂಗ್ ಬೇಕ್ರೀ...

ಬೇಕಿಂಗ್ ಇಂದು ರಂಜನೀಯ ಉದ್ಯೋಗ. ಗೃಹಿಣಿಯರು ಇದನ್ನು ಪಾರ್ಟ್‌ಟೈಮ್ ತರಬೇತಿಗಳಲ್ಲಿ ಕಲಿತು ಮನೆಯಲ್ಲಿ ಯತ್ನಿಸಿ ಸಖತ್ ಖುಷಿಪಡುವುದುಂಟು. ಬೇಕಿಂಗ್‌ನ ಹವ್ಯಾಸ ಮಾಡುತ್ತಿದ್ದವರಿಗೆ ಸಿಹಿಸುದ್ದಿ, ಬೇಕಿಂಗ್‌ನಿಂದ ಒತ್ತಡ ನೀಗುತ್ತದೆ, ಇನ್ನು ಬೇಕಿಂಗ್ ಅನ್ನು ಉದ್ಯೋಗವನ್ನಾಗಿ ಆಯ್ಕೆ ಮಾಡಿಕೊಳ್ಳುವವರಿಗಂತೂ ಲಾಭದೊಂದಿಗೆ ಹವ್ಯಾಸ- ಮನೋಲ್ಲಾಸ ಎಲ್ಲವೂ ಆಗುತ್ತದೆ. ಬೇಕಿಂಗ್ ಗೃಹವಿಜ್ಞಾನದಲ್ಲಿನ ವಿಶಿಷ್ಟ ಕಲೆ. ಬೇಕಿಂಗ್‌ನಲ್ಲಿ ಕೈಗಳು ವಿಶೇಷವಾದ ರೀತಿಯಲ್ಲಿ ಚಲಿಸಬೇಕಾಗಿರುವುದರಿಂದ ಕೀಲುಗಳಿಗೆ ವ್ಯಾಯಾಮ ಸಿಗುತ್ತದೆ.
ಜ್ಞಾನೇಂದ್ರಿಯ ತಂಪು
ಓವನ್‌ನಲ್ಲಿ ಯಾವುದೇ ಚಾಕೊಲೇಟ್ ಕುಕೀಸ್ ಬೇಕಿಂಗ್ ಮಾಡಿ ಅಥವಾ ಆಗ ತಾನೆ ಮಾಡಿದ ತಾಜಾ ಬನಾನಾ ಬ್ರೆಡ್ ಸುವಾಸನೆ ಸವಿಯುವುದು ಇವೆಲ್ಲ ತಕ್ಷಣದ ಸುವಾಸನೆಯ ಥೆರಪಿಯ ರೀತಿಯಲ್ಲಿ ಕೆಲಸ ಮಾಡುತ್ತದೆ. ನಿಮಗಿಷ್ಟವಾದ ಸ್ವಾದಿಷ್ಟ ರುಚಿಯುಳ್ಳ ಬೇಕಿಂಗ್ ತಿಂಡಿ ತಯಾರಿಸುವುದು ವಿಶಿಷ್ಟ ಸುವಾಸನೆಗಳನ್ನು ಹೊರಹಾಕುತ್ತದೆ, ಇದು ನಿಮ್ಮ ಬಾಲ್ಯಕ್ಕೆ ಕೊಂಡೊಯ್ಯುವುದರಲ್ಲಿ ಅಚ್ಚರಿ ಇಲ್ಲ.
ಆ್ಯಕ್ಟಿವ್ ಆಗಿರಿ
ಸ್ಪರ್ಶ, ಆಲಿಸುವಿಕೆ, ದೃಷ್ಟಿ ಮತ್ತು ರುಚಿಯ ಪ್ರಜ್ಞೆಯನ್ನು ಕ್ರಿಯಾಶೀಲಗೊಳಿಸಿ ಅಳತೆ ಪ್ರಮಾಣದಂತೆ ಹಿಟ್ಟು ಕಲೆಸುವುದು, ಪದಾರ್ಥಗಳ ಆಯ್ಕೆ, ತುಲನಾತ್ಮಕವಾಗಿ ಬಳಸಿ ರುಚಿಗಾಗಿ ಕೆಲಸ ಬದಲಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಒತ್ತಡ ನೀಗುತ್ತದೆ.
ತಿಂದು ಎಂಜಾಯ್ ಮಾಡಿ
ನಿತ್ಯದ ಭೋಜನದ ನಡುವೆ ನೀವೇ ತಯಾರಿಸಿದ ಬೇಕಿಂಗ್ ತಿನಿಸನ್ನು ಕುಟುಂಬದವರಿಗೆಲ್ಲ ಬಡಿಸಿ, ನೀವು ಎಂಜಾಯ್ ಮಾಡಬಹುದು. ನಿಮ್ಮ ಕೈರುಚಿಯಲ್ಲಿ ಅರಳಿ ಅಂತಿಮ ಸ್ವರೂಪ ಪಡೆದ ಇಂಥ ಹೊಸ ತಿನಿಸನ್ನು ಸೇವಿಸುವಾಗ ನಿಮಗೆ ಗರಿಷ್ಠ ತೃಪ್ತಿಯೂ ಲಭಿಸುತ್ತದೆ.
ಸಮಯ ಸಂಪತ್ತು
ಸಂಗಾತಿ ಮತ್ತು ಕುಟುಂಬದವರೊಂದಿಗೆ ಸಂಜೆಯ ವೇಳೆಯಲ್ಲಿ ಟೀ ಸವಿಯುವ ಸಮಯಕ್ಕೊಂದು ನೀವೇ ತಯಾರಿಸಿದ ಬೇಕಿಂಗ್ ತಿನಿಸು ಇದ್ದರೆ ಎಷ್ಟು ಚೆನ್ನ. ಅಂದಿನ ಚಹಾ ಸಮಯವನ್ನೇ ಅದು ರಂಗೇರಿಸುವುದರಲ್ಲಿ ಸಂಶಯವಿಲ್ಲ. ಅಪರೂಪಕ್ಕೆ ಭೇಟಿ ಮಾಡುವ ಕಿಟ್ಟಿಪಾರ್ಟಿ ಗೆಳತಿಯರಿಗಂತೂ ಇದೆಲ್ಲ ಅಚ್ಚರಿಯ ಔತಣವೇ ಆಗಿರುತ್ತದೆ. ಬೇಕ್ ಮಾಡಿ, ಬೇಕ್ ಮಾಡಿದ ತಿನಿಸನ್ನು ಮಿತ್ರರೊಂದಿಗೆ ಸವಿದು ನೋಡಿ.
ದಿನಚರಿ ಆಚೆಗೆ
ನಿತ್ಯದ ಮಾಮೂಲಿ ರೂಟಿನ್‌ನಿಂದ ಬಿಡಿಸಿಕೊಳ್ಳಲು ಬೇಕಿಂಗ್ ಅಡುಗೆ ಒಳ್ಳೇ ಉಪಾಯ. ಬೇಕಿಂಗ್‌ನ ವಿವಿಧ ಹಂತಗಳಾದ ಕಲಕುವುದು, ಸುರಿಯುವುದು, ಗಾರ್ನಿಶಿಂಗ್ ಮತ್ತು ಬಡಿಸುವಿಕೆ ಎಲ್ಲದಕ್ಕೂ ಒಂದು ಶ್ರಮ ರಹಿತ ಮನಸ್ಸು ಮಾತನಾಡಬೇಕು. ಅಳತೆ ಹೆಚ್ಚುಕಡಿಮೆಯಾಗದಂತೆ, ತೂಕ ಸರಿಯಾದ ಪ್ರಮಾಣದಲ್ಲಿರುವಂತೆ ಮಾಡಲು ನಿಮಗೆ ಬೇಕಿಂಗ್‌ಗಿಂತ ಇತರೆ ಸೂತ್ರ ಕೆಲಸ ಮಾಡದು. ಹೀಗೆ ಬೇಕಿಂಗ್ ಮಾಡುವಾಗ ಮನಸ್ಸು ನಿಮ್ಮನ್ನು ನಿಮ್ಮ ತಿನಿಸಿನ ಸುತ್ತವೇ ಇರುತ್ತದೆ. ಒತ್ತಡಗಳು ಕೈಜಾರಿ ಮರೆತುಹೋಗುವ ಅವಕಾಶಗಳೂ ಹೆಚ್ಚು.
ಫಿಟ್ ಅಂಡ್ ಫೈನ್
ಡ್ರೈ ಫ್ರೂಟ್ಸ್‌ನಿಂದಲೇ ತಯಾರಿಸಬಹುದಾದ ಸಾವಿರಾರು ರೆಸಿಪಿಗಳು ಆನ್‌ಲೈನ್‌ನಲ್ಲಿ ಲಭ್ಯವಿರುತ್ತವೆ. ತೂಕದ ನಿಯಂತ್ರಣಕ್ಕೆ ಸಹಾಯಕವಾಗುವಂತೆ ಜಿರೋ ಕ್ಯಾಲರಿ ಇರುವ ಕುಕಿಸ್ ಕೂಡ ಸವಿಯಬಹುದು. ಹೀಗೆ ಬೇಕು ಬೇಕಾದಾಗಲೆಲ್ಲ ಬೇಕಿಂಗ್ ಮಾಡಿ ಮನೋಲ್ಲಾಸದಿಂದ ಇರಬಹುದು.

= ನಳಿನ ಡಿ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!

SIR ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೆವೆ: ರಾಜಕೀಯ, ಜನಸಾಮಾನ್ಯರ ಪ್ರತಿರೋಧಕ್ಕೇ ಜಯ': ರಾಹುಲ್ ಗಾಂಧಿ

‘ಸಿದ್ದರಾಮಯ್ಯಗೆ CD ತೋರಿಸಿ ರಾಜೀನಾಮೆ ಪಡೆದಿದ್ದಾರೆ’: ಯತ್ನಾಳ್​ ಸ್ಫೋಟಕ ಆರೋಪ

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!