ಮಹಿಳೆ-ಮನೆ-ಬದುಕು

ಸೊರೊಳಗೆ ಹಸಿರು

ಹಿಂದಿನ ರಾಜಮಹಾರಾಜರ ಕಾಲದಲ್ಲಿ, ವಿಕ್ಟೋರಿಯಾ ರಾಣಿಯ ಯುಗದಲ್ಲಿ ಮಾತ್ರವಲ್ಲ ಈಗಲೂ ಮನೆಯೊಳಗಿನ...

ಹಿಂದಿನ ರಾಜಮಹಾರಾಜರ ಕಾಲದಲ್ಲಿ, ವಿಕ್ಟೋರಿಯಾ ರಾಣಿಯ ಯುಗದಲ್ಲಿ ಮಾತ್ರವಲ್ಲ ಈಗಲೂ ಮನೆಯೊಳಗಿನ ಸೌಂದರ್ಯ ವೃದ್ಧಿಗೆ ಗಿಡ- ಬಳ್ಳಿಗಳ ಬಳಕೆ ಇದ್ದಿದ್ದೇ. ಇಂಡೋರ್ ಗಾರ್ಡನಿಂಗ್ ಈಗ ಹೆಚ್ಚು ಚಾಲ್ತಿಯಲ್ಲಿರುವ ಫ್ಯಾಶನ್. ಮನೆಯೊಳಗೆ ಗಿಡಗಳಿದ್ದರೆ ಎಲ್ಲರಿಗೂ ಒಳಿತು. ಸಾಮಾನ್ಯ ಗಿಡಗಳ ಜತೆಗೆ ಬೋನ್ಸಾಯ್ ಹಾಗೂ ನೀರಿನಲ್ಲಿ ಬೆಳೆಸಬಹುದಾದ ಗಿಡಗಳನ್ನೂ ಬೆಳೆಸಬಹುದು.
ಒಂದೆಡೆ ಹತ್ತಾರು ಕುಂಡಗಳನ್ನು ಇಟ್ಟು ಅದರಲ್ಲಿ ಗಿಡಗಳನ್ನು ಬೆಳೆಸಬಹುದು ಅಥವಾ ದೊಡ್ಡ ಕುಂಡಗಳಲ್ಲಿ ಅಥವಾ ಗೋಡೆಯಲ್ಲಿ ಜಾಗ ಬಿಟ್ಟು ಅಲ್ಲಿ ಅಲಂಕಾರಿಕ ಸಸಿ ನೆಡಬಹುದು. ಹೀಗೆ ತಮಗೆ ಬೇಕಾದ ಹಾಗೆ ಮನೆಯೊಳಗಿನ ಅಂದವನ್ನು ಹೆಚ್ಚಿಸಬಹುದು.
2-3 ಗಂಟೆ ಬಿಸಿಲು ಅಗತ್ಯ
ಪ್ರತಿ ಗಿಡಕ್ಕೆ ಗಾಳಿ, ನೀರು, ಬಿಸಿಲು ಅತಿಮುಖ್ಯ. ಅದು ಇಂಡೋರ್ ಅಥವಾ ಔಟ್‌ಡೋರ್ ಆಗಿದ್ದರೂ ಸರಿ. ಹಾಗಾಗಿ ಇಂಡೋರ್ ಪ್ಲಾಂಟ್ ಎಂಬ ಕಾರಣಕ್ಕೆ ಬಿಸಿಲು ಬೇಡ ಎಂದು ನಿರ್ಲಕ್ಷಿಸಿದಲ್ಲಿ ಸಸಿ ಹಾಳಾಗುತ್ತದೆ. ಹಾಗಾಗಿ ನಿತ್ಯ ಗಿಡವನ್ನು ಒಂದೆರಡು ಗಂಟೆ ಬಿಸಿಲಿನಲ್ಲಿಟ್ಟರೆ ಆರೋಗ್ಯಕರವಾಗಿರುತ್ತದೆ. ಕೊನೆಪಕ್ಷ ನಿತ್ಯ ಅಲ್ಲದಿದ್ದರೂ ಆಗಾಗ ಬಿಸಿಲಿಗೆ ಇಟ್ಟು ಮತ್ತೆ ಒಳಗೆ ಇಟ್ಟರೆ ಒಳ್ಳೆಯದು.
ನೂರಾರು ಸಸಿಗಳು
ಈ ಇಂಡೋರ್ ಪ್ಲಾಂಟ್‌ನಲ್ಲಿ ಫೈಕಸ್, ಫಾಮ್ಸ್, ಬ್ರಸೀನಾ, ಫೈಲಂ ಸೇರಿದಂತೆ ನೂರಾರು ವಿಧಗಳಿವೆ. ಆದರೆ, ಮನೆಗೆ ಸೂಕ್ತವಾಗಿ ಹೊಂದುವ ಹಾಗೂ ಹೆಚ್ಚು ದಿನ ಜೀವಂತವಾಗಿರುವ ಗಿಡಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಚಾಣಾಕ್ಷತನ ಬೇಕು. ಇಲ್ಲವಾದಲ್ಲಿ ನರ್ಸರಿಯವರು ಯಾವುದೋ ಸಸಿ ತೋರಿಸಿ, ಅದು ಇಂಡೋರ್ ಪ್ಲಾಂಟ್ ಎಂದು ಏಮಾರಿಸುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಮನೆಗೆ ತೆಗೆದುಕೊಂಡು ಹೋದ ನಂತರ ಅವುಗಳ ನಿರ್ವಹಣೆ ಬಗ್ಗೆ ಹೆಚ್ಚು ಒತ್ತು ನೀಡಿ. ಇಲ್ಲವಾದಲ್ಲಿ ಸಸಿ ಬೇಗ ಒಣಗಬಹುದು.
ಎಲ್ಲಾದರೂ ಇಡಬಹುದು...
ಇಂಡೋರ್ ಪ್ಲಾಂಟ್ ಎಂದರೆ ಕೆಲವರು ಗಿಡವನ್ನು ಎಲ್ಲೆಂದರಲ್ಲಿ ಇಡುತ್ತಾರೆ. ಅದನ್ನು ಮನೆಯ ಒಳಗೆ ಯಾವ ಜಾಗದಲ್ಲಾದರೂ ಇಡಬಹುದು. ಆದರೆ, ಕಿಟಕಿ ಅಥವಾ ಬಾಗಿಲಿನಿಂದ ಕೊಂಚ ಬಿಸಿಲು ಗಿಡದ ಮೇಲೆ ಬಿದ್ದರೆ ಒಳ್ಳೆಯದು. ಗಿಡಕ್ಕೆ ಬಿಸಿಲು ತಾಗದಿದ್ದರೆ ನೀರು ಕಡಿಮೆ ಹಾಕಬೇಕು. ಹೆಚ್ಚು ನೀರು ಹಾಕಿದಲ್ಲಿ ತೇವಾಂಶ ಹೆಚ್ಚಾಗಿ ಗಿಡ ಒಣಗುತ್ತದೆ.
ಬೋನ್ಸಾಯ್ ಗಿಡವೂ ಉಂಟು
ಇಂಡೋರ್ ಪ್ಲಾಂಟ್‌ನಲ್ಲಿ ವಿವಿಧ ರೀತಿಯ ಸಸ್ಯ ವರ್ಗವಿದೆ. ಆದರೆ, ಬೋನ್ಸಾಯ್ ಗಿಡವನ್ನೂ ಇಂಡೋರ್ ಪ್ಲಾಂಟ್ ಆಗಿ ಬಳಸಲಾಗುತ್ತದೆ. ಬೇರೆ ಗಿಡಗಳಿಗಿಂತ ಈ ಬೋನ್ಸಾಯ್ ಗಿಡಗಳು ಮನೆಗೆ ಹೆಚ್ಚು ಆಕರ್ಷಕ. ಜೊತೆಗೆ ಅಂದವನ್ನು ಹೆಚ್ಚಿಸುತ್ತವೆ. ಸೆಮಿ ಕಾಸ್ಕಡೆ, ಬ್ರೂಮ್ ಸ್ಟೈಲ್, ಡಬಲ್‌ಟ್ರ್ಯಾಂಕ್ ಸ್ಟೈಲ್, ರಫ್ಟ್ ಸ್ಟೈಲ್, ಕ್ಲಂಪ್, ಫಾರೆಸ್ಟ್, ಲಿಟರಟಿ, ವೀಪಿಂಗ್, ಸೈಕಲ್, ಬ್ಯಾನಿಯನ್, ಅರೇಲಿಯಾ ಸೇರಿದಂತೆ ಇದರಲ್ಲೂ ಹತ್ತಾರು ವರ್ಗಗಳಿವೆ. ಮನೆಯ ಅಂದ ಹೆಚ್ಚಿಸುವ ಈ ಗಿಡವನ್ನೂ ಆಯ್ಕೆ ಮಾಡಿಕೊಳ್ಳಬಹುದು.
ನೋ ಎಸಿ
ಇಂಡೋರ್ ಪ್ಲಾಂಟ್ ಅನ್ನು ಹವಾನಿಯಂತ್ರಿತ ರೂಮಿನಲ್ಲಿಡಬಾರದು. ತೇವಾಂಶ ಹೆಚ್ಚಾಗಿ ಗಿಡ ಒಣಗುತ್ತದೆ. ಹಾಗಾಗಿ ಮನೆಯ ಯಾವುದೇ ಭಾಗದಲ್ಲಿ ಇಡಬಹುದು. ಆಗಾಗ (4 ತಿಂಗಳಿಗೆ) ಗೊಬ್ಬರ ಹಾಕಬೇಕು. ಮೇಲಿಂದ ಮೇಲೆ ಗೊಬ್ಬರ ಹಾಕಿದರೂ ಗಿಡ ಒಣಗುತ್ತದೆ. ಜತೆಗೆ ಮಣ್ಣು ಬದಲಿಸಿದರೆ ಒಳಿತು. ಅಗತ್ಯಬಿದ್ದಲ್ಲಿ ಅಡುಗೆಮನೆಯಲ್ಲೂ ಇಡಬಹುದು. ಹೀಗೆ ವಿವಿಧ ರೀತಿಯಲ್ಲಿ ತಮಗೆ ಬೇಕಾದಂತೆ ಗಿಡಗಳನ್ನು ಜೋಡಿಸಿ ಮನೆಯ ಅಂದ ಹೆಚ್ಚಿಸಬಹುದು. ಅಗತ್ಯಬಿದ್ದಲ್ಲಿ ಗಾರ್ಡನ್ ಬ್ಯುಟಿಕ್ ಸದಸ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.



ಕೆಲವು ಸ್ಯಾಂಪಲ್
ಸಿನೆರಾರಿಯಾಸ್, ಕ್ರೈಸಾಂಥಮಸ್, ಸೈಕ್ಲೋಮನ್, ಅಜಾಲಿಯಾಸ್‌ನಂಥ ನೂರಾರು ಗಿಡಗಳು ಮನೆಯ ಒಳಾಂಗಣದ ಅಂದ ಹೆಚ್ಚಿಸುತ್ತವೆ. ಆದರೆ, ಹೂ ಬಿಟ್ಟ ನಂತರ ಆ ಗಿಡಗಳು ನೋಡಲು ಅಷ್ಟು ಸುಂದರವಾಗಿರುವುದಿಲ್ಲ. ಹಾಗಾಗಿ ಹೆಚ್ಚಿನ ಮಂದಿ ಅವುಗಳನ್ನು ಬಳಸುವುದಿಲ್ಲ. ಬದಲಾಗಿ ಹೂ ಬಿಡದ ಸಸ್ಯಗಳನ್ನು ಬಳಸುತ್ತಾರೆ.  

ಇವು ಮಸ್ಟ್

    ಮನೆಯೊಳಗೆ ಸೂಕ್ತ ಸ್ಥಳ
    ಉತ್ತಮ ವಾತಾವರಣ
    ಉತ್ತಮ ಗಿಡದ ಆಯ್ಕೆ
    ವಿವಿಧ ಬಣ್ಣ, ಆಕಾರ/ಉತ್ತಮ ಪಾಟ್ ಆಯ್ಕೆ
    ಕುಂಡದಲ್ಲಿ ಗಿಡದ ಬುಡಕ್ಕೆ ಸಣ್ಣ ಸಣ್ಣ ಕಲ್ಲುಗಳಿಂದ ಅಲಂಕಾರ
    ಹೂಕುಂಡದ ಮೇಲೆ ಚಿತ್ತಾರ
    ಪ್ಲಾಸ್ಟಿಕ್‌ಗಿಂತ ಮಣ್ಣಿನ ಕುಂಡ ಒಳಿತು.

- ಶಾಂತಾ


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT