ಮಹಿಳೆ-ಮನೆ-ಬದುಕು

ಮಳೆಯೇ ಮೊದಲ ಪಾಠ ಶಾಲೆ

ಬಿಸಿಲ ಧಗೆಯಲ್ಲೂ ಮೈ ನವಿರೇಳಿಸುವ ಆ ತುಂಬುಗಾಳಿಯ ಬಲೆಗೆ ಬಿದ್ದೊಡನೆ ನಿನ್ನ್ನದೇ ನೆನಪು. ಗಾಳಿಯನ್ನು ಬಂಟನಂತೆ ಮುಂದೆ ಕಳಿಸಿ ಹಿಂದೆ ನೀನು ಬಂದೇ ಬರುತ್ತೀಯಾ ಎಂಬ ಆತ್ಮವಿಶ್ವಾಸ ನನಗೆ. ನಿನ್ನ್ನ ನೆನಪಲ್ಲೇ ದಿನ ದೂಡುವ ನನಗೆ ನಿನ್ನ್ನ ನೆನೆದಾಗಲೆಲ್ಲ ಜೀವ ನೀಡುವ ಬದುಕಿಗೆ ಸಾಂತ್ವನ ಹೇಳುವ ತಂಪಿನ ಅನುಭವ. ನಾ ಹುಟ್ಟಿದ ಮೇಲೆ ನನ್ನ್ನ ನೀ ತಬ್ಬಿಕೊಂಡ ಆ ಅಪೂರ್ವ ಕ್ಷಣ ನಾನೆಂದಿಗೂ ಮರೆಯಲು ಸಾಧ್ಯವಿಲ್ಲ. ಅದೇ ಇಂದು ನನ್ನ ಬದುಕಿನೆಡೆಗೆ ಜೀವ ತುಂಬಿದ್ದು. ಈ ಯುಗಾದಿ ಮುಗಿದ ಮೇಲೆ ಮಗುವಿಗೆ ನಾನು ತಾಯಿಯಾಗುತ್ತಿದ್ದೇನೆ. ಇದು ನನ್ನ ಮೊದಲ ತಾಯ್ತನದ ಅನುಭವ.
ನೀನು ಇಲ್ಲವೆಂದಿದ್ದರೆ ಈ ಇಡೀ ಜಗತ್ತೇ ಶೂನ್ಯವಾಗಿರುತ್ತಿತ್ತು. ಜಗಕೊಂದು ಹೊಸಬೆಳಕು, ಹೊಸ ಹುರುಪು ನಿನ್ನಿಂದ. ನಿನ್ನ್ನ ಬರುವಿಕೆಯ ದಾರ್ನಿ ಕಾದಿರುವ ಅದೆಷ್ಟೋ ಜನರಿಗೆ ನಿರಾಸೆಯಾಗಿರಬಹುದು, ಆದರೆ ನನ್ನೊಳಗೆ ಮಾತ್ರ ನೀನು ಸದಾ ನಾನು ಬಯಸಿದ ಸಮಯಕ್ಕೆ ಬಂದು ನನ್ನ್ನ ಆಲಂಗಿಸಿ ನನ್ನ್ನೊಡಲಲ್ಲ್ನಿ ಚಿಗುರೊಡೆದು, ನಾನು ಚೊಚ್ಚಲ ಗರ್ಭಿಣಿ ಎಂದೆನಿಸಿಕೊಂಡಾಗ ನನ್ನ್ನ ಆ ಮೊದಲ ಸಂಭ್ರಮಕ್ಕೆ ಪಾರವೇ ಇಲ್ಲ. ನನ್ನ್ನ ನೋಡಿದ ಅಕ್ಕ ಪಕ್ಕದವರೆಲ್ಲ ಕಣ್ಣರಳಿಸಿದ್ದೇ ಅರಳಿಸಿದ್ದು. ನಾನು ಇಂದಿಗೂ ಸುಂದರವಾಗಿ ನೀಳಕಾಯದ ಚೆಲುವಾಗಿ ಎಲ್ಲರ ಗಮನ ಸೆಳೆಯುತ್ತಿದ್ದೇನೆ. ನನ್ನ್ನ ಬಗ್ಗೆ ನನಗೇ ಹೆಮ್ಮೆ ಎನಿಸುವಷ್ಟರ ಮಟ್ಟಿಗೆ ನೀನು ನೀಡಿದ ಜೀವ ನನ್ನ್ನಲ್ಲಿ ಮರುಜೀವ ನೀಡುತ್ತಿದೆ. ಇಷ್ಟು ಸಾಕಲ್ಲವೇ ನನ್ನ್ನ ಬದುಕಿನ ಸಾರ್ಥಕತೆಗೆ, ನನ್ನ್ನ ನಿನ್ನ ಪ್ರಕೃತ್ನಿ ಪ್ರೇಮದ ಸಾಕ್ಷಿಗೆ.
ನನ್ನನ್ನ್ನು ತಮ್ಮ ಮನೆಗೆ ಎಳೆದೊಯ್ಯಲು ಹವಣಿಸಿದರು. ಆದರೆ ನಾನು ಜಗ್ಗಲಿಲ್ಲ. ನಿನ್ನನ್ನ್ನು ಬಿಟ್ಟು ಅದಾರದೋ ಮನೆಯ ಅಂಗಳದಲ್ಲಿ ಹೋಗಿ ನಿಂತು ಅವರು ಕೊಟ್ಟಷ್ಟೇ ನೀರನ್ನ್ನು ಕುಡಿದು ಬದುಕುವುದು ನನ್ನಿಂದ ಸಾಧ್ಯವಿರಲಿಲ್ಲ. ಆದ್ದರಿಂದ ಅವರು ಜಗ್ಗಾಡಿದರೂ ನಾನು ನಿಶ್ಚಲನಾದೆ.
ನೀನು ನನ್ನನ್ನ್ನು ನೋಡಿ ನಾಲ್ಕು ತಿಂಗಳುಗಳೇ ಕಳೆದಿರಬಹುದು, ನನಗೆ ನಿನ್ನ ನೋಡಬೇಕೆಂಬ ಮ್ನೈ ಸೇರಿಸಿ ಹುಚ್ಚೆದ್ದು ಕುಣಿಯಬೇಕೆಂಬ ಆಸ್ನೆ ತಡೆ ಹಿಡಿದಿಟ್ಟಾಗಲೂ ಅದೇನೋ ಪುಳಕ. ನಾನು ಅದೆಷ್ಟು ಬಿಸಿಯೇರಿ ನಿಂತರೂ ನೀನು ಬಂದ್ನು ದಾಹ ತಣಿಸುವೆ ಎಂಬ ಅಚಲ ನಂಬಿಕೆ. ನಿನ್ನ ತಮ್ಮ 'ಮಂಜು' ಬಂದು ನನ್ನ್ನ ಆರೋಗ್ಯ ವಿಚಾರಿಸಿಕೊಂಡು ಹೋದಾಗಲೆಲ್ಲ ನಿನ್ನ್ನದೇ ಆವೃತ್ತಿ. ನೀನಿಲ್ಲದ ಕ್ಷಣ ಮೈ ಇಡೀ ಬಾಡಿ ಬಸವಳಿದು ಸೋತು ಹೋಗುತ್ತೇನೆ. ಕಂಡೂ ಕಾಣದಂತೆ ನನ್ನ್ನೆಲ್ಲ ನೋವ್ನ ಮರೆಮಾಚಲೆತ್ನಿಸಿ, ನೀನಿಲ್ಲದೇ ಬಾಡಿದ ಮುಖ ನನ್ನ್ನದು ಎಂದು ತೋರಿಸಿಕೊಳ್ಳುವ ಗೋಜಿಗೇ ಹೋಗುವುದಿಲ್ಲ. ನನಗೆ ಬೇರೆಯವರ ಅನುಕಂಪದ ಹನಿ ಬೇಕಿಲ್ಲ. ನೀ ಬರುವ ದಾರಿ ಕಾಯುವುದೇ ನನ್ನ ಪ್ರವೃತ್ತಿ.
ಕಳೆದ ಋತುವಿನಲ್ಲಿ ನಿನ್ನ್ನ ಪ್ರೀತಿಯ ಚುಂಬನದಲ್ಲಿ ನಿನ್ನ್ನೊಳಗೆ ನಾ ಇಳಿದಿದ್ದರ ಪರಿಣಾಮವಾಗಿ ನಾನಿಂದು ಗರ್ಭಿಣಿಯಾಗಿದ್ದೇನೆ. ಅದರ ಸುಖಾನುಭವವ ನೆನೆದರೆ ನೀನಿರದ ಕ್ಷಣ ಯಾವುದೂ ಇಲ್ಲ ಎಂದೆನಿಸುತ್ತದೆ. ನೀ ಬಿತ್ತಿದ ಬೆಳೆ ನನ್ನೊಡಲಲ್ಲಿ ನಿಂತು ಮತ್ತೆ ನಿನ್ನನ್ನೇ ನೆನೆಯುತ್ತಿದೆ. ಅದಕ್ಕೂ ನಿನ್ನ್ನ ಆಸರೆಯಲ್ಲದೇ ಇನ್ನ್ನಾರು ದಿಕ್ಕು? ಅದು ಪಿಳಿಪಿಳನೆ ಕಣ್ಣರಳಿಸಲು ನೀನು ಬರಲೇಬೇಕಿದೆ. ನೀ ಬರದೇ ಬದುಕಲಾರದು. ಮಮತೆಯ ಪ್ರೀತಿಯ ಮೊದಲ ಸಿಂಚನಕ್ಕಾಗಿ ಅದು ಕಾದಿದೆ. ನಿನ್ನ್ನ ಬರುವಿಕೆಯ ಪರಿಮಳದ ಜಾಡು ಅದಕ್ಕಿಲ್ಲ. ನಿನ್ನ ಪ್ರೀತಿಯ ಆಳವನ್ನೂ ಅದು ಅರಿತಿಲ್ಲ. ನೀ ಬಂದು ತಂಪಾಗಿಸಿ, ನಿನ್ನ್ನ ಕಂದನ ಮುಖ ಅರಳಿಸು. ಮಳೆ ಬಂದರೆ ತಾನೆ ಎಲ್ಲ ಸಸಿಗಳು, ಮರಗಳು ಬದುಕಲು ಸಾಧ್ಯ.
ಮಳೆಯ ಅಮೃತ ಸಿಂಚನಕ್ಕಾಗಿ ಕಾದಿರುವ ಇಂತಿ ನಿನ್ನ್ನ ಪ್ರೀತಿಯ ಮರ. ನೀನು ಬಂದು ನನ್ನ್ನ ದಾಹವನ್ನ್ನು ತೀರಿಸುವೆಯೆಂಬ ನಂಬಿಕೆಯಲ್ಲಿ, ಋತುಮಾನವೇ ಬೇಗ ಕರೆದು ತಾ ನನ್ನ್ನ ಗೆಳೆಯ ಮಳೆಯ. ಇದೋ ತಂಗಾಳಿಯ ಶಬ್ದ ನನ್ನೊಡಲನ್ನು ಹಾದು ಹೋಗುತ್ತಿದೆ. ನಿನ್ನ್ನ ಆಗಮನ ಸದ್ಯದಲ್ಲೇ ಆಗಲಿದೆ ನನ್ನ್ನ ಮುಖದಲ್ಲಿಯ ಹರ್ಷ ನಿಮಗೂ ಕಾಣುತ್ತಿದೆಯೇ?


= ವಿನುತಾ ಹೆಗಡೆ
vntvnk@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"

'ನೀನು ಭಯೋತ್ಪಾದಕ ಇಲ್ಲಿಂದ ಹೋಗು': ಅಮೆರಿಕದಲ್ಲಿ Nobel ಯೂನಸ್ ವಿರುದ್ಧ ಬಾಂಗ್ಲಾ ವಲಸಿಗರಿಂದ ಘೋಷಣೆ, Video

ಮುಖ್ಯ ಚುನಾವಣಾ ಆಯುಕ್ತರಿಗೆ ಪದ್ಮ ಪ್ರಶಸ್ತಿಗಳೇ ಲಂಚ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ಫೋಟಕ ಹೇಳಿಕೆ