ಸಾಂದರ್ಭಿಕ ಚಿತ್ರ 
ಮಹಿಳೆ-ಮನೆ-ಬದುಕು

ಮಕ್ಕಳ ಜೊತೆ ನೀವೂ ಮಕ್ಕಳಾಗಿಬಿಡಿ

ಕಳೆದು ಹೋದ ಬಾಲ್ಯ, ಕಳೆದ ಸಮಯ ಎಂದಿಗೂ ವಾಪಸ್ ಬರುವುದಿಲ್ಲ. ಪೋಷಕರೇ ಮಕ್ಕಳನ್ನು ಮಕ್ಕಳಾಗಿ ಇರಲು ಬಿಡಿ. ಮಕ್ಕಳಿಗೆ ಉತ್ತಮ ಪೋಷಕರಾಗುವುದು ಒಂದು ಕಲೆ. ಉತ್ತಮ ಪೋಷಕತ್ವಕ್ಕೆ ಯಾವುದೇ ....

ಮಕ್ಕಳಿಗೆ ಉತ್ತಮ ಪೋಷಕರಾಗುವುದು ಒಂದು ಕಲೆ. ಉತ್ತಮ ಪೋಷಕತ್ವಕ್ಕೆ ಯಾವುದೇ ತರಭೇತಿ ಎಂಬುದಿಲ್ಲ. ಬಾಲ್ಯ ಎಂಬುದು ನಾವು ಬದುಕಿರುವವರೆಗೂ ನಮ್ಮ ನೆನಪಿನ ಬತ್ತಿಯಲ್ಲಿ ಇರುತ್ತದೆ. ದಿನನಿತ್ಯದ ಅನುಭವಗಳಿಂದಲೇ ನಾವು ಹೆಚ್ಚು ಕಲಿಯುತ್ತೇವೆ. ಎಲ್ಲಾ ತಂದೆತಾಯಿಗಳು ತಮ್ಮ ಮಕ್ಕಳಿಗೆ ಉತ್ತಮ ಪೋಷಕರಾಗಲು ಬಯಸುತ್ತಾರೆ. ಮಕ್ಕಳ-ತಂದೆತಾಯಿಯರ ನಡುವೆ ಉತ್ತಮ ಬಾಂಧವ್ಯ ಬೆಳೆಯಲು ಇಲ್ಲಿವೆ ಕೆಲವು ಟಿಪ್ಸ್.

ಮಕ್ಕಳು ತಂದೆತಾಯಿಗೆ ಅಮೂಲ್ಯವಾದ ಆಸ್ತಿ. ಉತ್ತಮ ಹಾಗೂ ಒಳ್ಳೆಯ ಪೋಷಕತ್ವ ಎಂಬುದು ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಮಕ್ಕಳ ಜೊತೆಗಿನ ಬಾಂಧವ್ಯ, ಮಕ್ಕಳ ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸುತ್ತದೆ.

ನಿಮ್ಮ ಮಕ್ಕಳು ಯಾವಾಗಲೂ ಚಿಕ್ಕವರಾಗಿಯೇ ಇರುವುದಿಲ್ಲ. ಕಣ್ಣ ಮುಂದೆ ನೋಡ ನೋಡುತ್ತಲೇ ವೇಗವಾಗಿ ಬೆಳೆದು ದೊಡ್ಡವರಾಗಿಬಿಡುತ್ತಾರೆ. ಆದ್ದರಿಂದ ಮಕ್ಕಳು ಚಿಕ್ಕವರಿರುವಾಗ ಅವರ ಜೊತೆ ಹೆಚ್ಚಿನ ಸಮಯ ಕಳೆಯಿರಿ. ಅಪರಿಮಿತವಾಗಿ ಪ್ರೀತಿ ನೀಡಿ. ಕೆಲವೊಂದು ಸಮಯದ ವರೆಗೆ ಮಾತ್ರ ಮಕ್ಕಳನ್ನು ನೀವು ಮುದ್ದಿಸಲು, ರಮಿಸಲು ಸಾಧ್ಯ. ಬೆಳೆದು ವಯಸ್ಸಿಗೆ ಬಂದ ನಂತರ ಮಕ್ಕಳು ಅವರ ಜೀವನದಲ್ಲಿ ತುಂಬಾ ಬ್ಯೂಸಿಯಾಗಿಬಿಡುತ್ತಾರೆ. ಮಕ್ಕಳ ಪ್ರತಿ ವಯಸ್ಸಲ್ಲೂ ಒಂದು ಒಳ್ಳೆಯ ನೆನಪುಗಳನ್ನು ಕೊಡಿ. ನೀವು ಎಷ್ಟು ಪ್ರೀತಿ ಮಾಡುತ್ತೀರಿ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಿ.

ನಿಮ್ಮ ಮಕ್ಕಳು ಅವರ ಸ್ನೇಹಿತರ ಮನೆಗೆ ಹೋಗುವುದಾಗಿ ಹೇಳಿದಾಗ, ಬೇಡ ಎಂದು ಹೇಳಿ ಅವರಿಗೆ ಬೇಸರ ಮಾಡಬೇಡಿ. ನೀವು ಚಿಕ್ಕವರಿದ್ದಾಗ ನಿಮ್ಮ ಸ್ನೇಹಿತರ ಜೊತೆಗೂಡಿ  ನೀವು ಏನೆಲ್ಲಾ ಮಾಡಿದ್ದಿರಿ ಎಂಬುದನ್ನು ಕೊಂಚ ನೆನಪಿಸಿಕೊಳ್ಳಿ. ಮಕ್ಕಳ ಮೇಲೆ ನಿಮ್ಮ ಅತಿಯಾದ ನಿರ್ಬಂಧ ಹೇರಬೇಡಿ. ಅವರ ದೃಷ್ಟಿಕೋನಗಳಿಂದಲೂ ಸ್ವಲ್ಪ ಯೋಚನೆ ಮಾಡಿ.

ಮಕ್ಕಳಿಗೆ ಒಳ್ಳೆಯ ಆಹಾರ ಪದ್ಧತಿ ಅಭ್ಯಾಸ ಮಾಡಿಸಿ. ಚಿಕ್ಕ ವಯಸ್ಸಿನಲ್ಲೇ ಉತ್ತಮ ಹಾಗೂ ಒಳ್ಳೆಯ ಆಹಾರಗಳನ್ನು ನೀಡಿದರೇ ದೊಡ್ಡವರಾದ ಮೇಲೂ ಅದೇ ಅಭ್ಯಾಸ ಮುಂದುವರಿಯುತ್ತದೆ. ನಿಮ್ಮ ಮಕ್ಕಳು ಆರೋಗ್ಯ ವಂತರಾಗಿರುತ್ತಾರೆ.


ಕೆಲವು ಕುಟುಂಬಗಳಲ್ಲಿ ಇದು ಮಾಮೂಲಿ ಸಮಸ್ಯೆಯಾಗಿದೆ. ಮಕ್ಕಳು ಮಲಗಿದ ಮೇಲೆ ತಂದೆ ಮನೆಗೆ ಬರುವುದು. ಬೆಳಗ್ಗೆ ಮಕ್ಕಳು  ಶಾಲೆಗೆ ಹೋದ ಮೇಲೆ ಅಪ್ಪ ಏಳುವುದು ದಿನಚರಿಯಾಗಿರುತ್ತದೆ. ಈ ಪರಿಸ್ಥಿತಿ ಅನಿವಾರ್ಯ ಎಂದಾಗ. ವಾರದಲ್ಲಿ ಒಂದು ಎರಡು ದಿನವಾದರೂ ಮನೆಯವರೆಲ್ಲರೂ ಒಟ್ಟುಗೂಡಿ ಊಟ ಮಾಡಿ. ಮಕ್ಕಳೊಂದಿಗೆ ಕೆಲ ಸಮಯ ವ್ಯಯಿಸಿ. ಸಂಜೆ ವೇಳೆ ಮಕ್ಕಳ  ಜೊತೆ ಕೆಲ ಸಮಯ ಕಳೆಯಿರಿ. ಹೀಗೆ ಮಾಡುವುದರಿಂದ ಮಕ್ಕಳು ಮತ್ತು ನಿಮ್ಮ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳುತ್ತದೆ.

ನಿಮ್ಮ ಮಕ್ಕಳ ಕೆಲಸವನ್ನು ಅವರೇ ಮಾಡಿಕೊಳ್ಳಲು ಬಿಡಿ. ಕೆಲವು ಪೋಷಕರು ಮಕ್ಕಳ ಮೇಲಿನ ಅತಿ ಪ್ರೀತಿಯಿಂದ ಎಲ್ಲಾ ಕೆಲಸವನ್ನು ಮಾಡಿಕೊಡುತ್ತಾರೆ. ಇದು ಮಕ್ಕಳು ದೊಡ್ಡವರಾದ ಮೇಲೆ ಅವರಿಗೆ ಸಮಸ್ಯೆಯಾಗಿ ಬಿಡುತ್ತದೆ.ಹೀಗಾಗಿ ಮಕ್ಕಳು ಸ್ವಾವಲಂಬಿಗಳಾಗಿ ಬೆಳೆಯಲು ಬಿಡಿ. ಕೆಲ ಪೋಷಕರು ಮಕ್ಕಳ ಹೋಮ್ ವರ್ಕ್ ಅನ್ನು ತಾವೇ ಮಾಡಿಕೊಡುತ್ತಾರೆ. ಹೀಗೆ ಮಾಡುವುದು ತಪ್ಪು. ಮಕ್ಕಳಿಗೆ ಕೆಲವೊಂದು ಸಣ್ಣಪುಟ್ಟ ಕೆಲಸ ಮಾಡುವುದನ್ನು ಹೇಳಿಕೊಡಿ. ನಿಮಗೆ ಅಡುಗೆ ಮನೆಯಲ್ಲಿ ಕೆಲಸ ಮಾಡಲು ಸಹಾಯ ಮಾಡಲು ಹೇಳಿಕೊಡಿ. ನಿಮ್ಮ ಮಕ್ಕಳಿಗೆ ನೀವೇ ರೋಲ್ ಮಾಡೆಲ್. ಹೀಗಾಗಿ ಪೋಷಕರು ಸದಾ ಒಳ್ಳೆಯದನ್ನೇ ಹೇಳಿಕೊಡಬೇಕು. ಒಳ್ಳೆಯ ರೀತಿಯಲ್ಲೇ ನಡೆದುಕೊಳ್ಳಬೇಕು.

ಕಳೆದು ಹೋದ ಬಾಲ್ಯ, ಕಳೆದ ಸಮಯ ಎಂದಿಗೂ ವಾಪಸ್ ಬರುವುದಿಲ್ಲ. ಹೀಗಾಗಿ ಪೋಷಕರೇ ಮಕ್ಕಳನ್ನು ಮಕ್ಕಳಾಗಿ ಇರಲು ಬಿಡಿ...

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT