ಸಾಂದರ್ಭಿಕ ಚಿತ್ರ 
ಮಹಿಳೆ-ಮನೆ-ಬದುಕು

ಅಮ್ಮಂದಿರೇ, ಮಕ್ಕಳಿಗೆ ಫಾಸ್ಟ್ ಫುಡ್ ಗಳನ್ನು ನೀಡುವ ಮುನ್ನ ಒಮ್ಮೆ ಯೋಚಿಸಿ!

ಕೇವಲ ಸಂಜೆಯ ತಿಂಡಿಗೆ ಮಾತ್ರವಲ್ಲ, ವಾರಾಂತ್ಯವನ್ನು ಮಜವಾಗಿ ಕಳೆಯುವುದು ಎಂದರೆ ಹೋಟೆಲ್ ಇಲ್ಲವೇ ರೆಸ್ಟೋರೆಂಟ್‎ಗಳಿಗೆ ಹೋಗಿ ಪಿಜ್ಜಾ, ಬರ್ಗರ್, ಫ್ರೆಂಚ್ ಫ್ರೈಸ್, ಚೈನೀಸ್ ಆಹಾರಗಳು

ನೌಕರಿಗೆ ಹೋಗುವ ಬಹುತೇಕ ಅಮ್ಮಂದಿರಿಗೆ ಶಾಲೆಯಿಂದ ಮನೆಗೆ ಬಂದ ಮಕ್ಕಳಿಗೆ ಸಂಜೆ ತಿಂಡಿ ಮಾಡಲು ಸಮಯವಿರುವುದಿಲ್ಲ. ಹಿಂದೆ ಆದರೆ ಬಹುತೇಕ ಮಹಿಳೆಯರು ಮನೆಯಲ್ಲೇ ಇರುತ್ತಿದ್ದರೂ, ಕೆಲಸ ಕಾರ್ಯಗಳಿಗೆ ಹೋಗುತ್ತಿರಲಿಲ್ಲ. ಶಾಲೆಯಿಂದ ಮನೆಗೆ ಬಂದ  ತಕ್ಷಣಕ್ಕೆ ಮಕ್ಕಳಿಗೆ ಮನೆಯಲ್ಲೇ ತಯಾರಿಸಿ ತಿಂಡಿಗಳನ್ನು ನೀಡುತ್ತಿದ್ದರು. ಈಗ ಸದ್ಯ ಅದೆಲ್ಲಕ್ಕೂ ಯಾವುದೇ ಸಮಯವಿಲ್ಲ. ಹೀಗಾಗಿ ಶೇ,90 ರಷ್ಟು ಮಹಿಳೆಯರು ತಮ್ಮಮಕ್ಕಳಿಗಾಗಿ ಫಾಸ್ಟ್ ಫುಡ್ ಮೊರೆ ಹೋಗುತ್ತಾರೆ.

ಫಾಸ್ಟ್ ಫುಡ್ ತಿನ್ನುವುದು ಆ ಸಮಯಕ್ಕೆ ಚೆನ್ನಾಗಿರುತ್ತೆ. ಯಾವಾಗಲೊ ಅಪರೂಪಕ್ಕೊಮ್ಮೆ ಜಂಕ್ ಫುಡ್ ಫಾಸ್ಟ್ ಫುಡ್ ತಿನ್ನುವುದು ಅಷ್ಟೊಂದು ಕೆಟ್ಟ ಪರಿಣಾಮ ಬೀರುವುದಿಲ್ಲ. ಆದರೇ, ದಿನನಿತ್ಯ ಇದೇ ಫಾಸ್ಟ್ ಫುಡ್ ಗೆ ಒಗ್ಗಿ ಹೋದರೇ ಮುಂದಿನ ಅನಾಹುತಗಳು ಕಟ್ಟಿಟ್ಟ ಬುತ್ತಿ.

ಕೇವಲ ಸಂಜೆಯ ತಿಂಡಿಗೆ ಮಾತ್ರವಲ್ಲ, ವಾರಾಂತ್ಯವನ್ನು ಮಜವಾಗಿ ಕಳೆಯುವುದು ಎಂದರೆ ಹೋಟೆಲ್ ಇಲ್ಲವೇ ರೆಸ್ಟೋರೆಂಟ್‎ಗಳಿಗೆ ಹೋಗಿ ಪಿಜ್ಜಾ, ಬರ್ಗರ್, ಫ್ರೆಂಚ್ ಫ್ರೈಸ್, ಚೈನೀಸ್ ಆಹಾರಗಳು ಇವೇ ಮೊದಲಾದ ಫಾಸ್ಟ್ ಫುಡ್‎‌ಗಳನ್ನು ಗಡದ್ದಾಗಿ ತಿಂದು ಬರುವುದು ಎಂದಾಗಿದೆ.  

ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರೂ ಕೂಡ ಫಾಸ್ಟ್ ಫುಡ್ ಚಟಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಆದರೆ ಆರೋಗ್ಯದ ವಿಷಯದಲ್ಲಿ ಫಾಸ್ಟ್ ಫುಡ್‌‎‌‌ನಷ್ಟು ಅಪಾಯಕಾರಿ ಅಂಶಗಳು ಬೇರೊಂದಿಲ್ಲ ಎಂಬುದು ವೈದ್ಯಲೋಕದ ಅಭಿಪ್ರಾಯವಾಗಿದೆ.

ಫಾಸ್ಟ್ ಫುಡ್ ಸೇವನೆಯಿಂದ ಮಕ್ಕಳ ಮೆದುಳಿನ ವೇಗ ಕಡಿಮೆ ಆಗಬಹುದು ಮತ್ತು ಅವರ ಶೈಕ್ಷಣಿಕ ಪ್ರಗತಿಯಲ್ಲಿ ಕುಂಠಿತವಾಗುವ ಸಾಧ್ಯತೆಯಿದೆ. ಫಾಸ್ಟ್ ಫುಡ್ ಅತಿಯಾಗಿ ಸೇವಿಸುವ ಮಕ್ಕಳ ಮೇಲೆ ಸಂಶೋಧನೆ ಮಾಡಿ ವರದಿ ಸಿದ್ದ ಪಡಿಸಲಾಗಿದೆ. ಈ ಮಕ್ಕಳು ಗಣಿತ ಪರೀಕ್ಷೆಯಲ್ಲಿ, ವಿಜ್ಞಾನ ಮತ್ತು ಓದುವುದರಲ್ಲೂ ಕಡಿಮೆ ಅಂಕ ಪಡೆದಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಫಾಸ್ಟ್ ಫುಡ್ ಸೇವನೆ ಮೆದುಳಿನ ವೇಗವನ್ನು ಕುಂಠಿತಗೊಳಿಸುವ ಜತೆಗೆ ಮಕ್ಕಳ ಶೈಕ್ಷಣಿಕ ಪ್ರಗತಿ ಮೇಲೂ ಪರಿಣಾಮ ಬೀರುತ್ತಿದೆ ಎಂಬುದು ತಿಳಿದುಬಂದಿದೆ. ಪರೀಕ್ಷೆಯಲ್ಲಿ ದಿನವೂ ಫಾಸ್ಟ್ ಫುಡ್ ತಿನ್ನುವ ಮಕ್ಕಳು 79% ಅಂಕ ಗಳಿಸಿದರೆ, ಫಾಸ್ಟ್ ಫುಡ್ ತಿನ್ನದ ಮಕ್ಕಳು 83% ಅಂಕ ಗಳಿಸಿದರು. ಫಾಸ್ಟ್ ಫುಡ್​ನಲ್ಲಿ ಕಬ್ಬಿಣದಂಶದ ಪ್ರಮಾಣ ಕಡಿಮೆ ಇರುವುದರಿಂದ ಮಕ್ಕಳ ಮೆದುಳಿನ ವೇಗದ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೂ ಸ್ಥೂಲ ಕಾಯಕ್ಕೂ ಕಾರಣವಾಗಲಿದೆ.

ಸಮಯದ ಅಭಾವವೊ, ಬಾಯಿ ಚಪಲವೊ, ಸೋಮಾರಿತನವೊ, ಯಾವುದೊ ಒಂದು ಕಾರಣಕ್ಕೆ ನೀವು ಫಾಸ್ಟ್ ಫುಡ್ ತಿನ್ನುವ  ಹವ್ಯಾಸ ಮಾಡಿಕೊಂಡರೇ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಫಾಸ್ಟ್ ಫುಡ್ ತಿನ್ನು ಹಾಗೂ ಮಕ್ಕಳಿಗೆ ಕೊಡುವ ಮುನ್ನ ಕೊಂಚ ಯೋಚಿಸಿ.


ಶಿಲ್ಪ.ಡಿ. ಚಕ್ಕೆರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT