ಮಹಿಳೆ-ಮನೆ-ಬದುಕು

ಶ್ವಾನ ಸೂರು

ಹಾಗಾಗಿಯೇ ಬಹುತೇಕರು ನಾಯಿಗಳನ್ನೂ ಮಕ್ಕಳಂತೆಯೇ ನೋಡಿಕೊಳ್ಳುತ್ತಾರೆ. ಹಾಗಂತ ಅವುಗಳನ್ನು ನಿಮ್ಮ ಬೆಡ್‍ರೂಂನಲ್ಲೇ ಮಲಗಿಸುವಂತಿಲ್ಲ. ಕಾರಣ ರೋಗದ ಭಯ. ಜೊತೆಗೆ ಸ್ವಚ್ಛತೆಯನ್ನು ಹಾಳು ಮಾಡುತ್ತದೆ ಎಂಬ ಭಯ. ಅದಕ್ಕಾಗಿ ಕೆಲವರು ಪ್ರತ್ಯೇಕ ಶ್ವಾನದ ಮನೆಯನ್ನೂ ಕಟ್ಟಲು ಬಯಸುತ್ತಾರೆ. ಇದು ಕೂಡ ತಮ್ಮ ಸ್ವಂತ ಮನೆಯಷ್ಟೇ ಸುಂದರವಾಗಿರಬೇಕೆಂಬುದು ಅವರ ಬಯಕೆ!

ಸಾಮಾನ್ಯವಾಗಿ ಶ್ವಾನದ ಮನೆ ಎಂದ ಕೂಡಲೇ ಬಹುತೇಕರಲ್ಲಿ `ದುಬಾರಿ' ಎನ್ನುವ ಭಾವನೆ ಇದೆ. ಆದರೆ, ಅದು ತೀರ ಖರ್ಚಿನ ಸಂಗತಿಯೇನಲ್ಲ. ನಮ್ಮಲ್ಲಿ ಶ್ವಾನಕ್ಕಾಗಿಯೇ ಪ್ರತ್ಯೇಕ ಮನೆ ಕಟ್ಟುವ ಸಂಪ್ರದಾಯ ಜಾಸ್ತಿ ಇಲ್ಲ. ಮಾರುಕಟ್ಟೆಯಲ್ಲೂ ಇಂಥ ಮನೆ ಸಿಗುವುದು ಅಪರೂಪ. ಅಲ್ಲೋ, ಇಲ್ಲೋ ಕಣ್ಣಿಗೆ ಬಿದ್ದರೆ ಕೆಲವರು ಕೊಂಡುಕೊಳ್ಳುವುದುಂಟು. ಆದರೆ, ಈ ರೆಡಿಮೇಡ್ ಮನೆಗಳ ಬೆಲೆ ಕೊಂಚ ಜಾಸ್ತಿನೇ.

ಶ್ವಾನದ ಮನೆಯನ್ನು ನಾವೇ ನಿರ್ಮಿಸಿಕೊಳ್ಳಬಹುದಾ?
ಹೌದು. ಶ್ವಾನಕ್ಕೊಂದು ಸ್ವಂತ ಸೂರನ್ನು ನಾವೇ ನಿರ್ಮಿಸಿಕೊಡಬಹುದು. ಶ್ವಾನದ ಮನೆಯನ್ನು ಹೊರಗಿನಿಂದಲೇ, ದುಬಾರಿ ಹಣ ಕೊಟ್ಟು ತರಬೇಕೆಂದೇನೂ ಇಲ್ಲ. ನಾವು ಬಯಸಿದಂತೆ, ನಮಗೆ ಬೇಕಾದ ಆಕಾರದಲ್ಲೂ ಶ್ವಾನದ ಮನೆಯನ್ನು ನಿರ್ಮಿಸಿಕೊಳ್ಳಬಹುದು. ಇದಕ್ಕೆ ತಗಲುವ ವೆಚ್ಚ ಕೂಡ ಕಡಿಮೆ. ಹಳೆಯ ಮರದ ತುಂಡುಗಳು, ಫ್ಲೈವುಡ್, ಒಂದಷ್ಟು ಮೊಳೆಗಳು ಇದ್ದರೆ ಸಾಕು.

ನಿಮಗೆ ಬೇಕಾದ ಆಕೃತಿಯ, ನಿಮಗೆ ಬೇಕಾದ ರೀತಿಯ ಶ್ವಾನದ ಮನೆಕಟ್ಟಬಹುದು. ಈ ಕುರಿತು http://www.wikihow.com/Make-a-Doghouse ಈ ವೆಬ್‍ಸೈಟ್ ನೋಡಿ.

ಮನೆ ಹೇಗಿರಬೇಕು?

  • ನೀವು ಮನೆ ಕಟ್ಟುವುದು ನಿಮ್ಮ ಅನುಕೂಲಕ್ಕೆ ತಕ್ಕಂತೆ ಇರುತ್ತೆ. ಅದೇ ರೀತಿ ಶ್ವಾನದ ಮನೆಗಳೂ ನಿಮ್ಮ ಪ್ರೀತಿಪಾತ್ರ ನಾಯಿಯ ಅನುಕೂಲಕ್ಕೆ, ಅವಶ್ಯಕತೆಗೆ ತಕ್ಕಂತಿರಬೇಕು.
  • ಆ ಮನೆಯಲ್ಲಿ ನಿಮ್ಮ ನಾಯಿಗೆ ಮೈ, ಕಾಲು ಚಾಚಿ ಮಲಗುವಷ್ಟು ಜಾಗವಿರಬೇಕು.
  • ನಿಮ್ಮ ನಾಯಿಗಿಂತ ಎತ್ತರವಾಗಿರಬೇಕು.
  • ಕೆಲವರು ಇಂಥ ಶ್ವಾನದ ಮನೆಗಳಿಗೆ ಬಾಗಿಲು ಮಾಡಿಸುವುದೂ ಉಂಟು. ಆದರೆ, ನಾಯಿಗಳು ಇತರೆ ಪ್ರಾಣಿಗಳಂಥಲ್ಲ. ಅವು ಸದಾ ಜನರ ನಡುವಿರಲು ಬಯುಸುತ್ತವೆ. ಹಾಗಾಗಿ ಆ ರೀತಿ ಬಾಗಿಲುಗಳನ್ನು ಮಮಾಡಿದಾಗ ಕನಿಷ್ಠ ಅವುಗಳಿಗೆ ತಲೆ ಹೊರಹಾಕುವಷ್ಟಾದರೂ ಜಾಗ ಇಟ್ಟಿರಬೇಕು.
  • ಗಾಳಿಯಾಡಲು ಕಿಟಕಿ ಇದ್ದರೆ ಚೆನ್ನ.
  • ಶ್ವಾನದ ಮನೆ ಅಂದವಾಗಿರಬೇಕೆಂದೇನೂ ಇಲ್ಲ. ಆದರೆ, ಅವು ಅಂದವಾಗಿದ್ದರೆ ನಿಮ್ಮ ಮನೆಗೂ ಒಂದು ಶೋಭೆ ಎನ್ನುವುದು ನೆನಪಿರಲಿ.
ಶುಚಿತ್ವ ಹೇಗೆ?
SCROLL FOR NEXT