ಲೇಖನಗಳು

ಮನೆಯಲ್ಲೇ ಸೌಂದರ್ಯ ವರ್ಧಕ

ಅಲಂಕಾರವೆಂದರೆಮುಖದ ತುಂಬ ಅಲಂಕಾರ ಸಾಮಗ್ರಿಗಳನ್ನು ಬಳಸಿ ಬಣ್ಣಬಣ್ಣದ ಬೆಲೆಬಾಳುವ ಉಡುಗೆ ತೊಡುಗೆ ಹಾಕಿಕೊಂಡು,ಆಭರಣಗಳನ್ನು ಹೊರೆ ಹೊರೆಧರಿಸುವುದೆಂದಲ್ಲ. ಚೆಲುವು, ಸೌಂದರ್ಯದೈವದತ್ತವಾಗಿ ಬರುವ ಕೊಡುಗೆ, ಶುಭ್ರವಾದಸ್ವಚ್ಛವಾದ, ಕಾಂತಿಯುತವಾದಮುಖವಿರುವವರನ್ನು ಅತ್ಯಂತ ಸುಂದರಿಯರೆಂದು ಸಾಮಾನ್ಯವಾಗಿಯೇ ಹೇಳಲಾಗುತ್ತದೆ.

ಮುಖ ಸೌಂದರ್ಯದಅಂದವನ್ನು ಕಾಪಾಡಿಕೊಳ್ಳಬೇಕು. ಅದರಲ್ಲೂ ಇಪ್ಪತ್ತು ವರ್ಷಗಳಾದ ನಂತರ ಮಹಿಳೆಯರ ಮುಖ ಕಾಂತಿಕುಂದುವ ಸಾಧ್ಯತೆಗಳುಂಟು. ಮನಸ್ಸಿನ ಒತ್ತಡ, ಸಂಸಾರದ ಒತ್ತಡ, ಹೊರಗಿನ ಬಿಸಿಲು,ಗಾಳಿ, ಚಳಿ, ಮಳೆಯ ಒತ್ತಡ ಇವುಗಳಿಂದ ಚರ್ಮದ ಕಾಂತಿ ಮಾಸಿ ಬಹುಬೇಗ ಮುಪ್ಪದಂತೆ ಕಾಣುವಂತೆ ಮಾಡುತ್ತದೆ.ಕಾಂತಿಹೀನವಾಗುತ್ತದೆ. ಅದರಲ್ಲೂ ಹೊರಗೆ ದುಡಿಯುವ ಹೆಣ್ಣಂತೂ ಇದರ ಬಗ್ಗೆ ಆಸಕ್ತಿ ವಹಿಸಬೇಕು.ವಾರಕ್ಕೊಂದು ಬಾರಿಯಾದರೂ ಒಂದು ಗಂಟೆಯ ಕಾಲ ಮುಖಮಾರ್ಚನೆಗಾಗಿ ಉಪಯೋಗಿಸಿಕೊಂಡಲ್ಲಿ ಮುಖಚರ್ಮದಲ್ಲಿ ಸುಕ್ಕು ಕಾಣದ ಸ್ವಚ್ಛ, ನಿರ್ಮಲ ಕಾಂತಿಯುತಮುಖಾರವಿಂದವನ್ನು ಹೊಂದಬಹುದು. 

ಸೌಂದರ್ಯವನ್ನುಕಾಪಾಡಿಕೊಳ್ಳುವ ಸಲುವಾಗಿ ಅಥವಾ ಹೆಚ್ಚಿಸಿಕೊಳ್ಳುವ ಸಲುವಾಗಿ ಮಹಿಳೆಯರು ಅನೇಕ ರೀತಿಯ ಹೊರಗಡೆಸಿಗುವಂತಹ ರಾಸಾಯನಿಕ ವಸ್ತುಗಳನ್ನು ಬಳಸುತ್ತಿದ್ದಾರೆ. ಆದರೆ ಈ ರಾಸಾಯನಿಕ ಸೌಂದರ್ಯವರ್ಧಕಗಳುಕ್ಷಣಿಕ ಫಲಿತಾಂಶ ನೀಡುವ ವಸ್ತುಗಳಷ್ಟೇ. ಕ್ಷಣಿಕ ಸುಖಕ್ಕಾಗಿ ಜೀವನ ಪರ್ಯಂತ ದೇವರು ಕೊಟ್ಟನೈಸರ್ಗಿಕ ಸೌಂದರ್ಯಗಳನ್ನು ಈ ವಸ್ತುಗಳಬಳಕೆಯಿಂದ ನಮ್ಮ ಕೈಯಿಂದ ನಾವೇ ಹಾಳುಮಾಡಿಕೊಳ್ಳುತ್ತಿದ್ದೇವೆ.

ಏನಿದು ಹೀಗೆಹೇಳುತ್ತಿದ್ದೀರಾ...ಹಾಗಾದರೆ ಸೌಂದರ್ಯ ಹಚ್ಚಿಸಿಕೊಳ್ಳಲು, ಕಾಪಾಡಿಕೊಳ್ಳಲು ಸೌಂದರ್ಯವರ್ಧಕಗಳನ್ನೇ ಬಳಸಬಾರದೇಎಂದು ಕೇಳಬಹುದು...ಇದಕ್ಕೆ ಉತ್ತರ..ರಾಸಾಯನಿಕ ವಸ್ತುಗಳು ಕ್ಷಣಿಕ ಸೌಂದರ್ಯವನ್ನು ನೀಡುತ್ತವೆ.ಕ್ಷಣಿಕ ಸೌಂದರ್ಯಕ್ಕೆ ನಾವೇಕೆ ನಮ್ಮ ಸಮಯ, ಹಣವನ್ನು ವ್ಯಯ ಮಾಡಬೇಕು...ರಾಸಾಯನಿಕ ವಸ್ತುಗಳ ಬದಲು ಪ್ರಾಕೃತಿ ದತ್ತವಾಗಿ ಬರುವವಸ್ತುಗಳನ್ನೇ ಬಳಸಿಕೊಂಡು ನೈಸರ್ಗಿಕವಾಗಿ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದಲ್ಲ.ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳುವ ಸೌಂದರ್ಯ ದೀರ್ಘಕಾಲಿಕವಾಗಿರುತ್ತದೆ ಎನ್ನುವುದು ನನ್ನಅಭಿಪ್ರಾಯ.

ಕೆಲವು ಸೌಂದರ್ಯವರ್ಧಕಗಳನ್ನು ಮನೆಯಲ್ಲೇ ಇರುವಂತಹವಸ್ತುವಿನಿಂದಲೂ ನಾವೇ ಸ್ವತಃ ನಮ್ಮ ಕೈಯಿಂದ ಮಾಡಿಕೊಳ್ಳಬಹುದು. ಮನೆಯಲ್ಲೇ ಮಾಡಿಕೊಳ್ಳುವಂತಹ ಸೌಂದರ್ಯವರ್ಧಕ ಗಳ ಬಗ್ಗೆ ಕೆಲವು ಮಾಹಿತಿ ಹಾಗೂ ಸಲಹೆಗಳು ಇಲ್ಲಿವೆ.

ಈ ಸಲಹೆಗಳು ನಿಮ್ಮಚರ್ಮಕ್ಕೆ ಹೊಂದಾಣಿಕೆಯಾಗುವುದಾದರೆ ಬಳಸಿ ನೋಡಿ...ರಾಸಾಯನಿಕ ವಸ್ತುಗಳಿಂದ ಬಂದ ಸೌಂದರ್ಯಕ್ಕೂ ನೈಸರ್ಗಿಕವಾಗಿ ಬಂದ ಸೌಂದರ್ಯಕ್ಕೂವ್ಯತ್ಯಾಸವನ್ನು ನೀವೇ ಕಂಡುಕೊಳ್ಳಬಹುದು.

ಮನೆಯಲ್ಲಿಯೇಮಾಡಿಕೊಳ್ಳಬಹುದಾದ ಸೌಂದರ್ಯವರ್ಧಕ ಸಾಮಗ್ರಿಗಳು

ಶುಭ್ರಕಾರಕ ದ್ರವ(ಲೋಷನ್)

ಬೇಕಾಗುವಪದಾರ್ಥಗಳು

  • ಬಾದಾಮಿ ಎಣ್ಣೆ 1 ಬಟ್ಟಲು
  • ಗ್ಲಿಸರಿನ್ ಕಾಲುಬಟ್ಟಲು
  • ಬಿಳಿಯ ವ್ಯಾಸಲಿನ್- ಕಾಲು ಬಟ್ಟಲು
  • ನಾಲ್ಕು ಹನಿಯಾವುದಾದರೂ ಸುವಸನೆಯುಳ್ಳ ದ್ರವ (ಪನ್ನೀರು, ಗಂಧದೆಣ್ಣೆ)

 ಗ್ಲಿಸರಿನ್,ಬಿಳಿಯ ವ್ಯಾಸಲಿನ್ ಎಱಡನ್ನೂಚೆನ್ನಾಗಿ ಕುದಿಸಿ ಬಾಗಾದಿ ಎಣ್ಣೆಯನ್ನು ಸೇರಿಸಿ ಕಲಸಿ, ತಣ್ಣಗಾದ ಮೇಲೆ ಸುವಾಸನೆಯುಕ್ತ ದ್ರವ ಸೇರಿಸಿ ಮುಚ್ಚಿಡಿ.ಬೇಕಾದಾಗಲೆಲ್ಲ ಮುಖ ತೊಳೆದ ನಂತರ ಈ ಶುಭ್ರಕಾರಕವನ್ನು ಒಣ ಹತ್ತಿಗೆ ಹಾಕಿ ಮುಖ, ಕ್ತುಗಳ ಸವರಿ ಎರಡು ನಿಮಿಷ ಬಿಟ್ಟು ಒರೆಸಿಕೊಳ್ಳಿ.

 ಶುಭ್ರಕಾರಕ ನೀರು

ಬೇಕಾಗುವಸಾಮಾನುಗಳು

  • ಪನ್ನೀರು-1 ಬಟ್ಟಲು
  • ಟಿಂಕ್ಚರಿನ ಬೆನ್ಸಾಯನ್ - 1 ಚಮಚ
  • ಗ್ಲಿಸರಿನ್ - 1 ಚಮಚ

ಟಿಂಕ್ಚರನ್ನುಒಂದೊಂದೇ ಹನಿಯಾಗಿ ಪನ್ನೀರಿಗೆ ಬೆರೆಸಿ ಕಲಕಿ. ಅನಂತರ ಗ್ಲಿಸರಿನ್ ನನ್ನು ಬೆರೆಸಿ, ಮುಚ್ಚಿಟ್ಟುಕೊಳ್ಳಿ. ಈ ಶುಭ್ರಕಾರಕ ನೀರು ಮೂಖದ ಚರ್ಮದಒಳಪೊರೆಯ ಕೊಳೆಯನ್ನೂ, ಮೇಕಪ್ಪನ್ನೂಶುಭ್ರಗೊಳಿಸಬಲ್ಲದು.

ಪೌಷ್ಠಿಕ ಕ್ರೀಂ

ಬೇಕಾಗುವ ಸಾಮಾಗ್ರಿಗಳು

  • ಐಸಿನ ಗಡ್ಡೆಗಳು - 4
  • ಸೌತೇಕಾಯಿ - 1
  • ಜೇನುತುಪ್ಪ - 2 ಚಮಚ
  • ಹಾಲು - ಅರ್ಧಬಟ್ಟಲು
  • ಪುದಿನ ಎಳೆ - 1 ಹಿಡಿ

ಎರಡು ಗಡ್ಡೆಐಸನ್ನು ಕರಗಿಸಿ, ಸೌತೇಕಾಯಿ ತುರಿದುಪುದಿನ ಎಲೆಯನ್ನು ಕೊಚ್ಚಿ ಮೂರನ್ನೂ ಚೆನ್ನಾಗಿ ಮಿಶ್ರಣ ಮಾಡಿ, ಅನಂತರ ಅದಕ್ಕೆ ಜೇನುತುಪ್ಪ, ಹಾಲು ಸೇರಿಸಿ ತಣ್ಣಗಿರುವ ಸ್ಥಳದಲ್ಲಿ ಮುಚ್ಚಿ ಎರಡುಗಂಟೆಗಳ ಕಾಲ ಇಡಿ. ಅನಂತರ ತೆಳ್ಳಗಿನ ಬಟ್ಟೆಯಲ್ಲಿ ಶೋಧಿಸಿ ಮಿಕ್ಕ ಎರಡು ಸಣ್ಣ ಗಡ್ಡೆ ಐಸನ್ನುಅದಕ್ಕೆ ಸೇರಿಸಿ ಬಾಟಲಿಗೆ ಹಾಕಿಟ್ಟುಕೊಂಡು ಉಪಯೋಗಿಸಿ ಮುಖ, ಕತ್ತು, ಕೈಗಳ ಮೇಲೆ ಬಹಳ ಹಿತವಾಗಿರುತ್ತದೆ ಹಾಗೂ ಚರ್ಮವನ್ನು ಮೃದುವಾಗಿಯೂ, ಕಾಂತಿಯುತವಾಗಿಯೂ ಮಾಡುತ್ತದೆ.

 ಕಾಂತಿ ನೀಡುವ ಪುಡಿ
ಬೇಕಾಗುವ ಸಾಮಾಗ್ರಿಗಳು

  • ಕಿತ್ತಲೇ ಹಣ್ಣಿನಸಿಪ್ಪೆ 1 ಬಟ್ಟಲು
  • ತುರಿದ ಆಲೂಗಡ್ಡೆ 1 ಬಟ್ಟಲು
  • ಮೆಂತ್ಯ- 2 ಚಮಚ
  • ಕೆಂಪು ತೊಗರಿಬೇಳೆ-ಕಾಲು ಕೆ.ಜಿ
  • ಕಡಲೇ ಹಿಟ್ಟು -ಕಾಲು ಕೆ.ಜಿ
  • ಕಸ್ತೂರಿ ಅರಿಶಿನಬೇರು - ಕಾಲು ಕೆ.ಜಿ

ಕಿತ್ತಲೆ ಸಿಪ್ಪೆ,ನಿಂಬೆ ಸಿಪ್ಪೆ, ಆಲೂಗಡ್ಡೆಯನ್ನು ಬಿಸಿಲಲ್ಲಿ ಒಂದು ವಾರ ಒಣಗಿಸಿ,ಅನಂತರ ಕಸ್ತೂರಿ, ಅರಿಶಿನದ ಬೇರನ್ನು ಸೇರಿಸಿ. ಒಂದು ಗಂಟೆಯ ಕಾಲ ಒಣಗಿಸಿಮೆಂತ್ಯೆ ಸೇರಿಸಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ. ಕೆಂಪು ತೊಗರಿ ಬೇಳೆಯೊಂದಿಗೆ ಸೇರಿಸಿನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ. ಅನಂತರ ಇದಕ್ಕೆ ಕಡಲೇ ಹಿಟ್ಟು ಬೆರೆಸಿ ಸ್ನಾನ ಮಾಡುವಾಗಇದನ್ನು ಮುಖ, ಮೈಗೆಲ್ಲಾ ತಿಕ್ಕಿಹತ್ತು ನಿಮಿಷ ನೆನೆದು ಸ್ನಾನ ಮಾಡಿ. ಇದರಿಂದ ಮೈ, ಮುಖದ ಚರ್ಮ ಮೃದುವಾಗುವುದಲ್ಲದೇ ಕಾಂತಿಯುತವಾಗುತ್ತದೆ.ಅಲ್ಲದೇ ಅನಾವಶ್ಯಕ ರೋಮಗಳು ಬೆಳಯದಂತೆ ತಡೆಯುತ್ತದೆ.

ಸುಕ್ಕು ತಡೆಯುವಕ್ರಮ

ಬೇಕಾಗುವ ಸಾಮಾಗ್ರಿಗಳು

  •  ಪನ್ನೀರು - ಅರ್ಧ ಬಟ್ಟಲು
  • ಬಾದಾಮಿ ಎಣ್ಣೆ - 4 ಚಮಚ
  • ಆಲಮ್ಮಿನ ಪುಡಿ -ಎರಡು ಚಮಚ

ಪನ್ನೀರಿನಲ್ಲಿಬಿಳಿಯ ಲೋಳೆಯನ್ನ ಕುದಿಸಿ. ಆಲಮ್ ಹಾಗೂ ಬಾದಾಮಿ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣಮಾಡಿ. ಕ್ರೀಂನಂತೆ ಗಟ್ಟಿಯಾದ ಕೂಡಲೆ ಕೆಳಗಿಳಿಸಿ, ಆರಿಸಿ ಬಾಟಲುಗಳಲ್ಲಿ ತುಂಬಿಟ್ಟು ಬಳಸಿ.

ಇದೇ ರೀತಿಯ ಮತ್ತೊಂದುತಯಾರಿಕೆ

  • ಪರಂಗಿ ಕಾಯಿ 1
  • ತಿಳಿ ಮಜ್ಜಿಗೆ 2 ಚಮಚ
  • ಗ್ಲಿಸರಿನ್ 1 ಚಮಚ
  • ಪನ್ನೀರು 2 ಬಟ್ಟಲು
  • ಜೇನುತುಪ್ಪ 2 ಚಮಚ

ಮೊದಲಿಗೆಪರಂಗಿಕಾಯಿಯ ಸಿಪ್ಪೆ ಎರೆದು ಹೋಳುಗಳನ್ನಾಗಿ ಮಾಡಿ ನುಣ್ಣಗೆ ನೀರಿನಲ್ಲಿ ಬೇಯಿಸಿಕೊಳ್ಳಿ.ಇದಕ್ಕೆ ಮಜ್ಜಿಗೆ, ಗ್ಲಿಸರಿನ್,ಪನ್ನೀರು, ಜೇನುತುಪ್ಪ ಹಾಕಿ ಕೆದಕಿ ಮುಚ್ಚಿಡಿ. 2 ಗಂಟೆಗಳ ನಂತರ ಸ್ಪೂನಿನಿಂದ ಎಲ್ಲವನ್ನೂ ನುಣ್ಣಗೆಕಲಸಿ ತೆಳ್ಳಗಿನ ಬಟ್ಟೆಯಲ್ಲಿ ಶೋಧಿಸಿ ಶೇಖರಿಸಿಟ್ಟುಕೊಳ್ಳಿ. ಈಮೇಲಿನರಡನ್ನು ರಾತ್ರಿ ಮಲಗುವಮುನ್ನು ಸುಕ್ಕುಗಟ್ಟಿದ ಮುಖ, ಕೈಕಾಲುಗಳಿಗೆಬಳಸುವುದರಿಂದ ಸುಕ್ಕುಗಳು ಮಾಯವಾಗುವುವು.

ಸೀಗೇಕಾಯಿ ಶಾಂಪೂ

ಬೇಕಾಗುವಸಾಮಾನುಗಳು

  • ಚಿಗುರೆ ಪುಡಿ- 200 ಗ್ರಾಂ
  • ಸೀಗೇಕಾಯಿ 200 ಗ್ರಾಂ
  • ಹಿಪ್ಪೇ ಹಣ್ಣು - 200 ಗ್ರಾಂ
  • ಕಿತ್ತಲೇ ಸಿಪ್ಪೆ -200 ಗ್ರಾಂ
ಈ ನಾಲ್ಕನ್ನೂರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಿಗ್ಗೆ ಎಲ್ಲವನ್ನೂ
ಗಂಟೆ ನೀರಿನಲ್ಲಿ ಕುದಿಸಿ. ಒಂದು ದೊಡ್ಡ ಬಾಟಲಿನಷ್ಟುಮಾಡಿಕೊಳ್ಳಿ. ತೆಳುವಾದ ಬಟ್ಟೆಯಲ್ಲಿ ಶೋಧಿ ಶೇಖರಿಸಿ. ಈ ಶಾಂಪೂವಿನಿಂದ ತಲೆ ತೊಳೆದುಕೊಂಡರೆಕೂದಲು ಹೊಳೆಯುವಂತಾಗುತ್ತದೆ ಜೊತೆಗೆ ಕೂದಲು ಉದುರುವುದು ನಿಲ್ಲುತ್ತದೆ.
ದಿನನಿತ್ಯ ಸೌಂದರ್ಯ ವೃದ್ಧಿಗೆ ಕೆಲವೊಂದಿಷ್ಟು ಸಲಹೆಗಳು
  • ಒಂದು ಬಟ್ಟಲುಹಾಲಿಗೆ ನಾಲ್ಕು ಚಮಚ ಕೊಬ್ಬರಿ ಎಣ್ಣೆ ಬೆರೆಸಿ ತಲೆಯ ಕೂದಲಿಗೆ ಹಚ್ಚಿ ಬಿಸಿಯಾದ ನೀರಿನಲ್ಲಿಅದ್ದಿದ ಟವಲೊಂದನ್ನು ತಲೆಗೆ ಸುತ್ತಿ ತೆಗೆಯಬೇಕು. ಈ ರೀತಿ 10-12 ಬಾರಿ ಬಿಸಿ ನೀರಿನ ಶಾಖ ಕೊಟ್ಟು ಅನಂತರ ಅರ್ಧಗಂಟೆನೆನೆದು ಸ್ನಾನ ಮಾಡಬೇಕು. ಇದರಿಂದ ಕೂದಲು ಉದುರುವುದು ನಿಲ್ಲುವುದಲ್ಲದೆ ಸೊಂಪಾಗಿಯೂಬೆಳೆಯುವಂತೆ ಮಾಡುತ್ತದೆ.
  • ಬಿಸಿ ಹಾಲಿಗೆಒಂದೆರಡು ಸುತ್ತು ಜಾಕಾಯಿ ತೇಯ್ದು ಬೆರೆಸಿ, ಸಕ್ಕರೆ ಹಾಕಿ ಕುಡಿದು ಮಲಗಿದರೆ ನಿದ್ರೆ ಬಾರದೆ ತೊಳಲಾಡುವವರಿಗೆ ದಿವ್ಯೌಷಧವಾಗುತ್ತದೆ.
  • ಬೇಸಿಗೆ, ಚಳಿಗಾಲದಲ್ಲಿಒಡೆಯುವ ಅಂಗಾಲಿಗೆ ಹುಳಿ ಮೊಸರು ಮತ್ತು ಹರಳೆಣ್ಣೆ ಮಸಾಭಾಗ ಸೇರಿಸಿ ಹಚ್ಚುವುದರಿಂದ ಎರಡು ಮೂರು ದಿನಗಳಲ್ಲಿ ಬಿರುಕು ಸರಿಹೋಗುವುದು.
  • ಮೊಸರಿಗೆ  ಚಿಟಿಕೆ ಸಕ್ಕರೆ ಸೇರಿಸಿ ಮುಖ, ಕತ್ತುಗಳಿಗೆ ಹಚ್ಚಿ ಕೊಂಚ ಕಾಲ ನೆನೆದು ಮುಖ ತೊಳೆದರೆಕಪ್ಪು ವರ್ಣಕ್ಕೆ ತಿರುಗಿದ ಚರ್ಮ ಬೆಳ್ಳಗಾಗುತ್ತದೆ.
  • ಬಟ್ಟಲು ಮೊಸರಿಗೆಒಂದು ಚಮಚ ಅರಿಸಿನ, ಕೆಂಪು ತೊಗರಿಬೇಳೆಎರಡು ಚಮಚ ಸೇರಿಸಿ ಮುಖ, ಕೈಕಾಲುಗಳಿಗೆಪ್ರತಿ ನಿತ್ಯ ಹಚ್ಚುತ್ತಾ ಬಂದರೆ ಅನಾವಶ್ಯಕಗ ರೋಮ ನಿವಾರಣೆಯಾಗುತ್ತದೆ.
  • ಕೂದಲನ್ನುಕಾಂತಿಯುತವಾಗಿ ಮಾಡಲು ಮತ್ತೊಂದು ವಿಧಾನವೆಂದರೆ ಒಂದು ಬಟ್ಟಲಿಗೆ ಎರಡು ಕೋಳಿ ಮೊಟ್ಟೆಯನ್ನುಒಡೆದು ಹಾಕಿ. ಅದಕ್ಕೆ ಹಿಪ್ಪೆ ಎಣ್ಣೆಯಾಗಲಿ, ಕೊಬ್ಬರಿ ಎಣ್ಣೆಯಾಗಲೀ ಬೆರೆಸಿ ಒಂದು ದೊಡ್ಡ ಚಮಚ ಗ್ಲಿಸರಿನ್ ನನ್ನು ಹಾಕಿ ಮಿಶ್ರಣವನ್ನುಚೆನ್ನಾಗಿ ಕಲೆಸಿ ಬುರುಡೆ, ಕೂದಲಿಗೆ ಹಚ್ಚಿ.ಒಂದು ಗಂಟೆಯ ಕಾಲ ನೆನೆದು ಅನಂತರ ತಲೆ ತೊಳೆದುಕೊಳ್ಳಿ, ತಲೆ ತೊಳೆದುಕೊಳ್ಳುವಾಗ ಒಂದು ನಿಂಬೆಹಣ್ಣಿನ ರಸ ಹಿಂಡಿಹಾಕಿಕೊಂಡರೆ ತಲೆಗೆ ಹೊಟ್ಟು ಬರುವುದಿಲ್ಲ.
  • ಕೆಂಪು ದಾಸವಾಳದಎಲೆಯನ್ನು ಸಣ್ಣ ಚೂರುಗಳಾಗಿ ಕತ್ತರಿಸಿ ಒಂದು ಅಗಲವಾದ ಪಾತ್ರೆಯಲ್ಲಿ ಹಾಕಿ ಒಂದು ಲೋಟ ನೀರುಬೆರೆಸಿ ಚೆನ್ನಾಗಿ ಕುದಿಸಿ. ನೀರು ನಾಲ್ಕು ಚಮಚಗಳಾಗುವವರೆಗೆ ಬಿಟ್ಟು ಅನಂತರ ಕೆಳಗಿಳಿಸಿ ಆರಲುಬಿಡಿ. ನಂತರ ಎಲೆಯನ್ನು ಹಿಂಡಿ ತೆಗೆದುಬಿಡಿ. ಆ ನೀರನ್ನು ತಲೆಗೆ ಹಚ್ಚಿ ನೆನೆದು ಸ್ನಾನಮಾಡುವುದರಿಂದ ಕೂದಲು ಬೆಳೆಯುತ್ತದೆ.
  • ಬಾಳೆಯ ಹಣ್ಣಿನಸಿಪ್ಪೆ ಬಿಸಾಡುಬದಲು ಅದನ್ನು ಬಿಸಿಲಲ್ಲಿ ಒಣಗಿಸಿ ಪುಡಿ ಮಾಡಿ ಕೊಬ್ಬರಿ ಎಣ್ಣೆಗೆ ಬೆರೆಸಿಕುದಿಸಿ ಶೋಧಿಸಿಟ್ಟುಕೊಂಡು ಪ್ರತಿ ನಿತ್ಯ ತಲೆ ಬಾಚಿಕೊಳ್ಳುವ ಮುನ್ನ ಒಂದಿಷ್ಟು ನೆತ್ತಿಗೆ,ಕೂದಲಿನ ಬುಡಕ್ಕೆತಿಕ್ಕಿಕೊಳ್ಳಿ, ಇದರಿಂದ ಕೂದಲುಉದುರುವುದು ಕಡಿಮೆಯಾಗುತ್ತದೆ.
  • ನರೆಗೂದಲಿನಪರಿಹಾರಕ್ಕಾಗಿ ಮನೆಯಲ್ಲೇ ಕೆಲವು ಬಣ್ಣ ಕಾರಕಗಳನ್ನು ತಯಾರಿಸಿಕೊಳ್ಳಬಹುದು. ಒಂದು ಬಟ್ಟಲುಬಾದಾಮಿ ಸಿಪ್ಪೆಯನ್ನು ಬೆಂಕಿಯಲ್ಲಿ ಸುಟ್ಟು ಬೂದಿ ಮಾಡಿ ತೆಗೆದಿಟ್ಟುಕೊಳ್ಳು. ಇದಕ್ಕೆ ಒಂದುಚಮಚ ಆಲಮ್ ಸೇರಿಸಿ ಒಂದು 250 ಗ್ರಾಂ ಹಿಡಿಯುವಬಟ್ಟಲಲ್ಲಿ ಆಲಿವ್ ಆಯಿಲ್ ತೆಗೆದುಕೊಂಡು ಅದಕ್ಕೆ ಬಾದಾಮಿಯ ಸುಟ್ಟಪುಡಿ, ಆಲಮ್ ಸೇರಿಸಿ ಒಂದು ಗಂಟೆಯ ಕಾಲ ಸಣ್ಣ ಉರಿಯಲ್ಲಿಮರಳಿಸಿ ತೆಗೆದು ಆರಿದ ಮೇಲೆ ತೆಳ್ಳಗಿನ ಬಟ್ಟೆಯಲ್ಲಿ ಎಣ್ಣೆಯನ್ನು ಶೋಧಿಸಿಕೊಂಡು ಅದಕ್ಕೆ ನಿಮಗೆಬೇಕೆನಿಸಿದ ಪರಿಮಳ ಸೇರಿಸಿಕೊಳ್ಳಿ ಈ ಬಣ್ಣವನ್ನು ಕೂದಲಿಗೆ ನೆತ್ತಿಗೆ ಅರ್ಧ ಗಂಟೆ ಕಾದುಬೆಚ್ಚಗಿನ ನೀರಿನಲ್ಲಿ ತಲೆ ತೊಳೆದುಕೊಳ್ಳಿ.
  • ಮಗುವ ಮುನ್ನಮುಖವನ್ನು ಸ್ವಚ್ಛವಾಗಿ ತೊಳೆದು ನೀರು ಹಾಗೆಯೇ ಆರುವಂತೆ ಬಿಡಿ. ಅನಂತರ ಒಂದು ಔನ್ಸು ಹಾಲಿಗೆಎರಡು ಚಮಚ ನಿಂಬೆರಸ, ನಾಲ್ಕು ತೊಟ್ಟುಗ್ಲಿಸರಿನ್ ಬೆರಸಿ ಮುಖ, ಕತ್ತು, ಕೈಕಾಲುಗಳಇಗೆ ಹಚ್ಚಿ ಮಲಗಿ. ಬೆಳಿಗ್ಗೆ ಎದ್ದ ಕೂಡಲೇಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದರಿಂದ ಚರ್ಮದ ಸಮಸ್ಯೆಗಳು ಬರುವುದಿಲ್ಲ.
  • ಹೊರಗೆ ಹೋಗುವಾಗಪನ್ನೀರು, ಗ್ಲಿಸರಿನ್,ನಿಂಬೆರಸ ಮೂರನ್ನೂ ಒಂದೇಅಳತೆಯಲ್ಲಿ ಬೆರೆಸಿ ಮುಖ ಕೈಕಾಲಿಗೆ ಹಚ್ಚಿ. ಅದರ ಮೇಲೆ ಹಿತಮಿತವಾಗಿ ಅಲಂಕರಿಸಿಕೊಳ್ಳಿ. ಇದರಿಂದಚರ್ಮ ಒಡೆದು ಬಿರುಸಾಗಿಸುವುದಿಲ್ಲ. ಬಿಸಿಲಿಗೆ ಕುಂದುವುದಿಲ್ಲ. ಬಹಳ ಹೊತ್ತಿನವರೆಗೆ ಚರ್ಮಕಾಂತಿಯುತವಾಗಿರುತ್ತದೆ.
  •  ಮೊಡವೆ ಸಮಸ್ಯೆಗೆಬೆಳಿಗ್ಗೆ ಬರಿಯ ಹೊಟ್ಟೆಯಲ್ಲಿ ಒಂದುಲೋಟ ನಿಂಬೆರಸ ಅಥವಾ ಕಿತ್ತಳೆ ರಸವನ್ನು ಸಕ್ಕರೆಹಾಕಿಕೊಳ್ಳದೆ ಸೇವಿಸಿ.
  •  ರಾತ್ರಿ ಮಲಗುವಮುನ್ನ ತುಟಿಯ ರಂಗನ್ನು ಸಂಪೂರ್ಣವಾಗಿ ತೊಳೆದು ನಿಂಬೆರಸ, ಗ್ಲಿಸರಿನ್ ಹಚ್ಚಿ ಇದರಿಂದ ತುಟಿಗಳುಮೆದುವಾಗಿರುವುದಲ್ಲದೇ ಕರಿಯ ಬಣ್ಣಕ್ಕೆ ತಿರುಗದಂತೆ ಎಛ್ಚರಿಕೆ ವಹಿಸುತ್ತದೆ. ಮಲಗುವಾಗ ಎಂದೂರಗುಹಚ್ಚಿ ಮಲಗಬೇಡಿ.
  •  ಮಲಗುವ ಮುನ್ನಕಣ್ಣುಗಳನ್ನು ಚೆನ್ನಾಗಿ ತೊಳೆದು ಬಾದಾಮಿ ಎಣ್ಣೆಯನ್ನು ರೆಪ್ಪೆಗಳಿಗೆ ಹಚ್ಚಿ ಮಲಗಿ ಇದರಿಂದರೆಪ್ಪೆಗಳು ಸುಂದರವಾಗಿ ಕಾಣುತ್ತವೆ. ಸಾಧ್ಯವಾದಷ್ಟು ಅಲಂಕಾರ ಸಾಧನಗಳನ್ನು ಕಡಿಮೆ ಮಾಡಿ.

-ಮಂಜುಳ.ವಿ.ಎನ್

SCROLL FOR NEXT