ನಾನು ಹೇಳಹೊರಟಿರುವದು ಏಕ ವ್ಯಕ್ತಿಗೆ ಪ್ರೇರಣೆಯಾದ ಮಹಿಳೆಯ ಕುರಿತಲ್ಲ, ಭರತವರ್ಷಕ್ಕೆ ಪ್ರೇರಣೆಯಾದ ಪವಿತ್ರ ಪ್ರವಾಹಿನಿಯದ ನಾರಿಯ ಕುರಿತು.
ಭರತಖಂಡದ ಸಮೃದ್ಧಿಯ ಪ್ರತೀಕ, ಭರತಖಂಡದ ಸಂಸ್ಕೃತಿ ಪ್ರತೀಕ ಈ ಗಂಗೆ. ಈ ಪುಣ್ಯವಾಹಿನಿ ಅದೆಷ್ಟು ಜನರ ಕಣ್ಣೀರನ್ನು ಕಂಡು ತಾನು ಮರಗಿದ್ದಾಳೋ. ಗಂಗೆಯ ನೀರಿನ ಜೊತೆ ಅದೆಷ್ಟು ರಕ್ತದ ಹೊಳೆ ಸೇರಿ ಹರಿದಿದ್ದವೋ.
ಗಂಗೆಯ ಕಣ ಕಣದಲ್ಲೂ ವಿಷವನ್ನು ಬೆರೆಸಿದರೂ ಇಂದಿಗೂ ಪರಮ ಔಷದೀಯ ತೋಯವಾಗಿ ಹರಿಯುತ್ತಿದ್ದಾಳೆ ಗಂಗಾ ಮಾತೆ. ಋಷಿಯ ತೊಡೆಯಿಂದ ಜನಿಸಿದ ಪುಣ್ಯವಾಹಿನಿ ಅದೆಷ್ಟು ವಿಭಿನ್ನ ಪಂಥೀಯ ಸಂನ್ಯಾಸಿಗಳ ವೈರಾಗ್ಯವನ್ನು ಕಂಡಳೋ.
ಬದುಕು ಎನ್ನುವುದಕ್ಕೆ ನದಿ ಎಂಬ ಅರ್ಥವೂ ಇದೆ. ಹುಟ್ಟುವಾಗ ಸಣ್ಣ ಜಲಧಾರೆಗಿ ಹುಟ್ಟಿ ಬೆಟ್ಟ-ಕಣಿವೆಗಳನ್ನು, ಕಾಡು-ಬಯಲುಗಳನ್ನು ದಾಟಿ ಸಾಗರವನ್ನು ಸೇರುವುದೇ ಜೀವನ. ನಿತ್ಯ ನಿರಂತರ ಬದುಕಿನ ಮಾರ್ಗದರ್ಶಕಳು ಈ ಗಂಗೆ ತಾನೆ..?
ಗಂಗಾ ತಟಾಕದಲ್ಲಿ ಪುರಾಣ ಮತ್ತು ಇತಹಾಸದ ಕಾಲದಿಂದ ಇಂದಿನವರೆಗೆ ಅನೇಕ ಸಂಸ್ಕೃತಿಗಳು ಆವಿಶ್ಕಾರ ಮತ್ತು ಅವನತಿಯ ಪುನರಾವರ್ತತನೆಗೊಂಡವು.
ಝುಳುಝುಳನೆ ಕಲರವದಿಂದ ಹರಿವ ಗಂಗೆಯ ಮಡಿಲಲ್ಲಿ ಯಾವುದೋ ಅರೆಬೆಂದ ಶವ ತೇಲಿಬರುತ್ತದೆ, ಮತ್ತೆ ಯಾವುದೋ ಘಾಟ್ಗಳಲ್ಲಿ ನಿರಂತರ ಚಿತೆಯಿಂದ ತೆಗೆದ ಬೂದಿಯನ್ನು ಚೆಲ್ಲುತ್ತಾರೆ, ಗಂಗೆ ಮಾತ್ರ ಎಲ್ಲ ನೋವನ್ನು ತನ್ನೊಳಗೆ ಸಹಿಸಿಕೊಂಡು ಪ್ರವಾಹಿಸುತ್ತಾಳೆ.
ಅಸಂಖ್ಯ ಲಕ್ಷ ಕುಟುಂಬಗಳಿಗೆ ನೇರವಾಗಿ ಅಥವ ಪರೋಕ್ಷವಾಗಿ ಇಂದಿಗೂ ಅನ್ನವನ್ನು ನೀಡುತ್ತಿದ್ದಳೆ ಈ ಪುಣ್ಯವಾಹಿನಿ.
ಭರತವರ್ಷ ಪುಣ್ಯಭೂಮಿಯಲ್ಲಿ ಅನೇಕ ಪತಿವ್ರತಾ ಶಿರೋಮಣಿಗಳು, ಸಾದ್ವಿಯರು ಜನಿಸಿದ್ದರೆ. ಅಂತವರ ಸಾಲಿನಲ್ಲಿ ಪ್ರಪಂಚಕ್ಕೆ ಆದರ್ಶವಾದ ನಾರಿ ಈ ಗಂಗೆ. ಗಂಗೆ ಎಂದರೆ ಕೆವಲ ನದಿಯಲ್ಲ, ಸಾವಿರ ಸಾವಿರ ವರ್ಷಗಳಿಂದ ಹರಿದುಬಂದ ಈ ನೆಲದ ಜನರ ಭಾವ, ಗಂಗೆ ಎಂದರೆ ಕೇವಲ ನದಿಯಲ್ಲ, ಈ ಪುಣ್ಯಭೂಮಿಯಲ್ಲಿ ಹರಿಯುವ ಮಹಾತಾಯಿ ಆಕೆ.
- ಹರ್ಷ ವರ್ಧನ ಹೆಗ್ಡೆ.