ಪ್ರತಿಕೂಲ ಪರಿಸ್ಥಿತಿಯಲ್ಲೂ ನನ್ನ ಮೇಲೆ ಅವಳಿಟ್ಟ ನಂಬಿಕೆ, ಬೆನ್ನು ತಟ್ಟಿ ಪ್ರೋತ್ಸಾಹಿಸಿದ ರೀತಿ, ನನ್ನ ಯಶಸ್ಸಿಗಾಗಿ ದೇವರಲ್ಲಿ ಮಾಡಿದ ಪ್ರಾರ್ಥನೆ, ಒಂದೇ ಎರಡೇ ನನ್ನಮ್ಮನೇ ನನ್ನ ಯಶಸ್ಸಿನ ರೂವಾರಿ. ಒಬ್ಬ ಮಹಿಳೆಯ ಯಶಸ್ಸು, ತನ್ನ ಸ್ವಂತ ಯಶಸ್ಸು ಮಾತ್ರವಲ್ಲದೆ, ಗಂಡನ ಯಶಸ್ಸು, ಮಕ್ಕಳ ಯಶಸ್ಸು ಅಥವ ಕುಟುಂಬದ ಯಶಸ್ಸಿನೊಂದಿಗೆ ತಳಕು ಹಾಕಿಕೊಂಡಿರುತ್ತದೆ. ಅಂತೆಯೆ ನನ್ನ, ನನ್ನ ಸೋದರ, ಸೋದರಿಯ ಯಶಸ್ಸಿನ ಶಿಲ್ಪಿ ನನ್ನ ತಾಯಿ, ನಿಜಕ್ಕೂ ಯಶಸ್ವಿ ಮಹಿಳೆಯೇ ಸರಿ.
ಅಮ್ಮ ನೀನು ಸಾರ್ಥಕ ಮಹಿಳೆ. ನಿನಗೆ ಮಹಿಳಾ ದಿನಾಚರಣೆ ಶುಭಾಶಯಗಳು..
-ಜಯಪ್ರಕಾಶ.ಪಿ.ಎನ್
ಆದಾಯ ತೆರಿಗೆ ಇಲಾಖೆ