ಆಗ ತಾನೆ ಪಿ.ಯು.ಸಿ ಮುಗಿಸಿ ಬಿ.ಎ ತರಗತಿ ಗೆ ಸೆರಿದ್ದೆ. ಎಲ್ಲರಂತೇ ಕಾಲೇಜ್ ಗೆ ಹೋಗುವ ಹಂಬಲ ಜೊತೆಗೆ ಎನಾದರೂ ಸಾಧಿಸುವ ಹಠವೊಂದಿತ್ತು, ಹೀಗೆ ದಿನಕಳೆದಂತೆ ಪ್ರಥಮ ಸೆಮಿಸ್ಟರ್ ಎಕ್ಸಾಮ್ ಮುಗಿತು ರಿಸ್ಲ್ಟ್ ಬಂತು. ಅದು ಫೇಲು! ಇಂಗ್ಲಿಷ್ ವಿಷಯದಲ್ಲಿ ಕೇವಲ 18 ಅಂಕ ಮಾತ್ರ.. ಹಠ ಬಿಡದೆ ಮತ್ತೆ ಓದಿದೆ ಎಕ್ಸಮ್ ಸಹ ಬರದೆ ಮತ್ತೊಮ್ಮೆ ಅದರಲ್ಲು ಫೇಲು!!
ನನ್ನ ಜೋತೆ ಇರೊ ಎಲ್ಲಾ ಫ್ರಂಡ್ಸ್ ಪಾಸ್ ಅಗುತಿದ್ದರು. ನಾನು ಮಾತ್ರ ಫೇಲು ಕಾರಣ ಹುಡಕಿದರು ಸಿಗಲೇ ಇಲ್ಲಾ. ಹೀಗೆ ದಿನಾ ಕಳೆದಂತೆ ಅಂತಿಮ ವರ್ಷದ ಅಂತಿಮ ಪರೀಕ್ಷೆ ಅದರಲ್ಲಿ ನಾನು ಮಾಡು ಇಲ್ಲವೆ ಮಡಿ ಎಂಬಂತ್ತೆ ಇತ್ತು ನನ್ನ ಭವಿಷ್ಯ ಅದರು ದೃತಿಗೆಡದೆ ನಡೆ ಮನ್ನಡೆ ನಡೆ ಮುನ್ನಡೆ ಎಂಬಂತ್ತೆ ಸಾವಲಾಗಿ ಸ್ವೀಕರಿಸಿ ಎಕ್ಸಾಮ್ ಗೆ ಅಂತಿಮ ತಯಾರಿಯಾಗಿ ಎಕ್ಸಾಮ್ ಎಂಬ ನನ್ನ ಜೀವನದ ಅತ್ಯಂತ ಬದ್ದ ವ್ಯೆರಿಯನ್ನು ಎದುರಿಸಿದೆ. ಸ್ವಲ್ಪ ದಿನದ ನಂತರ ಫಲಿತಾಂಶಕ್ಕಾಗಿ ಚಾತಕ ಪಕ್ಷಿಯಂತೆ ಅ ದಿನವನ್ನು ಕಾಯುತ್ತಿದ್ದೆ. ಹಾಗು ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೇಕಾದ ಎಲ್ಲಾ ಸಿದ್ದತೆಯನ್ನು ಮಾಡಿಕೊಂಡು ಹಗಲಲ್ಲೆ ಎಂ.ಎ ಪದವಿಯ ಕನಸು ಕಾಣತೊಡಗಿದೆ.. ಯಾರು ಕೇಳಿದರು ಜಂಭದಿಂದ ಮುಂದೆ ಎಂ.ಎ ಮಾಡುತ್ತೀನಿ ಅಂತ ಹೇಳುತ್ತಿದ್ದೆ.. ಅದಾದ ಕೇಲವೇ ದಿನದಲ್ಲಿ ನನ್ನ ಪಲಿತಾಂಶ ಅದರಲ್ಲು ಫೇಲು!!!
ಅದರಲ್ಲಿ ಬರೋಬ್ಬರಿ 3 ಇಂಗ್ಲಿಷ್ ಫೇಲು.. ಆ ಸಮಯದಲ್ಲಿ ಆಕಾಶವೇ ನನ್ನ ತಲೆ ಮೇಲೆ ಬಿದ್ದಂತ್ತೆ ಅಯಿತು.. ಮುಂದೆ ದಾರಿ ಕಾಣದೆ ಮನೆಯವರಿಗೆ ಹೇಳದೆ ತಲೇ ತಗ್ಗಿಸಿ ಆಚೀಚೆ ಹೊಗುತ್ತಿದ್ದೆ.. ಸ್ವಲ್ಪ ದಿನದ ನಂತರ ನನ್ನ ಫ್ರೆಂಡ್ಸ್ಗೆ ಪರಿಚಯ ಇರುವ ಒಂದು ಹುಡುಗಿಯೊಬ್ಬಳ ಪರಿಚಯವಾಗುತ್ತೆ..
ಅದು ರಾಕಿ ಕಟ್ಟಲು ಅವಳು ಕಾಯುತ್ತಿರುವುದು. ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಹೋದೆ. ರಾಕಿ ಕಟ್ಟಿಸಿಕೊಂಡು ನನ್ನಲ್ಲಿ ಇದ್ದ ಸ್ವಲ್ಪ ಹಣವನ್ನು ನೀಡಿಡಾಗ ಬೇಡ ಎಂದಳು ಆ ನನ್ನ ಸಹೋದರಿ. ನಿಮಗೆ ಇಷ್ಟವಾದ ಒಂದು ಪುಸ್ತಕ ತಂದುಕೊಡಿ ಎಂದಾಗ ನನಗೆ ಆಶ್ಚರ್ಯ !ಅದರು ತಂದು ಕೊಟ್ಟೆ. ಹೀಗೆ ದಿನಾಕಳೆದಂತೆ ಅವಳು ನನ್ನ ಯೋ ಗ ಕ್ಷೇಮ ವಿಚಾರಿಸುತ್ತಿದ್ದಳು.
ಸ್ವಂತ ಅಣ್ಣ ತಂಗಿಯಂತೆ ನಮ್ಮ ಸಂಬಂಧ ಗಾಢವಾಗಿ ಬೆಳೆಯಿತು.. ಅವಳು ಒಂದು ದಿನಾ ನೀನು ಏನು ಓದುತ್ತಿದ್ದಿಯಾ ಅಂತ ಕೇಳಿದಳು? ನಾ ನೇರವಾಗಿ ಫೇಲು ಅಂತ ಹೇಳಿದೆ . ಅವಳು ನಂಬಲೆ ಇಲ್ಲಾ ಕೊನೆಗೆ ಒಂದು ಮಾತು ಹೇಳಿದಳು ನೀವು ಮತ್ತೆ ಏಕೆ ಎಕ್ಸಾಮ್ ತಗೆದುಕೊಳ್ಳಬಾರದು..? ನನಗೆ ನಂಬಿಕೆನೆ ಇಲ್ಲಾ. ಈ ಜನ್ಮದಲ್ಲಿ ನಾ ಪಾಸ್ ಆಗೋದು ಅದರಲ್ಲಿ ಅವಳ ಮಾತು ನನಗೆ ಜೋಕ್ ಅಗಿ ಕಂಡರು ನಾ ಏನು ಮಾತನಾಡದೆ ಸಮ್ಮನಿದ್ದೆ. ಅವಳ ಒತ್ತದಕ್ಕೆ ಪರೀಕ್ಷೆಯನ್ನು ಕಟ್ಟಿದೆ ಆದರೇ ಓದಲು ಪುಸ್ತಕದ ಕೊರತೆ.. ಜೋತೆಗೆ ಎಕ್ಸಾಮ್ ಹೇಗೆ ಬರಿಬೇಕು ಎಂಬುದೆ ಗೊತ್ತಿರಲಿಲ್ಲ ಆ ಟೈಮ್ಲ್ಲಿ ಅವಳಲ್ಲಿದ್ದ ಕೆಲ ಪಸ್ತಕಗಳನ್ನ ನೀಡಿ ಇಂಗ್ಲಿಷ್ ಎಂಬ ವಿಷಯ ಒಂದು ಸಾಮನ್ಯ ವಿಷಯ ಅದೇನು ಅಂತ ದೊಡ್ಡ ವಿಷಯವಲ್ಲ, ಮನಸ್ಸಿಟ್ಟು ಓದಿದರೆ ಚೆನ್ನಾಗಿ ಸ್ಕೋರ್ ಮಾಡಬಹುದೆಂದು ಬುದ್ದಿವಾದ ಹೇಳಿದಳು. ನೀ ಮನಸ್ಸು ಮಾಡಿದರೆ ಪಾಸ್ ಅಗ್ತಿಯಾ ನನಗಿಂತ ಹೆಚ್ಚು ಅಂಕ ಪಡಿತೀಯಾ ಅಂತ ಹೇಳಿದಳು. ನಾ ಒಳಗೊಳಗೆ ನಕ್ಕು ಪೆದ್ದು ಹುಡಗಿ ಅನ್ಕೊಂಡೆ. ಆದರು ಅವಳ ಒಂದೊಂದು ಮಾತು ನನ್ನನ್ನು ದಿನ ಕಾಡತೊಡಗಿತ್ತು, ಅವಳ ಅತ್ಮವಿಶ್ವಾಸದ ಮಾತು ನನ್ನನ್ನು ದಿನ ಕಾಡತೊಡಗಿದವು. ಜೊತೆಗೆ ದಿನಾಲು ಪೋನ್ ಮಾಡಿ ಎಲ್ಲಿವರೆಗು ಓದಿದ್ದಿಯಾ ಅಂತ ಕೇಳುತ್ತಿದ್ದಳು?
ಹುಡಗರ ಆಟ ನಿಮಗೆ ಗೊತ್ತಲ್ಲ ಅದೇಹಾಡು ಅದೇ ರಾಗ ಎನ್ನುತಿದ್ದೆ. ಆ ಮಾತಿಗೆ ಅವಳು ನಗುತ್ತಿದ್ದಳು. ಎಕ್ಸಾಮ್ಗೆ ಕೇವಲ 5 ದಿನ ಮಾತ್ರ ಬಾಕಿ ಉಳಿದಿತ್ತು ಅಗಾ ಪೋನ್ ಮಾಡಿ ವಿಚಾರಿಸಿದಳು ನಾ ಮತ್ತೆ ಅದೇ ಹಾಡು ಅದೇ ರಾಗ ಎಂದಾಗ ಅವಳಲ್ಲಿನ ಕೋಪ ಮುಗಿಲು ಮುಟ್ಟಿತ್ತು, ನನ್ನಲ್ಲಿ ಭಯ ಹುಟ್ಟಿತ್ತು.
ಅವಳು ನನಗೆ ಒಂದು ಸವಾಲು ಹಾಕಿದಳು ನಿನಗೆ ಗೆಲ್ಲುವ ಛಲ, ಮುಂದೊಂದು ದಿನ ನಿನಗೆ ನಿನ್ನ ಗುರಿ ಮುಟ್ಟುವ ಕನಸು ಇದ್ದರೆ ಹಾಗೇ ಈ ನಿನ್ನ ತಂಗಿಯ ಮಾತಿಗೆ ಬೆಲೆ ನೀಡುವುದಾದರೆ? ಈ ಎಕ್ಸಾಮ್ ನಲ್ಲಿ ಬಾಕಿ ಇರೊ 3 ಇಂಗ್ಲಿಷ್ ವಿಷಯದಲ್ಲಿ 2 ಎರಡನ್ನಾದರೂ ಪಾಸ್ ಅಗಿ ತೋರಿಸು ಅಂದಿದ್ದಳು. ಅವಳ ಮಾತನ್ನು ನಾನು ಸವಾಲಾಗಿ ಸ್ವೀಕರಿಸಿ ಹಗಲಿರುಳು ಎನ್ನದೆ ಎಕ್ಸಾಮ್ಗೆ ಉತ್ತಮ ತಯಾರಿ ನಡೆಸಿದೆ ಹಾಗೂ ಚೆನ್ನಾಗಿ ಓದಿದೆ. ಕೊನೆಗೆ ಫಲಿತಾಂಶ ನೋಡುವಾಗ ಮತ್ತೆ ನನ್ನೆದೆಯಲ್ಲಿ ಪುಕು-ಪುಕು ಶುರುವಾಗಿತ್ತು. ಕೆಲ ದಿನಗಳ ನಂತರ ಫಲಿತಾಂಶವನ್ನ ನೋಡ್ತಿನಿ ಎಲ್ಲಾ ವಿಷಯಗಳು ಪಾಸ್ ಅಗಿದ್ದವು ! ಇದು ನನ್ನ ಜೀವನದಲ್ಲಿ ಇಂಗ್ಲಿಷ್ ಎಂಬ ಬದ್ಧ ವೈರಿಯನ್ನು ಕೊನೆಗೂ ಗೆದ್ದೆನೆಲ್ಲ ಎಂಬ ಖುಷಿ. ಅವೆಲ್ಲ 43. 40. 52. ಅಂಕ ಬಂದಿದ್ದವು ಇಷ್ಟು ಅಂಕ ಪಡೆದಿದ್ದು, ಒಂದೇ ಬಾರಿ ಮೂರು ವಿಷಯಗಳನ್ನ ಪಾಸ್ ಮಾಡಿದ್ದನ್ನ ನಾ ಎಂದು ಮರೆಯಲು ಸಾಧ್ಯವೇ ಇಲ್ಲಾ.
ನನ್ನ ಈ ಎಲ್ಲ ಶ್ರೇಯಸ್ಸಿಗೆ ಕಾರಣಕರ್ತಳು ಅಂದರೆ ಅವಳೆ ನನ್ನ ತಂಗಿ ಸೈದಾಬಾನು. ಅವಳೇ ನನಗೇ ಎಲ್ಲಾ .. ಅವಳಿದ್ದರೆ ಇಡೀ ಜಗತ್ತನ್ನೇ ಗೆಲ್ಲಬಲ್ಲೇ ಎಂಬ ಭರವಸೆ ಇದೆ. ನನ್ನ ಭವಿಷ್ಯಕ್ಕೆ ಉತ್ತಮ ಅಡಿಪಾಯ ಹಾಕಿದವಳು ನಾನು ಇಂದು ಸಮಾಜದಲ್ಲಿ ತಲೆ ಎತ್ತಿ ನೆಡೆಯಲು ಅವಳೇ ನನಗೆ ಸ್ಪೂರ್ತಿ. ನನಗೆ ಆದ ಆ ಖುಷಿಯಲ್ಲಿ ಆಕಾಶದಲ್ಲಿ ಸ್ವಚ್ಚಂದವಾಗಿ ಹಾರಾಟ ನಡಸುತ್ತಿದ್ದೇನೆ . ಕಾರಣ ಅವಳ ಅತ್ಮವಿಶ್ವಾಸ ತುಂಬಿದ ರಕ್ಕೆಯಂತ ಮಾತುಗಳು ನನ್ನನ್ನು ಆಕಾಶದಲ್ಲಿ ಹಾರುವಂತೆ ಮಾಡಿದೆ. ನಾನು ಆ ದೇವರಿಗೆ ಕೈಮುಗಿತಿನೊ ಇಲ್ಲವೊ ಗೊತ್ತಿಲ್ಲ ಅವಳಿಗೆ ಮಾತ್ರ ಈ ನನ್ನ ಎರಡು ಕೈ ಜೋಡಿಸಿ ಕೈ ಮುಗಿಯುತ್ತಿನಿ ಏಕೆಂದರೆ ಅವಳೆ ನನ್ನ ಆರಾಧನ ದೇವತೆ..
ಇಂದು ನಾನು ನಿನ್ನನ್ನು ತುಂಬಾ ಮಿಸ್ಸ್ ಮಾಡ್ಕೊತ್ತಿದ್ದೀನಿ, ನಿನ್ನ ನೋಡದನೆ ಅದು ಎಷ್ಟೊ ದಿನಾ ಅಗಿವೆ. ನಾ ಏನಾದರು ತಪ್ಪು ಮಾಡಿದ್ದರೆ ದಯವಿಟ್ಟು ಕ್ಷಮಿಸು. ಒಂದಂತು ಸತ್ಯ ಯಾರು ಏನೇ ಹೇಳಿದರು ನನ್ನ ಬಗ್ಗೆ ತಲೆಕೆಡಸ್ಕೊಬೇಡ, ನೀ ಎಂದೆಂದೊ ನನ್ನ ಪ್ರೀತಿಯ ತಂಗಿ. ನನ್ನ ಇವತ್ತಿನ ಯಶಸ್ವಿಗೆ ಪ್ರಮುಖ ಕಾರಣ ನೀನೇ ಸೈದಾ ನಿನೇ. ನೀ ಎಲ್ಲಿದ್ದರು ಹೇಗೆ ಇದ್ದರು ಸದಾ ನಗುತಿರು. ಚೆನ್ನಾಗಿರು ಎಂದು ಹಾರೈಸುವೇ.
ಇಂತೀ ನಿನ್ನ ಪ್ರೀತಿಯ ಅಣ್ಣ..
ಹರೀಶ್.ಎಸ್.ಎಂ.
ದಾವಣಗೆರೆ ವಿಶ್ವವಿದ್ಯಾಲಯ.