ನನಗೆ ನನ್ನ ಅಮ್ಮನೇ ಪ್ರೇರಣೆ. ಹದಿಹರೆಯದಲ್ಲಿ ಅಮ್ಮ ನನ್ನನ್ನು ಐಬ್ರೋ ಮಾಡಿಸಲು ಬ್ಯೂಟಿ ಪಾರ್ಲರ್‌ಗೆ ಕರೆದುಕೊಂಡು ಹೋಗಿದ್ದರು. ನನಗೆ ಸಿಂಗರಿಸುವುದು, ಬಟ್ಟೆಗಳನ್ನು ಸ್ಪೈಲಿಶ್ ಆಗಿ ತೊಡುವುದೆಂದರೆ ತುಂಬಾ ಇಷ್ಟ. ಬ್ಯೂಟಿ ಪಾರ್ಲರ್‌ಗೆ ಹೋದಾಗಲೆಲ್ಲಾ, ಅಲ್ಲಿ ಬ್ಯೂಟೀಷನ್‌ಗಳು ಏನೆಲ್ಲಾ ಮಾಡುತ್ತಾರೆ ಎಂಬುದನ್ನು ಎವೆಯಿಕ್ಕದೆ ನೋಡುತ್ತಿದ್ದೆ. ಅದ್ಹೇಗೆ ತನ್ನನ್ನು ತಾನೇ ಸುಂದರವಾಗಿ ಕಾಣುವಂತೆ ಮಾಡಿಕೊಳ್ಳುವುದು ಎಂಬುದರ ಬಗ್ಗೆ ಕುತೂಹಲ ತುಸು ಜಾಸ್ತಿಯೇ ಇತ್ತು. ನನ್ನಲ್ಲಿನ ಸೌಂದರ್ಯ ಪ್ರಜ್ಞೆಯನ್ನು ಅಮ್ಮ ಪತ್ತೆ ಹಚ್ಚಿದ್ದರು. ನಾನು ಸ್ಟೈಲಿಶ್ ಆಗಿಯೇ ಡ್ರೆಸ್ ಮಾಡುತ್ತಿದ್ದೆ.
ಅಮ್ಮನೂ ಇದಕ್ಕೆ ಪ್ರೋತ್ಸಾಹ ನೀಡುತ್ತಿದ್ದರು. ಹೀಗಿರುವಾಗ ಶಹನಾಜ್ ಹುಸೈನ್‌ಳ ಬಗ್ಗೆ ಮ್ಯಾಗಜೀನ್‌ವೊಂದರಲ್ಲಿ ಓದಿದೆ. ಅವಳ ಬಗ್ಗೆ ಮತ್ತಷ್ಟು ಓದಬೇಕೆಂದೆನಿಸಿತು. ಹೀಗೆ ವಿಷಯಗಳನ್ನು ಸಂಗ್ರಹಿಸುತ್ತಾ ಹೋದೆ. ಡಿಗ್ರಿ ಮುಗಿಸಿದ ಮೇಲೆ ನನಗೆ ಬ್ಯೂಟಿಷನ್ ಕೋರ್ಸ್ ಮಾಡಬೇಕೆಂದೆನಿಸಿತು. ಹಾಗೆ ಒಂದೂವರೆ ವರ್ಷದ ಕೋರ್ಸ್ ಮಾಡಿದೆ. ಆಮೇಲೆ ಒಂದೆರಡು ವರ್ಷ ಗ್ಯಾಪ್ ಬಂದಾಗ ನನಗೆ ಟಚ್ ಬಿಟ್ಟು ಹೋಯ್ತು. ನಾನು ಕಲಿತದ್ದು ಸಾಲಲ್ಲ, ಇನ್ನಷ್ಟು ಪರ್‌ಫೆಕ್ಷನ್ ಬರಬೇಕೆಂಬ ಹಂಬಲದಿಂದ ಏಳು ತಿಂಗಳು ಮತ್ತೆ ಬ್ಯೂಟಿಷನ್ ಕೋರ್ಸ್ ಮಾಡಿದೆ. ಆವಾಗ ನನಲ್ಲಿ ಆತ್ಮ ವಿಶ್ವಾಸ ಹೆಚ್ಚಾಯಿತು. ಸ್ವಂತವಾಗಿ ಸಲೂನ್ ಆರಂಭಿಸಿದೆ. ಅಲ್ಲಿ 6 ವರ್ಷ ದುಡಿದೆ. ಇಷ್ಟೆಲ್ಲಾ ಮಾಡಲು ಪ್ರೇರ ಣೆಯಾದದ್ದು ನನ್ನ ಅಮ್ಮ, ಶೆಹನಾಜ್ ಹುಸೈನ್ ಎಂಬ ಆ ಛಲಗಾರ್ತಿ ಬ್ಯೂಟಿಷನ್.
ಈ ಮಹಿಳಾ ದಿನವನ್ನು ನಾನು ನನ್ನ ಅಮ್ಮನಿಗೆ ಅರ್ಪಿಸುತ್ತೇನೆ. ಅವಳ ಸಾಥ್ ಇಲ್ಲದೇ ಇರುತ್ತಿದ್ದರೆ ನಾನು...ನಾನಾಗಿರುತ್ತಿರಲಿಲ್ಲ.
-ಪ್ರೀತಿ ವಸಿಷ್ಠ