ಅಮ್ಮ ನಾಗರತ್ನ ಕೆ ಕಾಶಪ್ಪನವರ ಮತ್ತು ವಿನಯಕುಮಾರ ಕೆ ಕಾಶಪ್ಪನವರ 
ನನ್ನ ಸ್ಫೂರ್ತಿ

ಅಮ್ಮನೆಂಬ ಶಕ್ತಿ

ಪ್ರತಿಯೊಬ್ಬ ಯಶಸ್ವಿ ಗಂಡಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ,ಹೌದು ನನ್ನ ಬದುಕಿನಲ್ಲಿ ಪ್ರಧಾನ ಪಾತ್ರವಹಿಸಿದ್ದ ಮಹಿಳೆ...

ಪ್ರತಿಯೊಬ್ಬ ಯಶಸ್ವಿ ಗಂಡಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ,ಹೌದು ನನ್ನ ಬದುಕಿನಲ್ಲಿ ಪ್ರಧಾನ ಪಾತ್ರವಹಿಸಿದ್ದ ಮಹಿಳೆ ನನ್ನ ಅಮ್ಮ . ನನ್ನ ಬಾಲ್ಯದಲ್ಲಿ ಕಿವಿ ತಿರುವಿ ಕೈ ಹಿಡಿದು ಅಕ್ಷರ ಕಲ್ಲಿಸಿದ ಗುರು, ಎಲ್ಲಾ ಮಕ್ಕಳೀಗಿಂತ ಬೆನ್ನಾಗಿ ಸಿಂಗರಿಸಿ ಶಾಲೆಗೆ ಕಳುಹಿಸಿ ಹಸಿವಾದಾಗ ಅಮೃತಕ್ಕೂ  ಮಿಗಿಲಾದ ಕೈ ತುತ್ತು ತಿನಿಸಿ ಅದರಲ್ಲಿಯೇ ಸಂತೋಷ ಕಾಣುವ ಸಾಗರ ಅವಳು ಹೊರಗಿನ ಪ್ರಪಂಚದ ಅರಿವು ಸೌದರ್ಯದ ಬಗ್ಗೆ ಕಲ್ಪನೆಯೆ ಇಲ್ಲಾ ನಾನೇ  ಅವಳ ಆಕಾಶ ಚಂದ್ರ ನನ್ನ ಮೇಲೆ ತನಗಾಗಿ ಬದಕುವುದನ್ನೇ  ಮರೆತು ನನ್ನಲ್ಲೇ ಬದುಕು ತನ್ನದು ಎಂದುಕೂಂಡು ನನ್ನ ಎಲ್ಲಾ ಕಷ್ಟ ನೋವುಗಳಿಗೆ ಮಿಡಿದವಳು  ನನ್ನ ಅಮ್ಮ.

ನನ್ನ ಜೀವನದ ಎಷ್ಟೂ ಸಂದರ್ಭದಲ್ಲಿ ಕೇಲವು ವಿಷಯಗಳಲ್ಲಿ ಸೋತು ಮನ ನೊಂದು ನಿಂತಾಗ ಪರವಾಗಿಲ್ಲಾ ಮಗನೆ ಮತ್ತೆ ಸಾವಿರ ಅವಕಾಶ ನಿನ್ನ ಪಾಲಿಗೆ ಇವೆ, ಚಿಂತಿಸಬೇಡಾ ಮತ್ತೆ ಪ್ರಯತ್ನಿಸು ಎನ್ನುವಳು ಅಮ್ಮ.  ಯಾಕೋ  ನನಗೆ ಜಯ ಸಾದ್ಯವಾಗುತ್ತಿಲ್ಲ  ಎಂದು ಕಣ್ಣೀರು ತೆರದರೆ "ಏ ಕತ್ತೆ ಯಾರೊ ನಿನಗೆ ಆಗೋದಿಲ್ಲಾ ಅನ್ನುವವ ರು?, ಮಗನೇ ನಿನ್ನ ಕೈಯಲ್ಲಿ ಆಗುತ್ತೆ ಪುಟ್ಟಾ ನಾನು ಇಲ್ಲಾವಾ ನಿನ್ನ ಜೊತೆ ಎಂದು ನನ್ನ ಬೆನ್ನು ಸವರಿ ನನ್ನ ನೋವು ಮರೆಸಿ ಹೊಸದೊಂದು ಪ್ರಯತ್ನಕ್ಕೆ ನನ್ನನು ಸಿದ್ದಪಡಿಸುವಳು. ಯಾವಾಗಲೂ  ನನ್ನ ಹಿಂದೆಯೇ ತಾನು ಓಡುವಳು . ಅನೇಕ ವಿಷಯದಲ್ಲಿ ನಾನು ತೆಗೆದುಕೊಂಡ ನಿರ್ಧಾರಕ್ಕೆ ಬೆಂಬಲವಾಗಿ ಮಗನೆ ನಿನ್ನ ಆಯ್ಕೆಸರಿ ಎಂದು ನನ್ನ ನಿರ್ಧಾರ ದ ಸಾಥಿಯ ಹಾಗೆ ಪ್ರಜ್ವಲ್ಲಿಸುವ ಜೋತಿ ನನ್ನ ಅಮ್ಮ. ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವ ಹಾಗೆ ನನ್ನ ಉಡಾಫೆಯ ತಪ್ಪುಗಳಿಗೆ ಅಪ್ಪ ಬೈದರೆ ಅಮ್ಮ ನನ್ನನು ಬೆಂಬಲಿಸಿ ಅಪ್ಪನ ಬಾಯಿ ಮುಚ್ಚಿಸಿ ಮರೆಯಲ್ಲಿ ಕರೆದು ತಲೆಸವರಿ ಮಗನೆ ಅದು ತಪ್ಪು ಹಾಗೆ ಮಾಡಬಾರದು ಎನ್ನುವಳು.
    ನನ್ನ Finance minister  ಕೂಡಾ ಹೌದು.  ಅಪ್ಪನ ದುಡ್ಡನ್ನು ಜೇಬಿನಿಂದ ಎತ್ತಿ ಕೂಡಿಟ್ಟ ಹಣ್ಣವನ್ನು ನನ್ನ ಖರ್ಚಿಗೆ ಬೈಯುತ್ತಲೇ  ಸಂತೋಷದಿಂದ ಕೊಡುವಳು. ನನ್ನ ಸಣ್ಣ ಸಣ್ಣ ಸಾಧನೆ ಅವಳಿಗೆ ಶಿಖರದಷ್ಟು ಸಂತೋಷ ಅವಳಿಗೆ. ಅವಳಿಲ್ಲದ ನನ್ನ ಜೀವ ಜೀವನ ಸಾಧನೆ ಎನೇ  ಇದ್ದರೂ ಶೂನ್ಯ !. ನನ್ನ ಎಲ್ಲಾ ಕನಸು ಆಸೆಗಳ ಉಸಿರವಳು,  ಬದುಕು ಮಾತ್ರ ನನ್ನದು. ನನ್ನ ಜೀವನದ ಏಳು ಬೀಳುಗಳಲ್ಲಿ ಸದಾ ನನ್ನ ಜೊತೆಯಿರುವ ಅಮ್ಮ ನಿನಗೆ ಮಹಿಳಾ ದಿನದ ಶುಭಾಶಯಗಳು.


-ವಿನಯಕುಮಾರ ಕೆ ಕಾಶಪ್ಪನವರ
 ಪತ್ರಿಕೋದ್ಯಮ ವಿದ್ಯಾರ್ಥಿ
 ಎಸ್.ಡಿ.ಎಮ್ ಕಾಲೇಜ್ ಉಜಿರೆ (ದ.ಕ)
vinaykumarkashappanavar@gmail.com
 

       
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ನಿರ್ಣಯಕ್ಕೆ ಒಪ್ಪಬೇಕು, ವರಿಷ್ಠರು ಹೇಳಿದಾಗ ದೆಹಲಿಗೆ ಹೋಗುವೆ: ಖರ್ಗೆ ಭೇಟಿ ಬಳಿಕ ಸಿದ್ದರಾಮಯ್ಯ ಪ್ರತಿಕ್ರಿಯೆ; ಡಿಕೆಶಿ ಆಪ್ತರ ನಡೆಗೆ CM ತೀವ್ರ ಅಸಮಾಧಾನ

ರಾಜ್ಯದಲ್ಲಿ ಯಾರೂ ನಿರೀಕ್ಷಿಸದಂತಹ "ಸ್ಫೋಟಕ" ರಾಜಕೀಯ ಬೆಳವಣಿಗೆ: ಕುಮಾರಸ್ವಾಮಿ ಭವಿಷ್ಯ

'ಸಿಎಂ ಕುರ್ಚಿ' ಕದನದ ನಡುವೆ ವರದಿಗಾರರ ಪ್ರಶ್ನೆಗೆ ಕೆರಳಿದ ಡಿಕೆಶಿ! ಹೇಳಿದ್ದೇನು?

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ: ನಾಯಕ ಯಾರು? ರಿಷಭ್ ಪಂತ್ ಅಥವಾ ಕೆಎಲ್ ರಾಹುಲ್! ನಾಳೆ ನಿರ್ಧಾರ

"ನಾವೂ ಕಲಿಯಬೇಕು": ಮಾಮ್ದಾನಿ-ಟ್ರಂಪ್ ಭೇಟಿಯ ಬಗ್ಗೆ ತರೂರ್ ಪೋಸ್ಟ್; ನೀವು ಹೇಳಿದ್ದು ಸರಿ ಆದರೆ ರಾಹುಲ್ ಗೆ ಇದೆಲ್ಲಾ ಅರ್ಥ ಆಗತ್ತಾ?: BJP

SCROLL FOR NEXT