ಮೆಲ್ಬೋರ್ನ್: ನಕಲಿ ವೀಸಾ ಮತ್ತು ಉದ್ಯೋಗ ನೇಮಕಾತಿ ಹೆಸರಲ್ಲಿ ಯುವಕ ರನ್ನು ವಂಚಿಸುತ್ತಿದ್ದ ಆರೋಪದ ಮೇರೆಗೆ ಭಾರತೀಯ ಮೂಲದ ಮೂವರು ಉದ್ಯಮಿ ಗಳನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಬಲ್ಜಿತ್ ಬಾಬ್ಬಿ ಸಿಂಗ್, ಮುಖೇಶ್ ಶರ್ಮ ಮತ್ತು ರಾಕೇಶ್ ಕುಮಾರ್ ಬಂಧಿತರು. ಬಾಬ್ಬಿ ಹೊಂದಿದ್ದ ಫೆರಾರಿ ಕಾರನ್ನು ಮುಟ್ಟು ಗೋಲು ಹಾಕಿಕೊಳ್ಳ ಲಾಗಿದೆ.
ಈ ಮೂವರು ಬಂಧಿತರು ಆಸ್ಟ್ರೇಲಿಯಾದ ಪೋಸ್ಟಲ್ ಇಲಾಖೆಗೆ ಸಿಬ್ಬಂದಿ ನೇಮಿಸುತ್ತಿ ದ್ದರು. ಇದಕ್ಕಾಗಿ ಭಾರತೀಯ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳುತ್ತಿದ್ದರು.ಒಬ್ಬರಿಂದ 10 ಸಾವಿರ ಡಾಲರ್ ವಸೂಲಿ ಮಾಡುತ್ತಿದ್ದರು. ಉತ್ತಮ ಉದ್ಯೋಗದ ಆಸೆಯಿಂದ ಬರುವವರಿಗೆ ನಕಲಿ ವೀಸಾಗಳನ್ನು ನೀಡುವುದರೊಂದಿಗೆ ಕಳೆದರ್ಜೆ ಕೆಲಸಗಳಲ್ಲಿ ನಿಯೋಜಿಸುತ್ತಿದ್ದರು. ಬಾಬ್ಬಿ ಮೆಲ್ಬೋರ್ನ್‍ನಲ್ಲಿ ಸೇಂಟ್ ಸ್ಟೀಪನ್ ಇನ್ಸ್‍ಟ್ಯೂಟ್ ನಡೆಸುತ್ತಿದ್ದು, ರಾಕೇಶ್ ನಿರ್ದೇಶಕನಾಗಿದ್ದ. ಮುಖೇಶ್ ಸಿಂಬಿ ಯೋಸಿಸ್ ಇನ್ಸ್‍ಟ್ಯೂಟ್ ಎಂಬ ಸಂಸ್ಥೆ ನಡೆಸುತ್ತಿದ್ದಾನೆ.