ಕಾಬೂಲ್: ಆಘ್ಫಾನಿಸ್ತಾನದಲ್ಲಿ ನಡೆದ ಎರಡು ಪ್ರತ್ಯೇಕ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ನ್ಯಾಟೋ ಸೈನಿಕರು ಸೇರಿದಂತೆ 40 ಮಂದಿ ಮೃತಪಟ್ಟಿದ್ದಾರೆ ಎಂದು ಆಂತರಿಕ ಸಚಿವಾಲಯ ಹೇಳಿದೆ.
ಕಳೆದ ರಾತ್ರಿ ಸ್ಫೋಟಕಗಳು ತುಂಬಿದ್ದ ಟ್ರಕ್ ಒಂದನ್ನು ಜನದಟ್ಟಣೆ ಇರುವ ರಸ್ತೆಗೆ ನುಗ್ಗಿಸಿ ಮೊದಲ ಸ್ಫೋಟ ನಡೆಸಲಾಯಿತು. ಸ್ಫೋಟದ ತೀವ್ರತೆಗೆ 10 ಅಡಿ ಆಳದವರೆಗೆ ಭೂಮಿ ಬಿರುಕು ಬಿಟ್ಟಿತ್ತು. ಸುತ್ತಮುತ್ತಲಿನ ಕಟ್ಟಡಗಳು ನೆಲಕ್ಕುರುಳಿದ್ದವು. ಘಟನೆಯಲ್ಲಿ ಮಹಿಳೆಯರು, ಮಕ್ಕಳು ಸೇರಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟು, 240ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದರು.
ಇದಾದ ಬಳಿಕ ಕೆಲ ಗಂಟೆಗಳು ಅಂತರದಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ಬಂದ ದಾಳಿಕೋರನೊಬ್ಬ ಕಾಬೂಲ್‌ನಲ್ಲಿರುವ ಪೊಲೀಸ್ ಅಕಾಡೆಮಿಯ ಮುಂದೆ ಸ್ಫೋಟಿಸಿಕೊಂಡನು. ಈ ಘಟನೆಯಲ್ಲಿ 20 ಆಫ್ಘನ್ ಪೊಲೀಸ್ ಕೆಡೆಟ್‌ಗಳು ಬಲಿಯಾದರು. ಒಟ್ಟಾರೆ ಪ್ರತ್ಯೇಕ ದಾಳಿಯಲ್ಲಿ 40 ಮಂದಿ ಸಾವನ್ನಪ್ಪಿದ್ದಾರೆ.
ತಾಲಿಬಾನ್ ಮುಖಂಡ ಮುಲ್ಲಾ ಒಮರ್ ಮೃತಪಟ್ಟಿರುವುದನ್ನು ಅಧಿಕೃತವಾಗಿ ಘೋಷಿಸಿದ ನಂತರ ನಡೆಯುತ್ತಿರುವ ಮೊದಲ ಭೀಕರ ದಾಳಿ ಇದಾಗಿದೆ.