ಬ್ಯಾಂಕಾಕ್ ನಲ್ಲಿ ಸ್ಪೋಟಗೊಂಡ ದೃಶ್ಯ 
ವಿದೇಶ

ಭಾರತೀಯರೆಲ್ಲರೂ ಸುರಕ್ಷಿತರಾಗಿದ್ದಾರೆ: ಭಾರತೀಯ ರಾಯಭಾರ ಕಚೇರಿ

ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿ ಹಿಂದೂ ದೇವಾಲಯದ ಹೊರಗೆ ಸೋಮವಾರ ಸಂಭವಿಸಿದ ಬಾಂಬ್ ಸ್ಪೋಟದಿಂದ ಯಾವುದೇ ಭಾರತೀಯರಿಗೆ...

ಬ್ಯಾಂಕಾಕ್: ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಂಕ್ ನಲ್ಲಿ ಹಿಂದೂ ದೇವಾಲಯದ ಹೊರಗೆ ಸೋಮವಾರ ಸಂಭವಿಸಿದ ಬಾಂಬ್ ಸ್ಪೋಟದಿಂದ ಯಾವುದೇ ಭಾರತೀಯರಿಗೆ ತೊಂದರೆಯುಂಟಾಗಿಲ್ಲ. ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಅಲ್ಲಿರುವ ಭಾರತೀಯ ರಾಯಭಾರಿ ತಿಳಿಸಿದ್ದಾರೆ.

ಇಂದು ಸಾಯಂಕಾಲ 7 ಗಂಟೆ ಹೊತ್ತಿಗೆ ಎರವಾನ್ ಬ್ರಹ್ಮ ದೇವಾಲಯದ ಹೊರಗೆ ಸ್ಪೋಟ ಸಂಭವಿಸಿದೆ. ದೇವಾಲಯ ಜನನಿಬಿಡ ಪ್ರದೇಶದಲ್ಲಿದೆ. ಸುತ್ತಮುತ್ತ ಶಾಪಿಂಗ್ ಮಾಲ್ ಗಳಿವೆ.

ಥೈಲ್ಯಾಂಡ್ ಸ್ಪೋಟದ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರ ಕಚೇರಿ ಸಹಾಯ ಸಂಖ್ಯೆಯನ್ನು ತೆರೆದಿದೆ. ಭಾರತೀಯರು ಅವಶ್ಯಕತೆಯಿದ್ದಲ್ಲಿ ತುರ್ತುಸಂಖ್ಯೆ 66618819218, ರಾಯಭಾರ ಸ್ಥಿರ ದೂರವಾಣಿ ಸಂಖ್ಯೆ 6622580300-5, 66614021434, 66922605849ಗೆ ಕರೆ ಮಾಡಬಹುದು.

ಜೆನಿಲಿಯಾ ಡಿಸೋಜಾ ಇದ್ದರು: ಬಾಂಬ್ ಸ್ಪೋಟಗೊಂಡ ಸ್ಥಳದ ಪಕ್ಕ ಶಾಪಿಂಗ್ ಮಾಲ್ ವೊಂದರಲ್ಲಿ ಬಾಲಿವುಡ್ ನಟಿ ಜೆನಿಲಿಯಾ ಡಿಸೋಜಾ ಇದ್ದರು.

ಘಟನೆಯಲ್ಲಿ ಅವರು ಪಾರಾಗಿದ್ದು, ಸಾವಿಗೀಡಾದವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ ಅವರು, ಬಾಂಬ್ ಸ್ಪೋಟಗೊಂಡ ಎದುರಿನ ಮಾಲ್ ವೊಂದರಲ್ಲಿ ನಾವಿದ್ದೇವೆ. ಈಗ ಪರಿಸ್ಥಿತಿ ತುಂಬಾ ಬಿಗುವಿನಿಂದ ಕೂಡಿದೆ. ಪ್ರಾಣ ಕಳೆದುಕೊಂಡವರ ಬಗ್ಗೆ ನೋವಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಮಹಾಲಯ ಅಮಾವಾಸ್ಯೆಯಂದು ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!