ಹೊತ್ತಿ ಉರಿಯುತ್ತಿರುವ ಜೆಟ್ ವಿಮಾನ 
ವಿದೇಶ

ಶೋರ್​ಹ್ಯಾಂ ವೈಮಾನಿಕ ಪ್ರದರ್ಶನದಲ್ಲಿ ವಿಮಾನ ಪತನ: 7ಸಾವು

ಇಂಗ್ಲೆಂಡಿನ ಶೋರ್​ಹ್ಯಾಂ ವೈಮಾನಿಕ ಪ್ರದರ್ಶನದ ಸಮಯದಲ್ಲಿ ಜೆಟ್ ವಿಮಾನವೊಂದು ವಾಹನ ದಟ್ಟಣೆಯಿಂದ ಕೂಡಿದ್ದ ರಸ್ತೆಗೆ ಅಪ್ಪಳಿಸಿದ ಪರಿಣಾಮ ಸ್ಪೋಟಗೊಂಡು...

ಇಂಗ್ಲೆಂಡಿನ ಶೋರ್​ಹ್ಯಾಂ ವೈಮಾನಿಕ ಪ್ರದರ್ಶನದ ಸಮಯದಲ್ಲಿ ಜೆಟ್ ವಿಮಾನವೊಂದು ವಾಹನ ದಟ್ಟಣೆಯಿಂದ ಕೂಡಿದ್ದ ರಸ್ತೆಗೆ ಅಪ್ಪಳಿಸಿದ ಪರಿಣಾಮ ಸ್ಪೋಟಗೊಂಡು 7 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.14ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಲೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.


ಈ ಏರ್ ಶೋದಲ್ಲಿ ಹಲವಾರು ವಿಮಾನಗಳು ಕಸರತ್ತು ನಡೆಸುತ್ತಿದ್ದವು. ಈ ಸಮಯದಲ್ಲಿ ಹಾಕರ್ ಹಂಟರ್ ಎಂಬ ವಿಮಾನದ ಪೈಲಟ್ ಆಗಸದಲ್ಲಿ ಸಾಕಷ್ಟು ಎತ್ತರಕ್ಕೆ ತೆರಳಿ ಪಲ್ಟಿ ಹೊಡೆಯುವ ಕಸರತ್ತು ಪ್ರದರ್ಶಿಸುತ್ತಿತ್ತು.  ಸಂದರ್ಭದಲ್ಲಿ ವಿಮಾನ ನೆಲಮಟ್ಟಕ್ಕೆ ತಲುಪಿ, ಅಲ್ಲಿಂದ ಆಗಸಕ್ಕೆ ಚಿಮ್ಮಬೇಕಿತ್ತು. ಆದರೆ ಈ ವೇಳೆ ವಿಮಾನ ಆಯ ತಪ್ಪಿದ್ದು ತಕ್ಷಣ ರಸ್ತೆಗೆ ಅಪ್ಪಳಿಸಿತು. ಇದರಿಂದ ವಿಮಾನ ಸ್ಪೋಟಗೊಂಡಿತಲ್ಲದೇ ಭಾರೀ ಪ್ರಮಾಣದ ಬೆಂಕಿ ಹೊತ್ತಿಕೊಂಡಿತು ಎನ್ನಲಾಗಿದೆ.

ಅಪಘಾತಕ್ಕೀಡಾದ ವಿಮಾನದ ಪೈಲಟ್ ಅನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT