ಬರ್ಲಿನ್: ನೇತಾಜಿ ಸುಭಾಶ್‍ಚಂದ್ರ ಬೋಸ್‍ಗೆ ಸಂಬಂಧಿಸಿದ ಗೌಪ್ಯ ಕಡತದ ಮಾಹಿತಿ ಬಹಿರಂಗ ಕ್ಕೆ ಪ್ರಧಾನಿ ಮೋದಿಯವರಿಗೆ ಕೋರಿದ್ದ ನೇತಾಜಿ ಕುಟುಂಬ ದೀರ್ಘ ಕಾಯುವಿಕೆಯ ಬಳಿಕ ಇದೀಗ ಬ್ರಿಟನ್ ಸರ್ಕಾರದ ಮೊರೆಹೋಗಿದೆ.
ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದ ನೇತಾಜಿ ಮೊಮ್ಮಗ ಸೂರ್ಯ ಕುಮಾರ್ ಬೋಸ್, ಗೌಪ್ಯ ಕಡತಗಳನ್ನು ಬಹಿರಂಗಪಡಿಸುವಂತೆ ಕೋರಿದ್ದರು.
ಆದರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಈ ನಡುವೆ ಲಂಡನ್‍ನಲ್ಲಿರುವ ತಮ್ಮ ಸಹೋದರಿ ಬ್ರಿಟನ್‍ಗೆ ಕೋರಿಕೆ ಸಲ್ಲಿಸಿದ್ದು, ಸರ್ಕಾರ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ. ಅದರರ್ಥ ಬ್ರಿಟನ್ ಬಳಿಯೂ ನೇತಾಜಿಗೆ ಸಂಬಂಧಿಸಿದ ರಹಸ್ಯ ಕಡತಗಳಿವೆ ಎಂಬುದು ದೃಢವಾಗಿದೆ ಎಂದು ಸೂರ್ಯ ಹೇಳಿದ್ದಾರೆ.