ವಿದೇಶ

ಐಎಸ್‍ನ ಸಮರಕ್ಕೆ ನೆಟ್ ಬ್ರೇಕ್!

Mainashree
ಬ್ರಸೆಲ್ಸ್: ಇಂಟರ್ ನೆಟ್ಟನ್ನು ಸಮರ್ಪಕವಾಗಿ ಬಳಸುವ ಉಘ್ರ ಸಂಘಟನೆ ಐಎಸ್ ಅನ್ನು ಮಟ್ಟ ಹಾಕಲು ಐರೋಪ್ಯ ಒಕ್ಕೂಟ ಮುಂದಾಗಿದೆ. 
ಗೂಗಲ್, ಫೇಸ್ ಬುಕ್, ಟ್ವಿಟರ್ ಒಕ್ಕೂಟದ ಜತೆಗೆ ಕೈಜೋಡಿಸಿವೆ. ಏಕೆಂದರೆ ಜಾಲತಾಣದ ಮೂಲಕ ಯುವಕರ ಸಂಪರ್ಕ ಸುಲಭವೆಂದು ಮನಗಂಡಿರುವ ಸಂಘಟನೆಯ ಆನ್ ಲೈನ್ ಯುದ್ಧಕ್ಕೆ ಬ್ರೇಕ್ ಹಾಕಲು ಈ ನಿರ್ಧಾರ ಕೈಗೊಂಡಿವೆ. 
ತಮ್ಮ ದುರ್ಬೋಧೆಗಳ ಹರತಡುವಿಕೆಗೆ ಉಗ್ರರು ಅಂತರ್ಜಾಲವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಇದು ನಿಲ್ಲಬೇಕಿದೆ. ಅಂತರ್ಜಾಲ ಉದ್ಯಮದ ಜತೆಗೆ ನಾವು ಮಾಡಿಕೊಳ್ಳುವ ಸ್ವಇಚ್ಛೆಯ ಈ ಭಾಗೀದಾರಿಕೆಯು ಈ ಸಮಸ್ಯೆಯನ್ನು ಉತ್ತರಿಸಲಿದೆ. 
ಈ ವೇದಿಕೆಯು ಕಾರ್ಯಾಚರಣೆಗೆ ಪೂರಕವಾಗಿ ತಜ್ಞರ ಜ್ಞಾನವನ್ನು ಬಳಸಿಕೊಳ್ಳಲಿದೆ ಎಂದು ಯುರೋಪಿಯನ್ ಒಕ್ಕೂಟದ ಆಂತರಿಕ ವ್ಯವಹಾರಗಳ ಆಯುಕ್ತ ದಿಮಿತ್ರಿ ಅವ್ರಮೊಪೌಲೊಸ್ ಹೇಳಿದ್ದಾರೆ. ಜಿಹಾದಿಗಳು ತಮ್ಮ ಚಟುವಟಿಕೆಗಳ ಹರಡುವಿಕೆಗೆ ಜಾಲತಾಣಗಳನ್ನು ಬಳಸುವುದನ್ನು ಈ ವೇದಿಕೆ ತಡೆಗಟ್ಟಲಿದೆ.
ಈ ವೇದಿಕೆಯು ಯುರೋಪ್ ನಿಂದ ವಿದೇಶಗಳ ಯುದ್ಧಗ್ರಸ್ತ ಪ್ರದೇಶಗಳಿಗೆ ರೈಲು, ವಿಮಾನಗಳ ಮೂಲಕ ಪ್ರಯಾಣಿಸುವ ಉಗ್ರರ ಮೇಲೆ ಕಣ್ಣಿಡಲಿದೆ. ಒಂದು ಅಂದಾಜಿನಂತೆ ಯುರೋಪ್ ನಿಂದ 5 ಸಾವಿರ ಮಂದಿ ಸಿರಿಯಾ ಹಾಗೂ ಇರಾಕ್ ಗಳಿಗೆ ಹೋಗಿ ಕುಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. 
ಆನ್ ಲೈನ್ ದ್ವೇಷ ಹಿಂಸೆಗಳಿಗೆ ತೆರೆದುಕೊಳ್ಳುವ ಮಂದಿ ವಾಸ್ತವದಲ್ಲೂ ಅದರಲ್ಲಿ ಭಾಗಿಯಾಗುವ ಸಾಧ್ಯತೆಗಳು ಅಧಿಕ ಎನ್ನಲಾಗಿದೆ.
SCROLL FOR NEXT