ವಿದೇಶ

ಇಲ್ಲಿ ಏಡ್ಸ್ ಬಗ್ಗೆ ಮಾತಾನಾಡುವುದು ಘನಘೋರ ಅಪರಾಧ

Shilpa D

ಇಸ್ಲಮಾಬಾದ್ : ಪಾಕಿಸ್ತಾನದಲ್ಲಿ ಏಡ್ಸ್ ರೋಗದ ಬಗ್ಗೆ ಮಾತನಾಡುವಂತಿಲ್ಲ. ಜೊತೆಗೆ ಎಲ್ಲಿಯೂ ಕಾಂಡೋಮ್ ಜಾಹೀರಾತನ್ನು ಪ್ರದರ್ಶಿಸಬಾರದು ಎಂದು ನಿಷೇಧ ಹೇರಲಾಗಿದೆ.

ಎಂಥಹ ಕಷ್ಟದ ಪರಿಸ್ಥಿತಿಯಲ್ಲೂ ಏಡ್ಸ್ ಸಂಬಂಧ ಚರ್ಚೆ ಮಾಡಬಾರದು. ಎಂದು ಸರ್ಕಾರ ನಿಷೇಧ ಹೇರಿದೆ ಎಂದು ಪಾಕಿಸ್ತಾನ ದಿನ ಪತ್ರಿಕೆಯೊಂದು ವರದಿ ಮಾಡಿದೆ.

ಏಡ್ಸ್ ಬಗ್ಗೆ ಸಂಪಾದಕೀಯದಲ್ಲಿ ಬರೆದಿರುವ ಪತ್ರಿಕೆ, ಏಡ್ಸ್ ಬಗ್ಗೆ ಮಾತನಾಡುವುದು ಘನ ಘೋರ ಅಪರಾಧ ಎಂದು ಪಾಕ್ ಸರ್ಕಾರ ಪರಿಗಣಿಸಿದೆ ಎಂದು ಹೇಳಿದೆ.

ಏಡ್ಸ್ ರೋಗವನ್ನು ಪಾಕಿಸ್ತಾನ ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ಶೇ. 0.1 ರಷ್ಟು ವಯಸ್ಕರು ಎಚ್ ಐವಿ ಮತ್ತು ಏಡ್ಸ್ ರೋಗದಿಂದ ನರಳುತ್ತಿದ್ದಾರೆ ಎಂದು ಪತ್ರಿಕೆ ತಿಳಿಸಿದೆ. ಏಡ್ಸ್ ಬಗ್ಗೆ ಜಾಗೃತಿ ಇಲ್ಲದಿರುವುದರಿಂದ ಹೆಚ್ಚಿನ ಜನತೆ ಇದಕ್ಕೆ ಬಲಿಯಾಗುತ್ತಿದ್ದಾರೆ ಎಂದು ಪತ್ರಿಕೆ ತಿಳಿಸಿದೆ.

SCROLL FOR NEXT