ಢಾಕಾ: ಬಾಂಗ್ಲಾದಲ್ಲಿನ ದೇವಾಲಯವೊಂದರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ವೇಳೆ ದೇಗುಲದಲ್ಲಿ 5000 ಮಂದಿ ಇದ್ದರು ಎಂದು ಅಲ್ಲಿನ ಸರ್ಕಾರದ ಮೂಲಗಳು ಹೇಳಿವೆ.
ಇದನ್ನೇ ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದಾರೆ. ದಿನಜ್‍ಪುರದಲ್ಲಿರುವ ಕಾಂತಾಜಿ ದೇಗುಲದಲ್ಲೇ ಈ ದಾಳಿ ನಡೆದಿದ್ದು, ಈ ಸಂದರ್ಭದಲ್ಲಿ ಏರ್ ಶೋ ನಡೆಯುತ್ತಿತ್ತು.
ಉಗ್ರರು ಕಚ್ಚಾ ಬಾಂಬ್ ಬಳಸಿ ದಾಳಿ ನಡೆಸಿದ ಕಾರಣದಿಂದಾಗಿ 10 ಮಂದಿಗೆ ಗಾಯಗಳಾಗಿವೆ. ಪೊಲೀಸರು ಕೆಲ ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಕಾಂತಾಜಿ ದೇಗುಲ ಸರ್ಕಾರದ ಅಧೀನದಲ್ಲಿದ್ದು, ಪ್ರತಿ ವರ್ಷ ನಡೆಸುವ ರಸ ಮೇಳದಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳುತ್ತಾರೆ.