ಇಸ್ಲಾಮಾಬಾದ್: ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವುದಕ್ಕಾಗಿ ಪಾಕಿಸ್ತಾನಕ್ಕೆ ತೆರಳಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬುಧವಾರ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರನ್ನು ಭೇಟಿ ಮಾಡಿದ್ದಾರೆ.
ಇಂದು ನವಾಜ್ ಷರೀಫ್ ಅವರನ್ನು ಭೇಟಿ ಮಾಡುವ ಸ್ಥಗಿತಗೊಂಡಿದ್ದ ದ್ವಿಪಕ್ಷೀಯ ಮಾತುಕತೆ ಸುಷ್ಮಾ ಚಾಲನೆ ನೀಡಿದ್ದು, ಸಭೆ ನಂತರ ಜಂಟಿ ಹೇಳಿಕೆ ನೀಡುವ ಸಾಧ್ಯತೆ ಇದೆ.
ಇದಕ್ಕು ಮುನ್ನ ಆರ್ಟ್ ಆಫ್ ಏಷ್ಯಾ ಸಚಿವರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸುಷ್ಮಾ, ಭಾರತ-ಪಾಕಿಸ್ತಾನ ನಡುವಿನ ಸಂಬಂಧ ವೃದ್ಧಿಗೆ ಪರಿಪಕ್ವತೆ ಮತ್ತು ಆತ್ಮ ವಿಶ್ವಾಸ ತೋರಿಸಲು ಇದು ಸಕಾಲ ಎಂದು ಹೇಳಿದ್ದರು.