ಇಸೀಸ್ ಉಗ್ರ ಸಂಘಟನೆ(ಸಂಗ್ರಹ ಚಿತ್ರ) 
ವಿದೇಶ

ಇಸೀಸ್ ಗೆ 42 ಉಗ್ರ ಸಂಘಟನೆಗಳಿಂದ ಬೆಂಬಲ

ವಿಶ್ವಕ್ಕೆ ಮಾರಕವಾಗಿರುವ ಇಸೀಸ್ ಉಗ್ರ ಸಂಘಟನೆಗೆ ಜಾಗತಿಕ ಮಟ್ಟದಲ್ಲಿ 42 ಉಗ್ರ ಸಂಘಟನೆಗಳು ಬೆಂಬಲ ನೀಡಿವೆ.

ನವದೆಹಲಿ: ವಿಶ್ವಕ್ಕೆ ಮಾರಕವಾಗಿರುವ ಇಸೀಸ್ ಉಗ್ರ ಸಂಘಟನೆಗೆ ಜಾಗತಿಕ ಮಟ್ಟದಲ್ಲಿ 42 ಉಗ್ರ ಸಂಘಟನೆಗಳು ಬೆಂಬಲ ನೀಡಿವೆ.
ಇಂಡಿಪೆಂಡೆಂಟ್ ಪತ್ರಿಕೆಗೆ ಖಾಸಗಿ ಅಂಕಿಅಂಶ ಸಂಸ್ಥೆಯೊಂದು ನೀಡಿರುವ ಮಾಹಿತಿ ಪ್ರಕಾರ, 30 ಉಗ್ರ ಸಂಘಟನೆಗಳು ಇಸೀಸ್ ನ ಅಧಿಕೃತ ಅಂಗ ಸಂಸ್ಥೆಯಾಗಲು ಒಪ್ಪಿಗೆ ಸೂಚಿಸಿದ್ದರೆ 12 ಉಗ್ರ ಸಂಘಟನೆಗಳು ಬೆಂಬಲ ನೀಡುವ ವಾಗ್ದಾನ ನೀಡಿವೆ.
ಆಧುನಿಕ ಇತಿಹಾಸದಲ್ಲಿ ಇಸೀಸ್ ಉಗ್ರ ಸಂಘಟನೆ ಅತಿ ಶ್ರೀಮಂತ ಹಾಗೂ ಅತಿ ಕ್ರೂರ ಉಗ್ರ ಸಂಘಟನೆಯೆಂಬ ಕುಖ್ಯಾತಿ ಪಡೆದಿದ್ದು, ವಿದೇಶದಿಂದ ತನ್ನ ಸಂಘಟನೆಗೆ ಹೋರಾಟಗಾರರನ್ನು ಸೆಳೆಯುವುದು ಇಸೀಸ್ ನ ಪ್ರಮುಖ ಉದ್ದೇಶವಾಗಿದೆ. ಲಿಬಿಯಾದಲ್ಲಿ ಅನ್ಸರ್ ಅಲ್ ಶರಿಯಾ, ಟ್ಯುನೇಶಿಯಾದಲ್ಲಿ ಒಕ್ಬಾ ಇಬ್ನ್ ನಫಾ, ಈಜಿಪ್ಟ್ ನಲ್ಲಿ  ಅನ್ಸರ್ ಬೀತ್ ಅಲ್ ಮಖ್ದೀಸ್, ಉಜ್ಬೆಕಿಸ್ತಾನದ ಇಸ್ಲಾಮಿಕ್ ಮೂಮೆಂಟ್, ಇಂಡೋನೇಷ್ಯಾದ ಅಬು ಸೈಯಫ್ ಸಂಘಟನೆಯಂತಹ ಉಗ್ರ ಗುಂಪುಗಳು ಇಸೀಸ್ ಬೆಂಬಲಿಸುತ್ತಿವೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!