ಪ್ಯಾರಿಸ್ : ಡಾವಿಂಚಿಯ ಮೊನಲಿಸಾ ಚಿತ್ರದ ಬಗ್ಗೆ, ಆ ನಗುವಿನ ಬಗ್ಗೆ ಸದಾ ಒಂದಲ್ಲ ಒಂದು ಚರ್ಚೆ ನಡೆದೇ ಇರುತ್ತದೆ. 500 ವರ್ಷಗಳಿಂದ ಈ ಮೊನಲಿಸಾಳ ನಗುವಿನ ಬಗ್ಗೆ ಅನ್ವೇಷಣೆಗಳು, ಸಂಶೋಧನೆಗಳು ನಡೆಯುತ್ತಲೇ ಬಂದಿವೆ. ಆದರೆ ಈಗ ಆ ನಗುವಿನ ರಹಸ್ಯವನ್ನು ಫ್ರೆಂಚ್ ಸಂಶೋಧಕ ಪಾಸ್ಕಲ್ ಕೋಟ್ ಬಹಿರಂಗ ಪಡಿಸಿದ್ದಾರೆ.
10 ವರ್ಷಗಳ ಕಾಲ ಸಂಶೋಧನೆ ನಡೆಸಿ ಮೊನಲಿಸಾಳ ಮಂದಸ್ಮಿತದ ಹಿಂದಿರುವ ನಿಗೂಢ ಸತ್ಯಗಳನ್ನು ಕಂಡು ಹಿಡಿದಿದ್ದೇನೆ ಎಂದು ಕೋಟ್ ವಾದಿಸುತ್ತಿದ್ದಾರೆ. ಲೇಯರ್ ಅಪ್ಲಿಕೇಷನ್ ಮೆಥಡ್ ಬಳಸಿ ಈ ರಹಸ್ಯವನ್ನು ಕಂಡುಹಿಡಿಯಲಾಗಿದೆ ಎಂದು ಕೋಟ್ ಹೇಳುತ್ತಿದ್ದರೂ, ಇವರ ವಾದವನ್ನು ಪ್ಯಾರಿಸ್‌ನ ಲುವೈಟ್ ಮ್ಯೂಸಿಯಂ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ.