ವಿದೇಶ

ತೀವ್ರಗೊಂಡ ಮದೇಶಿ ಸಮುದಾಯದ ಪ್ರತಿಭಟನೆ: ನೇಪಾಳ ರಾಷ್ಟ್ರಾಧ್ಯಕ್ಷರ ಕಾರಿನ ಮೇಲೆ ದಾಳಿ

Srinivas Rao BV

ಕಠ್ಮಂಡು: ನೇಪಾಳದಲ್ಲಿ ಜಾರಿಗೆ ಬಂದಿರುವ ಸಂವಿಧಾನದಲ್ಲಿ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಮದೇಶಿ ಸಮುದಾಯದವರು ನೇಪಾಳದ ರಾಷ್ಟ್ರಾಧ್ಯಕ್ಷರ ಬೆಂಗಾವಲು ಪಡೆ ಕಾರಿನ ಮೇಲೆ ದಾಳಿ ನಡೆಸಿದ್ದಾರೆ.
ನೇಪಾಲದ ಜನಕಪುರದಲ್ಲಿರುವ ದೇವಾಲಯಕ್ಕೆ ರಾಷ್ಟ್ರಾಧ್ಯಕ್ಷರಾದ ಬಿದ್ಯಾದೇವಿ ಭಂಡಾರಿ ಭೇಟಿ ನೀಡಿದ್ದರು, ದೇವಾಲಯಕ್ಕೆ ಭೇಟಿ ನೀಡುವುದನ್ನು ವಿರೋಧಿಸಿದ ಮದೇಶಿ ಮೋರ್ಚಾದ ಕಾರ್ಯಕರ್ತರು ರಾಷ್ಟ್ರಾಧ್ಯಕ್ಷರ ಕಾರು ಹಾಗೂ ಬೆಂಗಾವಲು ಪಡೆಯ ಕಾರಿನ ಮೇಲೆ ದಾಳಿ ನಡೆಸಿದ್ದು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ ಎಂದು ತಿಳಿದುಬಂದಿದೆ.
ರಾಷ್ಟ್ರಾಧ್ಯಕ್ಷೆ ಬಿದ್ಯಾದೇವಿ ಭಂಡಾರಿ ನೇಪಾಳ ಆಡಳಿತ ಪಕ್ಷ ಸಿಪಿಎನ್-ಯುಎಂಎಲ್ ನ್ನು ಪ್ರತಿನಿಧಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಾಧ್ಯಕ್ಷರ ಭೇಟಿಯನ್ನು  ಮದೇಶಿ ಸಮುದಾಯದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ನಿರತರು ಪ್ರಾರಂಭದಲ್ಲಿ ಬಿದ್ಯಾದೇವಿ ಭಂಡಾರಿ ಅವರ ಭೇಟಿಯನ್ನು ವಿರೋಧಿಸಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು, ಪ್ರತಿಭಟನೆ ತೀವ್ರಗೊಂಡು ಬಿದ್ಯಾಭಂಡಾರಿ ಅವರ ಬೆಂಗಾವಲು ಪಡೆ ವಾಹನದ ಮೇಲೆ ದಾಳಿ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ಪೊಲೀಸರು ಚದುರಿಸಲು ಅಶ್ರುವಾಯು ಪ್ರಯೋಗಿಸಿ ಪ್ರತಿಭಟನಾ ನಿರತರನ್ನು ಚದುರಿಸಿದರು.

SCROLL FOR NEXT