ಇಸ್ಲಾಮಾಬಾದ್: ನಾವು ಫೋಟೋದಲ್ಲಿ, ಇಂಟರ್ನೆಟ್ ನಲ್ಲಿ ನೋಡುತ್ತಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಚಿತ್ರ ಆತ ಯುವಕನಾಗಿರುವಾಗದ್ದು. ಆದರೆ ಅವನಿಗೀಗ ವಯಸ್ಸಾಗಿದೆ. ಕ್ರಿಸ್ ಮಸ್ ಮರುದಿನ ಇದೇ 26ಕ್ಕೆ 60ನೇ ವರ್ಷಕ್ಕೆ ಕಾಲಿಡುತ್ತಿರುವ ದಾವೂದ್ ಇಬ್ರಾಹಿಂಗೆ ಅವನ ಆಪ್ತರು ಭರ್ಜರಿ ಪಾರ್ಟಿ ನೀಡಲು ಸಿದ್ಧತೆ ನಡೆಸುತ್ತಿದ್ದಾರಂತೆ.
ದಾವೂದ್ ಇಬ್ರಾಹಿಂನ ಬಲಗೈ ಭಂಟ ಛೋಟಾ ಶಕೀಲ್ ಮತ್ತು ದಾವೂದ್‌ನ ಸಹೋದರ ಅನೀಸ್ ಇಬ್ರಾಹಿಂ, ಪಾರ್ಟಿಯ ಉಸ್ತುವಾರಿ ವಹಿಸಿಕೊಂಡಿದ್ದು, ಕಾರ್ಯಕ್ರಮವನ್ನು ಅತ್ಯಂತ ಸ್ಮರಣೀಯವನ್ನಾಗಿಸಲು ಭಾರೀ ಯೋಜನೆ ಹಾಕಿಕೊಂಡಿದ್ದಾರಂತೆ.
ಕಾರ್ಯಕ್ರಮ ಎಲ್ಲಿ ನಡೆಯುತ್ತದೆ, ಹೇಗೆ ನಡೆಯುತ್ತದೆ ಎಂಬುದರ ಕುರಿತು ಮಾಹಿತಿ ಕಲೆಹಾಕಲು ಭಾರತೀಯ ಗುಪ್ತಚರ ಸಂಸ್ಥೆಗಳು ಕಾರ್ಯನಿರತವಾಗಿವೆಯಂತೆ. ಅದಕ್ಕೂ ಮೊದಲು ದಾವೂದ್ ಪಾಕಿಸ್ತಾನದ ಕರಾಚಿಯಲ್ಲಿದ್ದಾನೆಯೇ ಅಥವಾ ಇಸ್ಲಾಮಾಬಾದ್ ನಲ್ಲಿದ್ದಾನೆಯೇ ಎಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಆತನ ಪಾಕಿಸ್ತಾನದ ಇರುವಿಕೆಯನ್ನು ಪಾಕಿಸ್ತಾನ ನಿರಾಕರಿಸುತ್ತಲೇ ಬಂದಿದೆ.