ಶೌಚಾಲಯದಲ್ಲಿ ಟಿವಿ ಸೌಲಭ್ಯ 
ವಿದೇಶ

ಬೀಜಿಂಗ್ ನ ಶೌಚಾಲಯದಲ್ಲಿ ಟಿವಿ, ವೈಫೈ ಮತ್ತು ಎಟಿಎಂ ಸೌಲಭ್ಯ

ಸಾರ್ವಜನಿಕ ಶೌಚಾಲಯಗಳು ಸ್ವಚ್ಛವಾಗಿದ್ದರೆ ಅದೇ ದೊಡ್ಡ ವಿಷಯ. ಆದರೆ ಬೀಜಿಂಗ್ ನ ಶೌಚಾಲಯವೊಂದರಲ್ಲಿ ಎಟಿಎಂ ಯಂತ್ರವಿದೆ, ವೆಂಡರ್ ಯಂತ್ರವಿದೆ, ವೈಫೈ...

ಬೀಜಿಂಗ್: ಸಾರ್ವಜನಿಕ ಶೌಚಾಲಯಗಳು ಸ್ವಚ್ಛವಾಗಿದ್ದರೆ ಅದೇ ದೊಡ್ಡ ವಿಷಯ. ಆದರೆ ಬೀಜಿಂಗ್ ನ ಶೌಚಾಲಯವೊಂದರಲ್ಲಿ ಎಟಿಎಂ ಯಂತ್ರವಿದೆ, ವೆಂಡರ್ ಯಂತ್ರವಿದೆ, ವೈಫೈ ಸೌಲಭ್ಯವಿದೆ. ಪರ್ಸನಲ್ ಟಿವಿ ಇದೆ. ಅಷ್ಟೇ ಅಲ್ಲ ಕಾರ್ ಚಾರ್ಜಿಂಗ್ ಸ್ಟೇಷನ್‌ಗಳೂ ಇವೆ ಇದು ಅಚ್ಚರಿ ನಿಜ.

ಫ್ಯಾಂಗ್ ಶಾನ್‌ನ ಫ್ಯೂಕಿಯಾನ್ ಸ್ಕ್ವೇರ್‌ನಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ಈ ಎಲ್ಲಾ ಸೌಲಭ್ಯಗಳು ಇವೆ. ಜತೆಗೆ ಸದಾ ಇಂಪಾದ ಸಂಗೀತವೂ ಕೇಳಬಹುದು. ಶೌಚಾಲಯದ ಕಿಟಕಿಗಳಲ್ಲಿ ಸಾಲಾಗಿ ಅಲೋವೆರಾ ಗಿಡಗಳು! ಟಾಯ್ಲೆಟ್ಟಲ್ಲಿ ಇದೆಲ್ಲ ಬೇಕಾ ಅಂತೀರಾ? ಚೀನಾದಲ್ಲೂ ಹಲವರು ಹೀಗೆಯೇ ಪ್ರಶ್ನಿಸಿದ್ದಾರೆ. ಆದರೆ ಪರಿಸರ ನೈರ್ಮಲ್ಯಕ್ಕಾಗಿ ಈ ಆಕರ್ಷಣೆ ಮತ್ತು ಸೌಲಭ್ಯ ತರಲಾಗಿದೆಯಂತೆ.

ಸದ್ಯದಲ್ಲೇ ಇನ್ನೂ ೫೭ ಸಾವಿರ ಟಾಯ್ಲೆಟ್‌ಗಳಿಗೆ ಈ ಸೌಲಭ್ಯ ಸಿಗಲಿದೆ ಎಂದು ಚೀನಾ ಸರ್ಕಾರ ಘೋಷಿಸಿದೆ. ಚೀನಾದ ಹಿರಿಯ ನಾಗರಿಕರು, ಇದೊಂದು ವ್ಯರ್ಥ ಕಸರತ್ತು, ಟ್ಯಾಕ್ಸ್ ಹೊರೆ ಎಂದೆಲ್ಲ ದೂಷಿಸಿದ್ದರೆ, ಯುವಜನತೆ ಈ ನಡೆಯನ್ನು ಸ್ವಾಗತಿಸಿದೆ. ಗಮನಾರ್ಹ ಸಂಗತಿಯೆಂದರೆ ಈ ಎಲ್ಲ ಸೌಲಭ್ಯಗಳಿರುವುದು ಪುರುಷರ ಶೌಚಾಲಯಕ್ಕೆ ಮಾತ್ರ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT