ಸಾನ್ಯಾ: ಚೀನಾದ ಸಾನ್ಯಾದಲ್ಲಿ ನಡೆದ 2015ರ 65ನೇ ವಿಶ್ವಸುಂದರಿ ಸ್ಪರ್ಧೆಯಲ್ಲಿ ಸ್ಪೇನ್‍ನ ವೃತ್ತಿಪರ ರೂಪದರ್ಶಿ 23ರ ಹರೆಯದ ಮಿರೆಯಿಯಾ ಲಲಗುನಾ ರೊಯೋ ವಿಜೇತೆಯಾಗಿ ಹೊರಹೊಮಿದ್ದಾರೆ.
ರಷ್ಯಾ, ಇಂಡೋನೇಷ್ಯಾ ಸುಂದರಿ ಯರು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ. ಭಾರತದ ಪಾಲಿಗೂ ಈ ಬಾರಿಯ ವಿಶ್ವಸುಂದರಿ ಸ್ಪರ್ಧೆ ನಿರಾಶಾದಾಯಕ
ವಾಗಿ ಪರಿಣಮಿಸಿದೆ.
ದೆಹಲಿ ಮೂಲದ ಮಿಸ್ ಇಂಡಿಯಾ ಅದಿತಿ ಆರ್ಯ ಫೈನಲ್ ತಲುಪಲಿಲ್ಲ. ಆದರೆ, ಸಮಾಧಾನದ ವಿಚಾರವೆಂದರೆ ಪೀಪಲ್ಸ್ ಚಾಯ್ಸ್ ಅವಾರ್ಡ್, ಟಾಪ್ ಮಾಡೆಲ್, ವಲ್ರ್ಡ್ ಫ್ಯಾಷನ್ ಡಿಸೈನರ್ ಡ್ರೆಸ್ ವಿಭಾಗದಲ್ಲಿ ಅಂತಿಮ 10ರ ಪಟ್ಟಿಯಲ್ಲಿ ಅವರು ಸ್ಥಾನ ಪಡೆದಿದ್ದಾರೆ.