ನವದೆಹಲಿ: ಬೆಂಗಳೂರು ಮೂಲದ ಹಿರಿಯ ಲೇಖಕ ರಾಮಚಂದ್ರ ಗುಹ ಅವರ ಹೊಸ ಪ್ರಬಂಧ ಸಂಕಲನ `ಡೆಮೋಕ್ರಟ್ಸ್ ಆ್ಯಂಡ್ ಡಿಸ್ಸೆಂಟರ್ಸ್'ನ ಹಕ್ಕುಗಳನ್ನು ಪ್ರತಿಷ್ಠಿತ ಪೆಂಗ್ವಿನ್ ರ್ಯಾಂಡಮ್ ಹೌಸ್ ಪ್ರಕಾಶನ ತೆಗೆದುಕೊಂಡಿದೆ.
ನೆರೆ ದೇಶಗಳ ರಾಷ್ಟ್ರೀಯ ಯೋಜನೆಗಳಿಂದ ಹಿಡಿದು ದೇಶದ ರಾಜಕೀಯ ಚರ್ಚೆಗಳ ತನಕ, ಲೇಖಕರ ಜವಾಬ್ದಾರಿಗಳಿಂದ ಹಿಡಿದು ಪ್ರಜಾ ಪ್ರಭುತ್ವ ಮತ್ತು ಹಿಂಸೆ ನಡುವಿನ ಸಂಕೀರ್ಣ ಸಂಬಂಧಗಳ ತನಕ ಹಲವು ವಿಷಯಗಳನ್ನು ಒಳಗೊಂಡಿರುವ ಈ ಪುಸ್ತಕದಲ್ಲಿ ಅಮಾರ್ತ್ಯಸೇನ್ ಮತ್ತು ಎರಿಕ್ ಹಾಬ್ಸ್‍ಬಾಮ್ ಅವರ ಬರಹಗಳ ವಿಮರ್ಶೆಗಳೂ ಇವೆ. 2016ರಲ್ಲಿ ಈ ಪುಸ್ತಕ ಬಿಡುಗಡೆಯಾಗಲಿದೆ ಎಂದು ಪ್ರಧಾನ ಸಂಪಾದಕ ತಿಳಿಸಿದ್ದಾರೆ.