ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

2,400 ಶಿಶುಗಳ ಮೆದುಳು ಹಾನಿ ಬ್ರೆಜಿಲ್‍ನಲ್ಲಿ ತುರ್ತು ಪರಿಸ್ಥಿತಿ

ಸೊಳ್ಳೆಯಿಂದ ಬರುವ ರೋಗವೊಂದು ಬ್ರೆಜಿಲ್ ಅನ್ನು ಬೆಚ್ಚಿಬೀಳಿಸಿದೆ. ಝಿಕಾ ಎನ್ನುವ ವೈರಸ್‍ನಿಂದಾಗಿ ಇಲ್ಲಿ ಹುಟ್ಟುವ ಮಕ್ಕಳ ಮೆದುಳುಗಳು...

ಸಾಂದರ್ಭಿಕ ಚಿತ್ರ
Mainashree
Updated On : 25 Dec 2015, 9:43 am
ಬ್ರೆಸಿಲಿಯಾ: ಸೊಳ್ಳೆಯಿಂದ ಬರುವ ರೋಗವೊಂದು ಬ್ರೆಜಿಲ್ ಅನ್ನು ಬೆಚ್ಚಿಬೀಳಿಸಿದೆ. ಝಿಕಾ ಎನ್ನುವ ವೈರಸ್‍ನಿಂದಾಗಿ ಇಲ್ಲಿ ಹುಟ್ಟುವ ಮಕ್ಕಳ ಮೆದುಳುಗಳು ಹಾನಿಗೊಳಗಾಗುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬ್ರೆಜಿಲ್‍ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. 
ಝಿಕಾ ಎನ್ನುವ ವೈರಸ್ 70 ವರ್ಷಗಳ ಹಿಂದೆ ಆಫ್ರಿಕಾದ ಕಾಡುಕೋತಿಗಳ ದೇಹದಲ್ಲಿ ಮೊದಲು ಪತ್ತೆಯಾಗಿತ್ತು. ಇದು ಮನುಷ್ಯನ ದೇಹಕ್ಕೆ ಸೇರಿದರೆ, ಗಂಭೀರ ನರಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡು, ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆಯೂ ಇದೆ. 
ಈಗ ಬ್ರೆಜಿಲ್‍ನಲ್ಲಿ ಹುಟ್ಟುವ ಶಿಶುಗಳ ಮೆದುಳುಗಳು ಮುರುಟಿದ್ದು, ಇದಕ್ಕೆ ಇದೇ ವೈರಸ್ ಕಾರಣ ಎಂದು ಆರೋಗ್ಯ ಸಚಿ ವಾಲಯ ಹೇಳಿದೆ. ಇಬ್ಬರು ಅಮ್ಮಂದಿರ ದೇಹದಲ್ಲೂ ಈ ವೈರಸ್ ಪತ್ತೆಯಾಗಿದೆ. 

Advertisement

Advertisement

ಪ್ರಸಕ್ತ ವರ್ಷ 2,400 ಮೈಕ್ರೋಸೆಫಲಿ (ಮುರುಟಿದ ಮೆದುಳು) ಪ್ರಕರಣಗಳು ಪತ್ತೆಯಾಗಿದ್ದು, 29 ಶಿಶುಗಳು ಸಾವನ್ನಪ್ಪಿವೆ. ಕಳೆದ ವರ್ಷ ಬ್ರೆಜಿಲ್‍ನಲ್ಲಿ ಇಂತಹ 147 ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಈ ವೈರಸ್‍ನ ಭೀತಿಯಿಂದಾಗಿ ಎಷ್ಟೋ ಮಹಿಳೆಯರು ಗರ್ಭಿಣಿಯಾಗುವುದಕ್ಕೇ ಹೆದರುತ್ತಿದ್ದಾರೆ ಎಂದು ಶಿಶುತಜ್ಞೆ ಏಂಜೆಲಾ ರೋಚಾ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments