ಬೋಕೋ ಹರಾಂ ದಾಳಿಗೆ 80 ಬಲಿ
ನೈಜೀರಿಯಾದ ಮೈದುಗಿರಿ ನಗರದ ಮೇಲೆ ಬೋಕೋ ಹರಾಮ್ ಇಸ್ಲಾಮಿಕ್ ಉಗ್ರರು ಸೋಮವಾರ ಗ್ರೆನೇಡ್ ಹಾಗೂ...
ಮೈದುಗುರಿ: ನೈಜೀರಿಯಾದ ಮೈದುಗಿರಿ ನಗರದ ಮೇಲೆ ಬೋಕೋ ಹರಾಮ್ ಇಸ್ಲಾಮಿಕ್ ಉಗ್ರರು ಸೋಮವಾರ ಗ್ರೆನೇಡ್ ಹಾಗೂ ಆತ್ಮಾಹುತಿ ದಾಳಿ ನಡೆಸಿದ್ದಾರೆ.
ಪರಿಣಾಮ 80 ಮಂದಿ ಮೃತಪಟ್ಟು, 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ ನಡೆದ ದಾಳಿಗೆ 30 ಮಂದಿ, ಸೋಮವಾರ ಬೆಳಗ್ಗೆ ಮಸೀದಿಯಲ್ಲಿ ನಡೆದ ಮತ್ತೊಂದು ದಾಳಿಗೆ 20 ಮಂದಿ ಬಲಿಯಾಗಿದ್ದಾರೆ.
ಉಗ್ರರ ಪೈಕಿ ಮಹಿಳಾ ಆತ್ಮಾಹುತಿ ಬಾಂಬರ್ಗಳು ಕೂಡ ಇದ್ದರು. ಬೋಕೋ ಹರಾಂ ಅನ್ನು ತಾಂತ್ರಿಕವಾಗಿ ಸೋಲಿಸಿದ್ದೇವೆ ಎಂದು ಕಳೆದ ವಾರ ನೈಜೀರಿಯಾ ಅಧ್ಯಕ್ಷ ಮುಹಮ್ಮದ್ ಬುಹಾರಿ ಅವರು ಘೋಷಿಸಿದ್ದರು. ಇದಕ್ಕೆ ಪ್ರತೀಕಾರವಾಗಿಯೇ ಈ ದಾಳಿ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.