ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ 
ವಿದೇಶ

ಭಾರತೀಯ ಮೂಲದ ಶಿಕ್ಷಕನಿಗೆ ಪ್ರತಿಷ್ಠಿತ ಅಮೆರಿಕ ಅಧ್ಯಕ್ಷೀಯ ಪ್ರಶಸ್ತಿ

ವಿಜ್ಞಾನ ಗಣಿತದಲ್ಲಿ ಉತ್ಕೃಷ್ಟ ಮಾರ್ಗದರ್ಶನಕ್ಕಾಗಿ ಕೊಡುವ ಪ್ರತಿಷ್ಠಿತ ಅಮೆರಿಕದ ಅಧ್ಯಕ್ಷೀಯ ಪ್ರಶಸ್ತಿಗೆ ಓರ್ವ ಭಾರತೀಯ ಶಿಕ್ಷಕ ಆಯ್ಕೆಯಾಗಿದ್ದಾರೆ...

ವಾಷಿಂಗ್ಟನ್: ಗಣಿತ ಮತ್ತು ವಿಜ್ಞಾನ ಬೋಧನೆ ಶ್ರೇಷ್ಠತೆಗಾಗಿ ನೀಡಲಾಗುವ ಪ್ರತಿಷ್ಠಿತ ಅಮೆರಿಕ ಅಧ್ಯಕ್ಷೀಯ ಪ್ರಶಸ್ತಿಗೆ ಓರ್ವ ಭಾರತೀಯ ಮೂಲದ ಅಮೆರಿಕಾ ಶಿಕ್ಷಕ ದರ್ಶನ್ ಜೈನ್ ಆಯ್ಕೆಯಾಗಿದ್ದಾರೆ.

ಒಟ್ಟು 108 ಮಂದಿಗೆ ಪ್ರಶಸ್ತಿ ಪ್ರಕಟಿಸಲಾಗಿದ್ದು, ಅವರಲ್ಲಿ ಭಾರತೀಯ ಮೂಲದ ಶಿಕ್ಷಕ ದರ್ಶನ್ ಜೈನ್ ಎಂಬುವರು ಆಯ್ಕೆಯಾಗಿದ್ದಾರೆ. ದರ್ಶನ್ ಜೈನ್ ಅವರು, ಮೆಕಾನಿಕಲ್ ಇಂಜಿನಿಯರ್ ನಲ್ಲಿ ಬಿಎ ಹಾಗೂ ಮಾಸ್ಟರ್ ಆಫ್ ಸೈನ್ಸ್ ಪದವಿಯನ್ನು ಚಿಕಾಗೋದ ಇಲಿಯಾನ್ಸ್ ವಿಶ್ವವಿದ್ಯಾಲಯದಲ್ಲಿ ಪಡೆದಿದ್ದು, ಪ್ರಸ್ತುತ ಅಮೆರಿಕದ ಪ್ರತಿಷ್ಠಿತ ಶಾಲೆಯೆನಿಸಿಕೊಂಡಿರುವ ಸ್ಟೀವನ್ಸನ್ ಹೈ ಸ್ಕೂಲ್ ನಲ್ಲಿ ಕಳೆದ 8 ವರ್ಷಗಳಿಂದ ಗಣಿತ ನಿರ್ದೇಶಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಮೆರಿಕದ ಶ್ವೇತಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಶಿಕ್ಷಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಿದ್ದಾರೆ.

ಈ ಕುರಿತಂತೆ ಗುರುವಾರ ಪ್ರಶಸ್ತಿ ಉದ್ಘೋಷಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಸ್ಥಳೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗಣಿತ ಶಿಕ್ಷಣವನ್ನು ಬೆಳಸುವುದು ಈ ಪ್ರಶಸ್ತಿಯ ಉದ್ದೇಶವಾಗಿದೆ. ಶಿಕ್ಷಣ ತಜ್ಞರು ಅಮೆರಿಕದಲ್ಲಿ ಭವಿಷ್ಯದ ವಿಜ್ಞಾನಿಗಳು, ಇಂಜಿನಿಯರ್ ಗಳು ಹಾಗೂ ಗಣಿತ ತಜ್ಞರನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಅಮೆರಿಕ ಯಶಸ್ವಿ ಹಾದಿ ತುಳಿಯಲು ಪ್ರಮುಖ ಮೈಲಿಗಲ್ಲಾಗಿದ್ದಾರೆ. ಯುವ ವಿಜ್ಞಾನಿಗಳು ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಈಗಾಗಲೇ ಮಾಡಿರುವ ಸಾಧನೆಗಳನ್ನು ಗಮನಿಸಿದಲ್ಲಿ ಮುಂದಿನ ವರ್ಷಗಳಲ್ಲಿ ಅವರು ಇನ್ನೂ ಹೆಚ್ಚಿನ ಯಶಸ್ಸನ್ನು ಸಾಧಿಸಲಿದ್ದಾರೆ ಎಂಬುದು ಇದರಿಂದ ಖಚಿತವಾಗುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಅಧ್ಯಕ್ಷೀಯ ಪ್ರಶಸ್ತಿಗೆ ಆಯ್ಕೆಯಾಗಿರುವ ಭಾರತೀಯ ಮೂಲದ ಶಿಕ್ಷಕ ದರ್ಶನ್ ಜೈನ್ ಕುರಿತಂತೆ ಮಾತನಾಡಿರುವ ಅವರು, ಜೈನ್ ಅವರು ಪಾಠ ಮಾಡುವ ರೀತಿ ಹಾಗೂ ವಿಧಾನಗಳ ಮೂಲಕ ವಿದ್ಯಾರ್ಥಿಗಳು ತಮ್ಮೆಡೆಗೆ ಆಕರ್ಷಿತಗೊಳ್ಳುವಂತೆ ಮಾಡುತ್ತಿದ್ದಾರೆ. ಜೈನ್ ಅವರಿಗೆ ತಮ್ಮ ಕೆಲಸದ ಮೇಲಿರುವ ಪ್ರೀತಿಯೇ ಇಂದು ಎಲ್ಲರೂ ಆ ಕ್ಷೇತ್ರವನ್ನು ಪ್ರೀತಿಸುವಂತೆ ಮಾಡಿದೆ. ಜೈನ್ ಅವರ ಕೆಲಸ ಹಾಗೂ ಅನುಭವವನ್ನು ಶ್ಲಾಘಿಸಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!