ವಿದೇಶ

ಶೀಘ್ರದಲ್ಲೇ ಚೀನಾ-ಭಾರತದ ನಡುವೆ ರೈಲು

Srinivasamurthy VN

ಬೀಜಿಂಗ್: ನೇಪಾಳದ ಮೂಲಕ ಕೈಗಾರಿಕಾ ಕಾರಿಡಾರ್ ಮತ್ತು ಟಿಬೆಟ್ ಮೂಲಕ ಭಾರತಕ್ಕೆ ರೈಲ್ವೆ ಹಳಿ ಸ್ಥಾಪಿಸುವ ಪ್ರಸ್ತಾವನೆಯನ್ನು ಚೀನಾ ಹೊಂದಿದೆ.

ಇದೇ ಸಂದರ್ಭದಲ್ಲಿ ಭೂಕಂಪದಿಂದ ತತ್ತರಿಸಿರುವ ನೇಪಾಳವನ್ನು ಜಂಟಿಯಾಗಿ ಅಭಿವೃದ್ಧಿ ಮಾಡುವ ಇರಾದೆಯನ್ನೂ ಚೀನಾ ವ್ಯಕ್ತಪಡಿಸಿದೆ. ಚೀನಾ ವಿದೇಶಾಂಗ ಸಚಿವಾಲಯದ ಏಷ್ಯಾ ವಲಯದ ವ್ಯವಹಾರಗಳ ಕುರಿತ ಉಪಪ್ರಧಾನ ನಿರ್ದೇಶಕರಾದ ಹುವಾಂಗ್ ಕ್ರಿಲಿಯಾನ್  ಚೀನಾ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಜೊತೆ ಈ ಪ್ರಸ್ತಾಪ ಮಾಡಿದ್ದು, ಎರಡೂ ದೇಶಗಳ ನಡುವೆ ಸಂಪರ್ಕ ಸಾಧಿಸುವಲ್ಲಿ ಇಂಡಿಯಾ ನೇಪಾಳ-ಚೀನಾ ಕೈಗಾರಿಕಾ ಕಾರಿಡಾರ್ ಪ್ರಮುಖ ಪ್ರಯತ್ನವಾಗಿದೆ ಎಂದಿದ್ದಾರೆ.

SCROLL FOR NEXT