ವಿದೇಶ

ಪ್ರಾಥಮಿಕ ಶಿಕ್ಷಣ ನೀಡುವುದರಲ್ಲಿ ಭಾರತ ಪರಿಣಾಮಕಾರಿ ಅಭಿವೃದ್ಧಿ ಸಾಧಿಸಿದೆ: ವರದಿ

Srinivas Rao BV

ವಿಶ್ವಸಂಸ್ಥೆ: ಪ್ರಾಥಮಿಕ ಶಿಕ್ಷಣ ನೀಡುವುದರಲ್ಲಿ ಭಾರತ ಪರಿಣಾಮಕಾರಿ ಅಭಿವೃದ್ಧಿ ಸಾಧಿಸಿದ್ದು, ಕಿರಿಯ ಪ್ರೌಢ ಶಿಕ್ಷಣ ನೀಡುವುದರಲ್ಲಿ ಇದೇ ಮಾದರಿಯ ಅಭಿವೃದ್ಧಿ ಸಾಧಿಸಲು ಹೆಣಗುತ್ತಿದೆ ಎಂಬುದು ವಿಶ್ವ ಸಂಸ್ಥೆ ವರದಿ ಮೂಲಕ ತಿಳಿದುಬಂದಿದೆ.

ಜಾಗತಿಕ ಶಿಕ್ಷಣ ಪರಿವೀಕ್ಷಣಾ ವರದಿ ಹಾಗೂ ವಿಶ್ವ ಸಂಸ್ಥೆಯ ಅಂಗ ಸಂಸ್ಥೆ ಯುನೆಸ್ಕೋ ನಡೆಸಿರುವ ಅಧ್ಯಯನ ವರದಿ ಪ್ರಕಾರ, ಪ್ರೌಢ ಶಿಕ್ಷಣ ನೀಡುವುದರಲ್ಲಿ ಭಾರತದ ಅಭಿವೃದ್ಧಿ ಗಮನಾರ್ಹವಾಗಿಲ್ಲದ ಪರಿಣಾಮ ಶಾಲೆಯಿಂದ ಹೊರಗುಳಿದ ವಯಸ್ಕರ ಸಂಖ್ಯೆ  ಭಾರತದಲ್ಲಿ ಹೆಚ್ಚಾಗಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಪಡೆದಿರುವ ಅಂತಾರಾಷ್ಟ್ರೀಯ ನೆರವು ಸಹ 2010  ಕ್ಕಿಂತ ಕಡಿಮೆಯಿದ್ದು 120 ಮಿಲಿಯನ್ ಮಕ್ಕಳು ಹಾಗೂ ವಯಸ್ಕರು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ವರದಿ ತಿಳಿಸಿದೆ.

2011 ರ ಪ್ರಕಾರ 16  ಮಿಲಿಯನ್ ಯುವ ವಯಸ್ಕರು( ಕಿರಿಯ ಪ್ರೌಢ ಶಾಲೆ ವಯಸ್ಸಿನ ಯುವಕರು) ಶಾಲೆಗೆ ದಾಖಲಾಗಿಲ್ಲ. ಇದರೊಂದಿಗೆ ನೆರೆ ರಾಷ್ಟ್ರ ಬಾಂಗ್ಲಾ ದೇಶ, ಮೆಕ್ಸಿಕೋ ಇಂಡೋನೇಷಿಯಾ, ಪಾಕಿಸ್ತಾನ, ಸಿರಿಯನ್ ಅರಬ್ ರಿಪಬ್ಲಿಕ್, ನಲ್ಲಿ ತಲಾ 1 ಮಿಲಿಯನ್ ಶಾಲೆ ಬಿಟ್ಟ ವಯಸ್ಕರಿದ್ದಾರೆ.
ಭಾರತ ನ್ಯೂನತೆಯಿರುವ ಮಕ್ಕಳು ಶಾಲೆಗೆ ತೆರಳಲು ಆರ್ಥಿಕ ಸಂಪನ್ಮೂಲಗಳನ್ನು ಒದಗಿಸುತ್ತಿದ್ದು, ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸುತಿತ್ದೆ. ಅಲ್ಲದೇ ಶಿಕ್ಷಕರಿಗೆ ಸಮಗ್ರ ತರಬೇತಿ ನೀಡಲಾಗುತ್ತಿರುವನ್ನು ವರದಿಯಲ್ಲಿ ಗುರುತಿಸಲಾಗಿದೆ.  ಪ್ರಾಥಮಿಕ ಶಿಕ್ಷಣದಿಂದ ಪ್ರೌಢ ಶಿಕ್ಷಣಕ್ಕಾಗಿ ಭಾರತ 2012 -13 ರಲ್ಲಿ ಬಾಹ್ಯ ಬೆಂಬಲವನ್ನು ಪಡೆದಿತ್ತು. ಪ್ರಾಥಮಿಕ ಶಿಕ್ಷಣಕ್ಕಾಗಿ ಪಡೆದಿದ್ದ ನೆರವು 100 ಮಿಲಿಯನ್ ಡಾಲರ್ ನಿಂದ 27 ಮಿಲಿಯನ್ ಡಾಲರ್ ಗೆ ಕುಸಿದಿತ್ತು. ಆದರೆ ಪ್ರೌಢ ಶಿಕ್ಷಣಕ್ಕೆ ಸಂಬಂಧಿಸಿದ ನೆರವು 21 ಮಿಲಿಯನ್ ಡಾಲರ್ ನಿಂದ 232  ಮಿಲಿಯನ್ ಡಾಲರ್ ಗೆ ಏರಿಕೆಯಾಗಿದೆ ಎಂದು ಯುನೆಸ್ಕೊ ವರದಿ ತಿಳಿಸಿದೆ.
ಯುನೆಸ್ಕೊ ವರದಿ ಪ್ರಕಾರ 19  ರಾಷ್ಟ್ರಗಳಲ್ಲಿ ಪ್ರಾಥಮಿಕ ಶಾಲೆ ವಯಸ್ಸಿನ ಸುಮಾರು ೦.5 ಮಿಲಿಯನ್ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಭಾರತ, ಇಂಡೋನೇಷಿಯಾ, ಕೀನ್ಯಾ, ನೈಜೀರಿಯಾ, ಪಾಕಿಸ್ತಾನ, ಫಿಪೇನ್ಸ್, ನಲ್ಲಿ ಕನಿಷ್ಠ 1 ಮಿಲಿಯನ್ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ತಿಳಿದುಬಂದಿದೆ. 2012 ರ ಅಂಕಿ ಅಂಶಗಳ ಪ್ರಕಾರ 1 .7 ಮಿಲಿಯನ್ ಮಕ್ಕಳು ಶಾಲೆಯಿಂದ ಹೊರಗುಳಿದಿದಾರೆ.

SCROLL FOR NEXT