ಜೋಸ್ ಕ್ಯಾಬಲರೋ (ಕೃಪೆ: ಗ್ಯಾಂಟ್ ಜೆಫೆರೀಸ್ /ಬ್ರಾಡೆಂಟನ್ ಹೆರಾಲ್ಡ್ ) 
ವಿದೇಶ

ಕಾಮಕೇಳಿ ನಡೆಸಿದ್ದಕ್ಕೆ ಜೈಲು ಪಾಲಾದ

ಸಾರ್ವಜನಿಕ ಸ್ಥಳಗಳಲ್ಲಿ ಕಾಮಕೇಳಿ ನಡೆಸುವುದು ನಮ್ಮಂಥ ಮಡಿವಂತ ದೇಶದಲ್ಲಿ ಮಾತ್ರವಲ್ಲ ಪಾಶ್ಚಾತ್ಯ ದೇಶಗಳಲ್ಲೂ ನಿಷಿದ್ದವೇ ಹಾಗೂ ಶಿಕ್ಷಾರ್ಹ...

ಫ್ಲೋರಿಡಾ: ಸಾರ್ವಜನಿಕ ಸ್ಥಳಗಳಲ್ಲಿ ಕಾಮಕೇಳಿ ನಡೆಸುವುದು ನಮ್ಮಂಥ ಮಡಿವಂತ ದೇಶದಲ್ಲಿ ಮಾತ್ರವಲ್ಲ ಪಾಶ್ಚಾತ್ಯ ದೇಶಗಳಲ್ಲೂ ನಿಷಿದ್ದವೇ ಹಾಗೂ ಶಿಕ್ಷಾರ್ಹ. ಫ್ಲೋರಿಡಾದ ಸಮುದ್ರತೀರದಲ್ಲಿ ರಾಸಲೀಲೆ ನಡೆಸುವ ಸಾಹಸ ಮಾಡಿ ಜೈಲು ಪಾಲಾಗಿದ್ದಾನೆ ಈ ಭೂಪ. ಬರೀ ಅಷ್ಟೇ ಆಗಿದ್ದರೆ, ಒಂದೋ ಎರಡೋ ತಿಂಗಳು ಶಿಕ್ಷಾರ್ಹವಾಗುತ್ತಿತ್ತೇನೋ. ಆದರೆ ಈತ ಇನ್ನೂ ವಿಕೃತಿಗಿಳಿದು, 4 ವರ್ಷದ ಚಿಕ್ಕ ಹುಡುಗನ ಎದುರಲ್ಲೇ  ಪೌರುಷ ಪ್ರದರ್ಶನ ಮಾಡಿ ಎರಡೂವರೆ ವರ್ಷ ಸೆರೆಮನೆಗೆ ತಳ್ಳಲ್ಪಟ್ಟಿದ್ದಾನೆ. ಕಳೆದ ಜುಲೈನಲ್ಲಿ ಜೋಸ್ ಕ್ಯಾಬಲರೋ(40) ಫ್ಲೋರಿಡಾದ ಬೀಚ್‍ನಲ್ಲಿ ಜನಸಂದಣಿಯ ನಡುವೆಯೇ ಆಲ್ವರೆಜ್ ಎಂಬ ಪರಿಚಿತ ಯುವತಿಯೊಂದಿಗೆ ಮಟಮಟ ಮಧ್ಯಾಹ್ನದಲ್ಲೇ ಬಹಿರಂಗವಾಗಿ ಮಿಲನಮಹೋತ್ಸವ ಶುರುವಿಟ್ಟುಕೊಂಡಿದ್ದಾನೆ. 4 ವರ್ಷದ ಬಾಲಕ ಅದನ್ನು ನೋಡುತ್ತಿದ್ದರೂ ಇವರ ಆಟ ಮುಂದುವರಿದಿತ್ತು. ಇದನ್ನು ಪ್ರತ್ಯಕ್ಷದರ್ಶಿಯೊಬ್ಬ ವಿಡಿಯೋ ಮಾಡಿ ಪೊಲೀಸರಿಗೆ ನೀಡಿದ್ದಾನೆ. ಮಗುವನ್ನು ಎಳೆದೊಯ್ಯಲು ಬಂದ ತಾಯಿ ಸಲ್ಲಾಪ ನಿಲ್ಲಿಸಲು ಹೇಳಿದಾಗ ಕ್ಯಾಬಲರೋ ಆಕೆಯನ್ನೇ ಬಯ್ದು ಕಳಿಸಿದ್ದಾನೆ. ದೂರಿಗೆ ಸ್ಪಂದಿಸಿದ ನ್ಯಾಯಾಂಗ ಆತನಿಗೆ ಎರಡೂವರೆ ವರ್ಷ ಜೈಲುಶಿಕ್ಷೆ ವಿಧಿಸಿ ಯುವತಿಗೆ ಎಚ್ಚರಿಸಿ ಬಿಡುಗಡೆ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

SCROLL FOR NEXT