ನ್ಯೂಯಾರ್ಕ್ : ಧರ್ಮದ ನೆಪ ಹೇಳಿಕೊಂಡು 7 ವರ್ಷಗಳ ಕಾಲ ಸಿಖ್ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ನೌಕರಿಯಿಂದ ದೂರ ಇಟ್ಟಿದ್ದ ಫ್ಲೋರಿಡಾದಲ್ಲಿರುವ ವಾಲ್ಟ್ ಡಿಸ್ನಿ ವರ್ಲ್ಡ್ ಕೊನೆಗೂ ಒತ್ತಡಕ್ಕೆ ಮಣಿದು ಸಿಖ್ ಸಮುದಾಯದ ಸಿಬ್ಬಂದಿಗೆ ಉದ್ಯೋಗ ನೀಡಿದೆ.
2008 ರಲ್ಲಿ ವಾಲ್ಟ್ ಡಿಸ್ನಿಯಲ್ಲಿ ಅಮೆರಿಕಾದ ಸಿಖ್ ಸಮುದಾಯಕ್ಕೆ ಸೇರಿದ್ದ ಗುರ್ಡಿಟ್ ಸಿಂಗ್ ಗೆ ಮೈಲ್ ಕ್ಯಾರಿರ್ ಆಗಿ ಕೆಲಸ ಸಿಕ್ಕಿತು. ಆದರೆ ಗುರ್ಡಿತ್ ಸಿಂಗ್ ತಲೆಗೆ ಧರಿಸಿದ್ದ ರುಮಾಲು ಮತ್ತು ಗಡ್ಡವನ್ನು ನೋಡಿದ ವಾಲ್ಡ್ ಡಿಸ್ನಿ ಮುಖ್ಯಸ್ಥ ಕೆಲಸ ಮಾಡದಂತೆ ಸೂಚಿಸಿದ. ಗುರ್ಡಿತ್ ಸಿಂಗ್ ಸಿಖ್ ಧರ್ಮಕ್ಕೆ ಸೇರಿದವನಾಗಿದ್ದು ಬರುವ ಅತಿಥಿಗಳ ಮುಂದೆ ಕಾಣಿಸಿಕೊಳ್ಳಬಾರದು. ಸಿಖ್ ವ್ಯಕ್ತಿ ತಮ್ಮ ಡಿಸ್ನಿ ವಾಲ್ಟ್ ನಲ್ಲಿ ಕೆಲಸ ಮಾಡುವುದು ತಮ್ಮ ಕಂಪನಿಯ ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂಬ ಕಾರಣ ಹೇಳಿ ಆತನನ್ನು ದೂರ ಇಟ್ಟರು. ನಂತರ ಈ ಪ್ರಕರಣ ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್ ಮೆಟ್ಟಿಲೇರಿತು
ಈ ನಡುವೆ ಗುರ್ಡಿತ್ ಸಿಂಗ್ ಕೆಲಸದ ಹೊರೆ ಹೆಚ್ಚಾಯಿತು. ಇದರ ಜೊತೆಗೆ ಆತ ತನ್ನ ಸಹೋದ್ಯೋಗಿಗಳಿಗೆ ಸಹಕರಿಸುತ್ತಿರಲಿಲ್ಲ. ಇದರಿಂದ ನೌಕರರ ನಡುವೆ ದ್ವೇಷ ಬೆಳೆಯಲು ಕಾರಣವಾಯಿತು. ಜೊತೆಗೆ ಗುರ್ಡಿತ್ ಸಿಂಗ್ ಗೆ ಅಸಮಾಧಾನ, ಅವಮಾನವಾಯಿತು. ಕಳೆದ ನಾಲ್ಕು ವರ್ಷಗಳಿಂದ ಡಿಸ್ನಿ ಕಾರ್ಪೋರೇಟ್ ಕಚೇರಿಗಳಿಗೆ ಅಂಚೆ ಸೇವೆ ಒದಗಿಸದಂತೆ ವಾಲ್ಟ್ ಡಿಸ್ನಿ ಗುರ್ಡಿತ್ ಸಿಂಗ್ ಗೆ ಸೂಚಿಸಿತ್ತು.
ಹೀಗಾಗಿ ಮತ್ತೆ ಸಿಖ್ ಒಕ್ಕೂಟವನ್ನು ಭೇಟಿ ಮಾಡಿದ ಗುರ್ಡಿತ್ ಸಿಂಗ್ ತನ್ನ ವಿರುದ್ಧ ಡಿಸ್ನಿ ವಾಲ್ಟ್ ಅನುಸರಿಸುತ್ತಿರುವ ತಾರತಮ್ಯ ನೀತಿಯನ್ನು ಕೈ ಬಿಡುವಂತೆ ಸಿಖ್ ಒಕ್ಕೂಟಕ್ಕೆ ಮನವಿ ಮಾಡಿದ್ದರು. ಕೊನೆಗೆ 7 ವರ್ಷಗಳ ನಂತರ ಸಿಖ್ ಒಕ್ಕೂಟ ಮತ್ತು ಎಲ್ ಸಿಎಲ್ ಯು ವಾಲ್ಟ್ ಡಿಸ್ನಿ ತೆಗೆದುಕೊಂಡ ನಿರ್ಧಾರ ಕೈಬಿಡುವಂತೆ ಸೂಚಿಸಿತು.
ಈ ಸಂಬಂಧ ಡಿಸ್ನಿ ವಾಲ್ಟ್ ಗೆ ಪತ್ರ ಬರೆದ ಸಿಖ್ ಒಕ್ಕೂಟ ಗುರ್ಡಿತ್ ಸಿಂಗ್ ವಿಚಾರದಲ್ಲಿ ಕಂಪನಿ ನಡೆದುಕೊಳ್ಳುತ್ತಿರುವ ನೀತಿ ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಪತ್ರ ಬರೆದಿತ್ತು. ಇದಾದ ನಂತರ 2015 ರಲ್ಲಿ ಗುರ್ಡಿತ್ ಸಿಂಗ್ ಗೆ ಡಿಸ್ನಿ ವಾಲ್ಟ್ ಮತ್ತೆ ಕೆಲಸ ನೀಡಿದೆ.