ಡಮಾಸ್ಕಸ್(ಸಿರಿಯಾ): ಸಿರಿಯಾ ಸೇನೆ ಹಾಗೂ ಇಸ್ಲಾಮಿಕ್ ಸ್ಟೇಟ್ ಉಗ್ರರ ನಡುವಿನ ಕಾಳಗದಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾನವ ಹಕ್ಕುಗಳ ಸಂಘಟನೆಯ ಸಿರಿಯಾ ವೀಕ್ಷಕರೊಬ್ಬರು ಶನಿವಾರ ತಿಳಿಸಿದ್ದಾರೆ.
ಪುರಾತನ ಪಲ್‌ಮೈರಾ ನಗರವನ್ನು ಐಎಸ್ ಉಗ್ರರ ವಶದಿಂದ ಬಿಡಿಸಿಕೊಳ್ಳುವ ಯತ್ನವಾಗಿ ಸಿರಿಯಾ ಸೇನೆ ಹೋರಾಟವನ್ನು ತೀವ್ರಗೊಳಿಸಿದ್ದು, ಸಂಘರ್ಷದಲ್ಲಿ 121 ಯೋಧರೂ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಪಲ್‌ಮೈರಾ ನಗರದಿಂದ ಐಎಸ್ ಉಗ್ರರನ್ನು ಹೊಡೆದೋಡಿಸುವ ನಿಟ್ಟಿನಲ್ಲಿ ಸಿರಿಯಾ ಸೇನೆಯು ಗುರುವಾರ ಆಕ್ರಮಣಕಾರಿ ದಾಳಿ ಆರಂಭಿಸಿತ್ತು ಎಂದು ಸ್ಥಳೀಯ ಸುದ್ದಿವಾಹಿನಿ ಬಿತ್ತರಿಸಿರುವುದಾಗಿ ಸುದ್ದಿಸಂಸ್ಥೆ ಕ್ಸಿನ್ಹುವಾ ವರದಿ ಮಾಡಿತ್ತು. ಸೇನಾ ಪಡೆಗಳು ನಗರವನ್ನು ಮೂರು ದಿಕ್ಕುಗಳಿಂದ ದಾಳಿ ನಡೆಸುತ್ತಿದ್ದು, ಪಲ್‌ಮೈರಾ ನಗರವನ್ನು ಮರುವಶ ಮಾಡಿಕೊಳ್ಳವ ತನಕ ಕಾರ್ಯಚಾರಣೆ ಮುಂದುವರಿಯಲಿದೆ ಎಂದೂ ಸ್ಥಳೀಯ ವಾಹಿನಿ ವರದಿ ಮಾಡಿದೆ.