ವಿದೇಶ

ಇರಾನ್ ಜೊತೆಗೆ ಐತಿಹಾಸಿಕ ಪರಮಾಣು ಒಪ್ಪಂದ

Sumana Upadhyaya

ವಿಯೆನ್ನಾ: 12 ವರ್ಷಗಳ ಸುದೀರ್ಘ ಅವಧಿಯ ನಂತರ ಕೊನೆಗೂ ಇರಾನ್, ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಚೀನಾ, ರಷ್ಯಾ ಮತ್ತು ಜರ್ಮನಿ ದೇಶಗಳು ಮಂಗಳವಾರ ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದಲ್ಲಿ ಮಹತ್ವದ ಪರಮಾಣು ಒಪ್ಪಂದಕ್ಕೆ ಬಂದಿವೆ.

ಅಮೆರಿಕ ರಾಜ್ಯ ಕಾರ್ಯದರ್ಶಿ ಮತ್ತು ಇರಾನ್ ನ ಕಾರ್ಯದರ್ಶಿ ನಡುವೆ ಕಳೆದ 17 ದಿನಗಳಿಂದ ಸತತ ಮಾತುಕತೆ ನಡೆಯುತ್ತಿದ್ದು, ಇಂದು ಒಂದು ಒಪ್ಪಂದಕ್ಕೆ ಬಂದಿವೆ. ಅದರ ಪ್ರಕಾರ, ಇರಾನ್ ಇನ್ನು 10 ವರ್ಷಗಳವರೆಗೆ ತನ್ನ ಪರಮಾಣು ಕಾರ್ಯಕ್ರಮಗಳನ್ನು ನಿಲ್ಲಿಸಬೇಕಾಗಿದೆ.

ಇರಾನ್ ನ ವಿದೇಶಾಂಗ ಸಚಿವರು ಮತ್ತು ಯುರೋಪಿಯನ್ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥರು ಇಂದು ಸಂಜೆ ಜಂಟಿ ಹೇಳಿಕೆ ನೀಡಿ ಒಪ್ಪಂದದ ಸಂಪೂರ್ಣ ವಿವರಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಲಿದ್ದಾರೆ.

SCROLL FOR NEXT