ವಿದೇಶ

ಇರಾಕ್‌ನಲ್ಲಿ ರಂಜಾನ್ ಸಂಭ್ರಮದ ವೇಳೆ ಕಾರ್ ಬಾಂಬ್ ಸ್ಫೋಟ: ಸಾವಿನ ಸಂಖ್ಯೆ 120ಕ್ಕೆ ಏರಿಕೆ

Vishwanath S

ಬಾಗ್ದಾದ್‌: ಈದ್ ಉಲ್ ಫಿತರ್ ಸಂಭ್ರಮಾಚರಣೆಯಲ್ಲಿದ್ದ ಇರಾಕ್ ನಲ್ಲಿ ಇಸ್ಲಾಮಿಕ್ ಸ್ಟೇಟ್(ಇಸಿಸ್) ಉಗ್ರ ಸಂಘಟನೆ ನಡೆಸಿದ ಆತ್ಮಹುತಿ ಕಾರ್‌ ಬಾಂಬ್‌ ಸ್ಫೋಟದಲ್ಲಿ ಮಕ್ಕಳು ಸೇರಿದಂತೆ 120 ಮಂದಿ ಮೃತಪಟ್ಟಿದ್ದು, 130 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಾಗ್ದಾದ್‌ನಿಂದ ಈಶಾನ್ಯದಲ್ಲಿ 20 ಮೈಲು ದೂರದ ಜನನಿಬಿಡ ಮಾರುಕಟ್ಟೆ ಪ್ರದೇಶ ಖಾನ್ ಬನಿ ಸಾದ್‌ ಎಂಬಲ್ಲಿ ಇಸಿಸ್ ಉಗ್ರರು ಬಾಂಬ್‌ ಸ್ಫೋಟಿಸಿದ್ದಾರೆ. ಮುಸ್ಲಿಮರ ಪವಿತ್ರ ತಿಂಗಳಾದ ರಂಜಾನ್‌ ಉಪವಾಸದ ಕೊನೆಯ ದಿನವನ್ನು ಆಚರಿಸುತ್ತಿದ್ದವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಪೊಲೀಸರು ಮತ್ತು ವೈದ್ಯರು ಹೇಳಿದ್ದಾರೆ.

ಉತ್ತರ ಮತ್ತು ಪಶ್ಚಿಮ ಇರಾಕ್ ದೊಡ್ಡ ಭಾಗಗಳಲ್ಲಿ ನಿಯಂತ್ರಣ ಸಾಧಿಸಿರುವ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳು ಈ ದೃಷ್ಕೃತ್ಯ ಎಸೆಗಿರುವುದಾಗಿ ಘೋಷಿಸಿಕೊಂಡಿದೆ. ಈ ಭಯಾನಕ ದುರ್ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಬೀದಿಯಲ್ಲಿ ನಿಲ್ಲಿಸಲಾಗಿದ್ದ ಕಾರುಗಳ ಗಾಜುಗಳನ್ನು ಒಡೆದು ತಮ್ಮ ದುಃಖ ಮತ್ತು ಸಿಟ್ಟನ್ನು ಹೊರಹಾಕಿದರು.

ಸ್ಘೋಟದ ತೀವ್ರತೆಗೆ ದೇಹಗಳು ಛಿದ್ರಗೊಂಡಿದ್ದು, ದೇಹದ ಭಾಗಗಳನ್ನು ಪತ್ತೆ ಹಚ್ಚಿ ಹೊಂದಿಸುವ ಕೆಲಸವನ್ನು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ಮಾಡುತ್ತಿದ್ದಾರೆ. ಮೃತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

SCROLL FOR NEXT