ವಿದೇಶ

ಫ್ಯಾಷನ್ ಜಗತ್ತಿಗೆ ತೃತೀಯಲಿಂಗಿಗಳು

Mainashree

ನ್ಯೂಯಾರ್ಕ್: ಫ್ಯಾಷನ್ ಜಗತ್ತು ಹೆಣ್ಣಿಗೆ ಮಾತ್ರಎಂಬ ಮಾತನ್ನು ಸುಳ್ಳುಮಾಡಲು ಪುರುಷರೂ ಮಾಡೆಲಿಂಗ್‍ಗೆ ಇಳಿದು ಸೈ ಅನಿಸಿಕೊಂಡು ಹಲವು ದಶಕಗಳೇ ಕಳೆದವು. ಇದೀಗ ಮಾಡೆಲಿಂಗ್ ಜಗತ್ತಿನಲ್ಲಿ ಇನ್ನೊಂದು ದೊಡ್ಡ ಮೈಲಿಗಲ್ಲು. ಬ್ಯಾಂಕಾಕ್ ಮೂಲದ ಕಂಪನಿಯೊಂದು ಲಾಸ್ ಏಂಜಲಿಸ್‍ನಲ್ಲಿ ಅತಿ ಶೀಘ್ರದಲ್ಲಿ ತೃತೀಯ ಲಿಂಗಿಗಳಿಗಾಗಿಯೇ ಒಂದು ರೂಪದರ್ಶಿ ಸಂಸ್ಥೆಯನ್ನು ತೆರೆಯಲಿದೆ.

ಆ್ಯಪಲ್ ಮಾಡೆಲ್ ಮ್ಯಾನೇಜ್‍ಮೆಂಟ್ ನಡೆಸುತ್ತಿರುವ ಈ ಸಂಸ್ಥೆಯಲ್ಲಿ ಈಗಾಗಲೇ ಆರು ತೃತೀಯಲಿಂಗಿಗಳು ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಲು ಆರಂಭಿಸಿದ್ದಾರೆ. ``ಹೆಣ್ಣು ಗಂಡು ಎಂಬುದು ಮುಖ್ಯವಲ್ಲ. ಮಾಡೆಲಿಂಗ್ ಬಗ್ಗೆ ಅವರಿಗಿರುವ ಸೆಳೆತ ಮತ್ತು ಬದ್ಧತೆ ಮುಖ್ಯ. ತೃತೀಯಲಿಂಗಿಗಳ ಸಂಖ್ಯೆಯ ಹೆಚ್ಚಳಕ್ಕೆ ಪ್ರೋತ್ಸಾಹಿಸುವುದು ನಮ್ಮ ಉದ್ದೇಶವಲ್ಲ. ಅವರೂ ಈ ಕ್ಷೇತ್ರದಲ್ಲಿ ಗೆಲ್ಲಬಲ್ಲರು ಎಂಬುದನ್ನು ತೋರಿಸುವುದು ನಮ್ಮ ಆಶಯ'' ಎಂದು ಕಂಪನಿಯ ಸಿಇಓ ಸಿಸಿಲಿಯೋ ಅಸುನ್ಸಿಯನ್ ಹೇಳಿದ್ದಾರೆ. ಕಳೆದ ನವೆಂಬರ್‍ನಿಂದಲೇ ಈ ಸಂಸ್ಥೆ ಥೈಲೆಂಡ್ ನಲ್ಲಿ ತನ್ನ ಕಾರ್ಯ ಆರಂಭಿಸಿದ್ದು, ಅಧಿಕೃತ ಚಾಲನೆ ಮಾತ್ರ ಆಗಬೇಕಿದೆ.

SCROLL FOR NEXT