ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಕ್ರಿಕೆಟಿಗ ಇಮ್ರಾನ್ ಖಾನ್‌ಗೆ ಅವರ ಮಾಜಿ ಪತ್ನಿ ವಿಷವುಣಿಸಲು ಯತ್ನಿಸಿದ್ದರೆ?

ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್ ಖಾನ್ ತನ್ನ ಪತ್ನಿ ರೆಹಾಂಗೆ ವಿಚ್ಛೇದನ ನೀಡಿರುವ ಬೆನ್ನಲ್ಲೇ ಈಗ ವಿಚ್ಛೇದನ ಪ್ರಕರಣಕ್ಕೆ...

ಇಮ್ರಾನ್ ಖಾನ್ - ರೆಹಾಂ ಖಾನ್
Rashmi Kasaragodu
Updated On : 5 Nov 2015, 7:44 am
ನವದೆಹಲಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್ ಖಾನ್ ತನ್ನ ಪತ್ನಿ  ರೆಹಾಂ ಖಾನ್ ಗೆ ವಿಚ್ಛೇದನ ನೀಡಿರುವ ಬೆನ್ನಲ್ಲೇ ಈಗ ವಿಚ್ಛೇದನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಸುದ್ದಿಪತ್ರಿಕೆಯೊಂದರ ವರದಿ ಪ್ರಕಾರ ರೆಹಾಂ, 62ರ ಹರೆಯದ ಇಮ್ರಾನ್‌ಗೆ ವಿಷವುಣಿಸಲು ಯತ್ನಿಸಿದ್ದಳಂತೆ. ಇಮ್ರಾನ್ ಖಾನ್‌ನ ರಾಜಕೀಯ ಆಸ್ತಿಯನ್ನು ಕಬಳಿಸುವ ಸಲುವಾಗಿ ರೆಹಾಂ ಈ ರೀತಿ ಮಾಡಿದ್ದಳು ಎನ್ನಲಾಗುತ್ತಿದೆ.
ಕಳೆದ ಅಕ್ಟೋಬರ್ 30ರಂದು ಇಮ್ರಾನ್ ಖಾನ್ ತನ್ನ ಪತ್ನಿಗೆ ವಿಚ್ಛೇದನ ನೀಡಿದ್ದರು.

Advertisement

Advertisement

ರೆಹಾಂ ಇಮ್ರಾನ್ ಅವರಿಗೆ ಕಿರುಕುಳ ನೀಡುತ್ತಿದ್ದಳು. ಅವರ ನಡುವೆ ಆಗಾಗ ಜಗಳಗಳು ನಡೆಯುತ್ತಿತ್ತು. ಹೀಗೆ ಸಂಬಂಧದಲ್ಲಿ ಬಿರುಕು ಬಂದ ಕಾರಣ ರೆಹಾಂ ಲಂಡನ್‌ನಲ್ಲಿರುವಾಗಲೇ ಇಮ್ರಾನ್ ವಿಚ್ಛೇದನಕ್ಕಾಗಿ ನೋಟಿಸ್ ಕಳಿಸಿದ್ದರು.
ಒಂದ್ಸಾರಿ ಅನಾರೋಗ್ಯದಿಂದ ಇಮ್ರಾನ್ ಆಸ್ಪತ್ರೆಗೆ ದಾಖಲಾದಾಗ ಅವರ ದೇಹದಲ್ಲಿ ಇಲಿವಿಷ ಪತ್ತೆಯಾಗಿತ್ತು ಎಂದು ಪಾಕ್ ಪತ್ರಕರ್ತ ಆರಿಫ್ ನಿಜಾಮಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments