ವಿದೇಶ

ಭಾರತದಲ್ಲಿ ಆಂತರಿಕ ಯುದ್ಧ ಎದುರಾಗಿದೆ: ಪಾಕ್ ದಿನಪತ್ರಿಕೆ ಸಂಪಾದಕೀಯ

Srinivas Rao BV

ಇಸ್ಲಾಮಾಬಾದ್: ಅಸಷ್ಣುತೆಯನ್ನು ವಿರೋಧಿಸಿ ಸಾಹಿತಿಗಳು ಪ್ರಶಸ್ತಿ ವಾಪಸ್ ನೀಡುತ್ತಿರುವುದರ ಬಗ್ಗೆ ಪಾಕಿಸ್ತಾನ ಪತ್ರಿಕೆ ಸಂಪಾದಕೀಯ ಪ್ರಕಟಿಸಿದ್ದು, ಭಾರತದಲ್ಲಿ ಆಂತರಿಕ ಯುದ್ಧ ಪ್ರಾರಂಭವಾಗಿದೆ ಎಂದು ಬರೆದಿದೆ.
ದ್ವೇಷದ ವಾತಾವರಣ ಎಂಬ ಸಂಪಾದಕೀಯ ಬರೆದಿರುವ ಡಾನ್ ಪತ್ರಿಕೆ, ಭಾರತದಲ್ಲಿ ದ್ವೇಷದ ವಾತಾವರಣ ನಿರ್ಮಾಣವಾಗಿರುವುದು ಅಪಾಯಕಾರಿಯಾಗಿದೆ ಎಂದು ಅಭಿಪ್ರಾಯಾಟ್ಟಿದೆ. ಭಾರತ-ಪಾಕಿಸ್ತಾನ ನಡುವೆ ಭಿನ್ನಾಭಿಪ್ರಾಯ ವಿರುವ ಸಂದರ್ಭದಲ್ಲಿ ಭಾರತ ತನ್ನಲ್ಲೇ ಆಂತರಿಕ ಯುದ್ಧ ಎದುರಿಸುತ್ತಿರುವಂತೆ ತೋರುತ್ತದೆ. ಭಾರತದಲ್ಲಿ ಉಂಟಾಗಿರುವ ಅಸಹಿಷ್ಣುತೆ ದಕ್ಷಿಣ ಏಷ್ಯಾದಲ್ಲಿ ಶಾಂತಿ ಅಥವಾ ಸ್ಥಿರತೆಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಡಾನ್ ಅಭಿಪ್ರಾಯಪಟ್ಟಿದೆ.
ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಾಹಿತಿಗಳು ಹೆಚ್ಚುತ್ತಿರುವ ಅಸಹಿಷ್ಣುತೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಭಾರತದ ಪ್ರತಿಷ್ಠಿತ ಸಂಸ್ಥೆಗಳು ನೀಡಿದ್ದ ಪ್ರಶಸ್ತಿಯನ್ನು ವಾಪಸ್ ನೀಡಲು ಪ್ರಾರಂಭಿಸಿದ್ದಾರೆ.  ಪಾಕಿಸ್ತಾನದಲ್ಲಿ ಧಾರ್ಮಿಕ ಹಿಂಸಾಚಾರದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ, ತಮ್ಮ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ಖಂಡಿಸಿಲ್ಲ. ದೇಶದ ಸಮಸ್ತ ಪ್ರಜೆಗಳಿಗೆ ನಾಯಕನಾಗಿರುವ ಭರವಸೆಯನ್ನು ಉಳಿಸಿಕೊಳ್ಳಲು ಪ್ರಧಾನಿ ಮೋದಿ ವಿಫಲರಾಗಿದ್ದಾರೆ ಎಂದು ಡಾನ್ ಸಂಪಾದಕೀಯ ಬರೆದಿದೆ.

SCROLL FOR NEXT