ಅಂಗದ್ ಪೌಲ್ (ಸಂಗ್ರಹ ಚಿತ್ರ) 
ವಿದೇಶ

8ನೇ ಮಹಡಿಯಿಂದ ಬಿದ್ದು ಸ್ವರಾಜ್ ಪೌಲ್ ಪುತ್ರನ ಸಾವು

ಎನ್ನಾರೈ ಕೈಗಾರಿಕೋದ್ಯಮಿ, ಲಂಡನ್‍ನ ಕೋಟ್ಯಧಿತಿಗಳಲ್ಲಿ ಒಬ್ಬರಾದ ಲಾರ್ಡ್ ಸ್ವರಾಜ್ ಪೌಲ್ ಅವರ ಪುತ್ರ ಅಂಗದ್ ಪೌಲ್ (45) ಅವರು ಭಾನುವಾರ ಲಂಡನ್‍ನ ತಮ್ಮ ಬಹುಅಂತಸ್ತಿನ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾರೆ...

ಲಂಡನ್: ಎನ್ನಾರೈ ಕೈಗಾರಿಕೋದ್ಯಮಿ, ಲಂಡನ್‍ನ ಕೋಟ್ಯಧಿತಿಗಳಲ್ಲಿ ಒಬ್ಬರಾದ ಲಾರ್ಡ್ ಸ್ವರಾಜ್ ಪೌಲ್ ಅವರ ಪುತ್ರ ಅಂಗದ್ ಪೌಲ್ (45) ಅವರು ಭಾನುವಾರ ಲಂಡನ್‍ನ ತಮ್ಮ
ಬಹುಅಂತಸ್ತಿನ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾರೆ.

8ನೇ ಮಹಡಿಯಿಂದ ಬಿದ್ದ ಕ್ಯಾಪರೋ ಗ್ರೂಪ್‍ನ ಸಿಇಒ ಅಂಗದ್ ತೀವ್ರ ಗಾಯಗೊಂಡು, ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಈ ಸಾವಿನ  ದಿನ ಕಾರಣಗಳ ಬಗ್ಗೆ ಯಾವುದೇ ಅನುಮಾನ ಮೂಡಿಲ್ಲ. ತನಿಖೆಯ ಬಳಿಕವಷ್ಟೇ ಸತ್ಯಾಂಶ ಹೊರಬೀಳಲಿದೆ ಎಂದು ಲಂಡನ್ ಪೊಲೀಸರು ತಿಳಿಸಿದ್ದಾರೆ.

ಉಕ್ಕಿನ ದರದಲ್ಲಾದ ಗಣನೀಯ ಇಳಿಕೆಯಿಂದಾಗಿ ಅಂಗದ್ ಅವರ ಕಂಪನಿ ಕ್ಯಾಪರೋ ಗ್ರೂಪ್ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿರುವ ಸಂದರ್ಭದಲ್ಲೇ ಇಂತಹುದೊಂದು ದುರ್ಘಟನೆ ಸಂಭವಿಸಿದೆ. ಕ್ಯಾಪರೋ ಗ್ರೂಪ್ ಭಾರತ ಸೇರಿದಂತೆ ವಿಶ್ವಾದ್ಯಂತ 40 ಕಂಪನಿಗಳನ್ನು ಹೊಂದಿದ್ದು, 10 ಸಾವಿರ ಮಂದಿ ನೌಕರರನ್ನು ಒಳಗೊಂಡಿದೆ. ವರ್ಷಕ್ಕೆ ಸುಮಾರು ಒಂದು ಶತಕೋಟಿ ಪೌಂಡ್‍ನಷ್ಟು ವಹಿವಾಟು ಕೂಡ ನಡೆಸುತ್ತಿದೆ. ಸೂಪರ್ ಫಾಸ್ಟ್ ಕಾರು ಉತ್ಪಾದನೆ, ಸಿನಿಮಾ, ವಿನ್ಯಾಸ, ಹೋಟೆಲ್, ಸ್ಟೀಲ್ ಪೈಪ್ ಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ
ಗುರುತಿಸಿಕೊಂಡಿದೆ.

ಇತ್ತೀಚೆಗೆ ತೀವ್ರ ಬಿಕ್ಕಟ್ಟಿಗೆ ಒಳಗಾದ ಕಂಪನಿ 450 ಮಂದಿಯನ್ನು ಕೆಲಸದಿಂದ ತೆಗೆದುಹಾಕಿತ್ತು. ಇನ್ನೂ 1,200 ಮಂದಿಯ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಗ್ರೂಪ್‍ನ 16 ಕಂಪನಿಗಳು ದಿವಾಳಿಯಾಗಿ ಮುಚ್ಚುವ ಸ್ಥಿತಿ ತಲುಪಿದೆ. ಇಂತಹ ಬಿಕ್ಕಟ್ಟಿನ ನಡುವೆಯೇ ಸ್ವರಾಜ್ ಅವರಿಗೆ ಮಗನ ಸಾವು ಆಘಾತ ಉಂಟು ಮಾಡಿದೆ. ಅಂಗದ್ 10 ವರ್ಷಗಳ ಹಿಂದೆ ವಕೀಲೆ ಮಿಶೆಲ್ ಬೋನ್‍ರನ್ನು ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಅಂಗದ್‍ರ ತಂದೆ ಸ್ವರಾಜ್ ಪೌಲ್ ಲಂಡನ್‍ನ 47ನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಅ.16ರ CJPಯ ಪ್ರತಿಭಟನೆಗೆ ತಡೆ ನೀಡಲು ಹೈಕೋರ್ಟ್ ನಕಾರ!

ಕಾಕ್ರೋಚ್ ಜನತಾ ಪಾರ್ಟಿ, ಕಾಂಗ್ರೆಸ್ ಎರಡೂ ಒಂದೇ; ಇಲ್ಲಿ ನಿಮ್ಮನ್ನು ಯಾರೂ ಬಂಧಿಸಲ್ಲ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ!

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

Indian Stock Market: ಕೊನೆಗೂ ಪುಟಿದಿದ್ದ ಭಾರತೀಯ ಷೇರು ಮಾರುಕಟ್ಟೆ, ಸೆನ್ಸೆಕ್ಸ್ ದಾಖಲೆಯ ಏರಿಕೆ