ನವದೆಹಲಿ: ಭಾರತದಲ್ಲಿ ವಾಣಿಜ್ಯ ಬಾಡಿಗೆ ತಾಯ್ತನಕ್ಕೆ ನಿಷೇಧಿಸಲು ಕೇಂದ್ರ ಮುಂದಾಗಿದ್ದು, ಸರೋಗಸಿಗಾಗಿ ಭಾರತಕ್ಕೆ ಭೇಟಿ ನೀಡುವ ವಿದೇಶಿಗಳಿಗೆ ವೀಸಾ ನೀಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ವಿದೇಶಿ ದಂಪತಿಗಳು ಭಾರತದ ಬಾಡಿಗೆ ತಾಯಂದಿರ ಮೂಲಕ ಮಗುವನ್ನು ಪಡೆಯುವುದಕ್ಕೆ ಭಾರತಕ್ಕೆ ಭೇಟಿ ನೀಡುತ್ತಾರೆ. ಇದು ಇತ್ತೀಚೆಗೆ ವ್ಯಾಪಾರವಾಗಿಬಿಟ್ಟಿದೆ. ಭಾರತ ಸರೋಗಸಿ ಪ್ರವಾಸಿ ಸ್ಥಳವಾಗಿ ರೂಪುಗೊಳ್ಳುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.
ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ವಿದೇಶಿಗರಿಗೆ ಭಾರತೀಯರು ಬಾಡಿಗೆ ತಾಯಂದಿರಾಗಲು ಆಸ್ಪದ ನೀಡದಿರಲು ನಿರ್ಧರಿಸಿ, ವಿದೇಶಿಗರಿಗೆ ವೀಸಾ ನೀಡುವಲ್ಲಿ ಷರತ್ತು ವಿಧಿಸಿದೆ.
ಈಗಾಗಲೇ ಸರೋಗಸಿಗಾಗಿ ವೀದೇಶಿಗರ ವೀಸಾಗೆ ಅನುಮತಿ ನೀಡಿದ್ದರೆ, ಅದನ್ನು ಕೂಡಲೇ ರದ್ದುಗೊಳಿಸಬೇಕು. ಅಲ್ಲದೇ, ಈಗಾಗಲೇ ಸರೋಗಸಿ ಪ್ರವಾಸಿದಲ್ಲಿರುವ ವಿದೇಶಿಯರಿಗೆ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಮಿಷನ್ಸ್ ಅಬ್ರಾಡ್ ಮತ್ತು ವಿದೇಶಿಯರಿಗೆ ಪ್ರಾದೇಶಿಕ ನೋಂದಣಿ ಕಛೇರಿಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ.